ಡಿ. 24 ರಂದು ಭಾರತ್ ಜೊಡೊ ಹೊಸದಿಲ್ಲಿ ಪ್ರವೇಶ: ರಾಹುಲ್ ಜೊತೆ ಹೆಜ್ಜೆ ಹಾಕಲಿರುವ ಕಮಲ್ ಹಾಸನ್
ಹೊಸದಿಲ್ಲಿ, ಡಿ.18: ಭಾರತ್ ಜೋಡೋ ಯಾತ್ರಾ ಡಿಸೆಂಬರ್ 24 ರಂದು ಹೊಸದಿಲ್ಲಿ ತಲುಪಲಿದ್ದು, ಅಂದು ಖ್ಯಾತ ಚಿತ್ರನಟ ಕಮಲ್ ಹಾಸನ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಜೊತೆ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಹೊಸದಿಲ್ಲಿಯನ್ನು ತಲುಪಿದ ಬಳಿಕ ಭಾರತ್ ಜೋಡೊ ಯಾತ್ರೆಗೆ ಎಂಟು ದಿನಗಳ ಬಿಡುವು ಪಡೆಯಲಿದೆ. ಆನಂತರ ಅದು ಬಿಜೆಪಿ ಆಡಳಿತ ರಾಜ್ಯಗಳಾದ ಉತ್ತರಪ್ರದೇಶ, ಹರ್ಯಾಣಕ್ಕೆ ತೆರಳಲಿದೆ. ಜನವರಿಯಲ್ಲಿ ಅದು ಪಂಜಾಬ್ ರಾಜ್ಯವನ್ನು ಪ್ರವೇಶಿಸಲಿದ್ದು, ಆನಂತರ ಜಮ್ಮುಕಾಶ್ಮೀರಕ್ಕೆ ಸಾಗಲಿದೆ ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೊಡೊ ಯಾತ್ರೆಯು ಈಗಾಗಲೇ ಎಂಟು ರಾಜ್ಯಗಳಲ್ಲಿ ಸಂಚರಿಸಿದ್ದು, ಶುಕ್ರವಾರ 100 ದಿನಗಳನ್ನು ಪೂರ್ತಿಗೊಳಿಸಲಿದೆ. ಇದರ ಅಂಗವಾಗಿ ಕಾಂಗ್ರೆಸ್ ಪಕ್ಷವು ಸಂಗೀತಗೋಷ್ಠಿಯನ್ನು ಆಯೋಜಿಸಿದ್ದು, ಸುನಿಧಿ ಚೌಹಾಣ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Next Story