ಬೆಳ್ತಂಗಡಿ: ವ್ಯಕ್ತಿಯ ಅನುಮಾನಾಸ್ಪದ ಸಾವು, ಕೊಲೆ ಶಂಕೆ

ಬೆಳ್ತಂಗಡಿ, ಡಿ.18: ರಾತ್ರಿ ಶೆಡ್‌ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರ ಮೃತದೇಹವು ಇಂದು ಬೆಳಗ್ಗೆ ತೋಟದ ಬದಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶಿಬಾಜೆಯಲ್ಲಿ ನಡೆದಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಶಿವಾಜೆ ಗ್ರಾಮದ ನಿವಾಸಿ ಶ್ರೀಧರ ಎಂದು ಗುರುತಿಸಲಾಗಿದೆ.
ಶ್ರೀಧರರಿಗೆ ಶನಿವಾರ ಸಂಜೆ ಸ್ಥಳೀಯರಾದ ತಿಮ್ಮಪ್ಪಪೂಜಾರಿ, ಲಕ್ಷ್ಮಣ ಪೂಜಾರಿ, ಆನಂದಗೌಡ ಹಾಗೂ ಮಹೇಶ್ ಪೂಜಾರಿ ಎಂಬವರು ಹಲ್ಲೆ ನಡೆಸಿರುವುದನ್ನು ಸ್ಥಳೀಯರು ನೋಡಿದ್ದಾರೆನ್ನಲಾಗಿದೆ. ಬಳಿಕ ಶ್ರೀಧರ್ ತಾನು ಕೆಲಸ ಮಾಡುವ ಶೆಡ್‌ಗೆ ತೆರಳಿ ಮಲಗಿದ್ದು, ಆದರೆ ಬೆಳಗ್ಗೆ ಶ್ರೀಧರ ಶೆಡ್‌ನಲ್ಲಿ ಇಲ್ಲದಿರುವುದನ್ನು ಕಂಡು ಹುಡುಕಾಟ ನಡೆಸಿದಾಗ ತೋಟದ ಬದಿಯಲ್ಲಿ ಶ್ರೀಧರನ ಮೃತದೇಹ ಬಿದ್ದಿತ್ತು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ತೋಟದ ಬೇಲಿ ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದು, ಹಗಲು ಹಲ್ಲೆ ನಡೆಸಿದ ತಂಡವೇ ರಾತ್ರಿ ಅಕ್ರಮವಾಗಿ ಶೆಡ್‌ಗೆ ಪ್ರವೇಶಿಸಿ ಶ್ರೀಧರ್‌ರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿ ಶ್ರೀಧರ್ ರೊಂದಿಗೆ ಕೆಲಸ ಮಾಡುವ ಹರೀಶ್ ಮುಗೇರ ಎಂಬವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ .
ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಹಿರಿಯಅಧಿಕಾರಿಗಳುಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.