Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ.....

ಓ ಮೆಣಸೇ.....

ಪಿ.ಎ. ರೈಪಿ.ಎ. ರೈ19 Dec 2022 12:05 AM IST
share
ಓ ಮೆಣಸೇ.....

ನಾನು ಯಾವುದನ್ನೂ ಬಯಸಲಿಲ್ಲ, ಎಲ್ಲವೂ ಹುಡುಕಿಕೊಂಡು ಬಂದಿದೆ
-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
  ಮುಂದೆ ಕೂಡಾ ಎಲ್ಲವೂ ಹುಡುಕಿಕೊಂಡು ಬರುತ್ತದೆಂಬ ನಂಬಿಕೆ ನಿಷ್ಕ್ರಿಯೆಗೆ ನೆಪವಾಗಬಾರದು.
------------------------------------
 ಸಲಾಂ ಆರತಿ ಹೆಸರನ್ನು ದೀಪ ನಮಸ್ಕಾರ ಎಂದು ಬದಲಾವಣೆ ಮಾಡಿದ್ದು ಅತ್ಯಂತ ಸೂಕ್ತವಾಗಿದೆ -ಆರಗ ಜ್ಞಾನೇಂದ್ರ, ಸಚಿವ
  ನಾವೆಲ್ಲಾ ಒಂದೆಂಬ ಆಧಾರದಲ್ಲಿ ಬ್ರಾಹ್ಮಣ್ಯವನ್ನು ಶೂದ್ರಣ್ಯ ಎಂದು ಕರೆದರೆ ಸೂಕ್ತವಾಗಿರುತ್ತದೆಯೇ?
------------------------------------
 ಭಾರತ ಜಗತ್ತಿಗೇ ಮಾರ್ಗದರ್ಶನ ನೀಡಬಲ್ಲ ದೇಶ
-ಬಿ.ಸಿ.ನಾಗೇಶ್, ಸಚಿವ
  ಸದ್ಯ ಯಾವುದೇ ಸಮಾಜ ಹೇಗೆ ಇರಬಾರದು ಎಂಬುದಕ್ಕೆ ಭಾರತ ಒಳ್ಳೆಯ ಮಾದರಿಯಾಗಿದೆ.
------------------------------------
 ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಮನೆಗೆ ಕಳುಹಿಸುವ ಕಾರ್ಯಕ್ರಮವಿದೆ
-ಬಸವರಾಜ ಬೊಮ್ಮಾಯಿ, ಸಿಎಂ
 ‘ಅನುಗ್ರಹ’ ಎಂಬ ಮನೆಗೆ ತೆರಳಲು ಅವರು ಕೂಡಾ ಸಿದ್ಧರಾಗಿದ್ದಾರೆ.
------------------------------------
 ಕರ್ನಾಟಕದಲ್ಲೂ ಗುಜರಾತ್ ಮಾದರಿಯ ಚುನಾವಣೆ ನಡೆಸುವಂತೆ ತುಂಬಾ ಒತ್ತಾಯ ಇದೆ -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
  ಅಂದರೆ ಮತದಾರ ಯಾವ ಪಕ್ಷಕ್ಕೆ ಓಟು ಹಾಕಿದರೂ ಆಡಳಿತ ಪಕ್ಷವೇ ಗೆಲ್ಲುವ ಮಾದರಿಯೇ?
------------------------------------
 ವಿಧಾನ ಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಇನ್ನು 15 ದಿನಕ್ಕೊಮ್ಮೆ ರಾಜ್ಯಕ್ಕೆ ಬರುತ್ತಾರೆ
-ಆರ್.ಅಶೋಕ್, ಸಚಿವ
  ಮೋದಿಯವರ ವಿರುದ್ಧ ನೀವೇ ಇಷ್ಟೊಂದು ಗಂಭೀರ ಆರೋಪ ಮಾಡಿದರೆ, ಅವರ ವಿರೋಧಿಗಳ ಬಳಿ ಹೇಳುವುದಕ್ಕೆ ಏನು ಉಳಿದಿರುತ್ತೆ?
------------------------------------
 ಎಲ್ಲ ಕಡೆಯೂ ಗುಜರಾತ್ ಮಾದರಿ ನಡೆಯದು
-ಜಗದೀಶ್ ಶೆಟ್ಟರ್, ಮಾಜಿ ಸಿಎಂ
  ಹಾಗಂತ ಹಿರೋಷಿಮಾ ಮಾದರಿಯ ಪ್ರಯೋಗಕ್ಕೆ ಇಳಿಯಬೇಕು ಅನ್ನುತ್ತೀರಾ?
------------------------------------
 ರಾಜ್ಯ ಸರಕಾರ ಘೋಷಿಸಿರುವ ಮೀಸಲು ಹೆಚ್ಚಳದಿಂದ ಹಿಂದೆ ಸರಿಯುವ ಮಾತೇ ಇಲ್ಲ -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
   ಬ್ರಾಹ್ಮಣ ತುಷ್ಟೀಕರಣವನ್ನೇ ಪರಮ ಧ್ಯೇಯವಾಗಿಸಿಕೊಂಡಿರುವ ಪಕ್ಷದಿಂದ ಜನ ಅದನ್ನು ನಿರೀಕ್ಷಿಸುವುದೂ ಇಲ್ಲ.

------------------------------------
 ಪ್ರತಿಯೊಂದು ಹೆಜ್ಜೆ ಇಡುವಾಗಲೂ ಬೇರೆ ಬೇರೆ ರಾಜ್ಯಗಳಲ್ಲಿ ಏನಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಬದಲಾವಣೆಗೆ ಮುಂದಾಗಬೇಕು -ದೇವೇಗೌಡ, ಮಾಜಿ ಪ್ರಧಾನಿ
  ಬೆಂಬಲಿತ ಸರಕಾರ ರಚನೆಗೆ ಇರುವ ಅವಕಾಶಗಳನ್ನು ಉಳಿಸಿಕೊಂಡು ಮುನ್ನಡೆಯಬೇಕು.

------------------------------------

 ಅಡಿಕೆ ಮರಗಳ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸರಕಾರ ಬದ್ಧವಾಗಿದ್ದು, ಇಲಾಖೆಯಿಂದ ದೋಟಿ, ಏಣಿ ಉಚಿತವಾಗಿ ಒದಗಿಸಲಾಗುವುದು
-ಮುನಿರತ್ನ, ಸಚಿವ
  ನಷ್ಟ ಮತ್ತು ಸಾಲದ ಹೊರೆ ಹೊರಲಾಗದೆ ನೇಣಿಗೆ ಶರಣಾಗುತ್ತಿರುವ ಬೆಳೆಗಾರರಿಗೆ ಉಚಿತ ನೇಣುಹಗ್ಗವನ್ನೂ ಒದಗಿಸುತ್ತೀರಾ?
------------------------------------
 ಮುಂದಿನ ವಿಧಾನಸಭೆ ಚುನಾವಣೆಗೆ ನಮ್ಮ ಬತ್ತಳಿಕೆಯಲ್ಲಿರುವ ಶಸ್ತ್ರಗಳ ಬಗ್ಗೆ ಈಗಲೇ ಏನೂ ಹೇಳಲಾಗದು -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
  ಸದ್ಯ ಕಾಣಿಸುತ್ತಿರುವುದು ಮುಖ್ಯಮಂತ್ರಿ ಪದಕ್ಕಾಗಿ ನಡೆಯುತ್ತಿರುವ ಹೊಲಸು ಒಳಜಗಳ ಮಾತ್ರ.
------------------------------------
 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹಂತಹಂತವಾಗಿ ರದ್ದುಗೊಳಿಸಬೇಕು -ಸುಶೀಲ್ ಕುಮಾರ್, ಸಂಸದ
  ದೇಶದ ಜನ ಸಂಖ್ಯೆಯನ್ನೇ ಹಂತಹಂತವಾಗಿ ಇಲ್ಲವಾಗಿಸುವುದನ್ನೇ ಧ್ಯೇಯವಾಗಿಸಿಕೊಂಡವರಿಗೆ ಕಾಗದದ ನೋಟುಗಳು ಯಾವ ಲೆಕ್ಕ?
------------------------------------
 ಕರ್ನಾಟಕದ ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬ್ರೇಕ್ ಬೀಳಲಿದೆ
-ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
  ದ್ವೇಷ ರಾಜಕಾರಣ ಭ್ರಷ್ಟ ರಾಜಕಾರಣ ಇತ್ಯಾದಿಗಳಿಗೆಲ್ಲಾ ಆಕ್ಸಿಲರೇಟರ್ ಮಾತ್ರವೇ?
------------------------------------
 ರಾಜ್ಯ ಚುನಾವಣೆಯಲ್ಲಿ ಮೋದಿ, ಅಮಿತ್ ಶಾ ಮ್ಯಾಜಿಕ್ ಯಾವುದೇ ಕೆಲಸ ಮಾಡದು -ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
  ಆದ್ದರಿಂದ ಅವರ ಪರವಾಗಿ ಬೇರೆ ಬಗೆಯ ಯಾವುದಾದರೂ ಮ್ಯಾಜಿಕ್ ಮಾಡುವ ಸುಪಾರಿ ತೆಗೆದುಕೊಂಡಿದ್ದೀರಾ?
------------------------------------
 ನನಗೊಮ್ಮೆ ಶಾಸಕನಾಗುವ ಅವಕಾಶ ಕೊಟ್ಟು ನೋಡಿ ಹಿಂದುತ್ವ ಎಂದರೆ ಏನೆಂದು ಸಾಬೀತು ಮಾಡಿ ತೋರಿಸುತ್ತೇನೆ
-ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ಸಂಸ್ಥಾಪಕ
  ಮನದಾಳದಲ್ಲಿ ಬಚ್ಚಿಟ್ಟಿದ್ದ ದುರಾಸೆಗಳೆಲ್ಲಾ ಹೀಗೆ ಒಂದೊಂದಾಗಿ ಪ್ರಕಟವಾಗುತ್ತಿರಲಿ.

------------------------------------
 ನಮ್ಮ ಮೊದಲ ಗುರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು
-ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ
  ಸಮಾಜದ ಗತಿ ಏನಾದರೇನಂತೆ.
------------------------------------
 ಅಲ್ಪಸಂಖ್ಯಾತರಲ್ಲೇ ಅಲ್ಪಸಂಖ್ಯಾತರಾಗಿರುವ ಬ್ರಾಹ್ಮಣ ಸಮುದಾಯವನ್ನು ಎಲ್ಲ ವಿಚಾರಕ್ಕೂ ದೂಷಿಸಲಾಗುತ್ತದೆ
-ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ
  ಅವರಿಗಾಗಿ ಒಂದು ಆಯೋಗ ಮಾಡಿ ಅವರ ರಕ್ಷಣೆಗೆ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು.
------------------------------------
 ರಾಜ್ಯ ಹಾಗೂ ಕೇಂದ್ರ ಸರಕಾರಗಳು ಆರೋಗ್ಯ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ತಂದು ಕ್ರಾಂತಿ ಮಾಡಿದೆ -ಎಸ್.ಅಂಗಾರ, ಸಚಿವ
  ಸಾಮಾಜಿಕ ಕ್ಷೇತ್ರದಲ್ಲಿ ಎಲ್ಲೆಡೆ ವ್ಯಾಪಿಸಿದ್ದು ಭ್ರಾಂತಿ ಮಾತ್ರ.
------------------------------------
 ನನ್ನ ಹಾಗೂ ಎಚ್.ಡಿ.ದೇವೇಗೌಡರದ್ದು ತಂದೆ-ಮಗನ ಸಂಬಂಧ
-ವೈ.ಎಸ್.ವಿ. ದತ್ತಾ, ಮಾಜಿ ಶಾಸಕ
  ಪಾಪ, ಕುಮಾರಸ್ವಾಮಿಯವರಿಗೆ ಎಷ್ಟೊಂದು ಪ್ರತಿಸ್ಪರ್ಧಿಗಳು!
------------------------------------
ಪಕ್ಷದ ವರಿಷ್ಠರು ಮಂತ್ರಿಯಾಗುವಂತೆ ಸೂಚಿಸಿದರೆ ಆಗುತ್ತೇನೆ. ಇಲ್ಲದಿದ್ದರೆ ಶಾಸಕನಾಗಿಯೇ ಇರುತ್ತೇನೆ -ಕೆ.ಎಸ್.ಈಶ್ವರಪ್ಪ, ಶಾಸಕ
  ಶಾಸಕನಾಗುವುದು ಕೂಡಾ ಬೇಡ ಅಂದು ಬಿಟ್ಟರೆ ಏನು ಮಾಡುತ್ತೀರಿ ಎಂಬುದನ್ನೂ ಹೇಳಿಬಿಡಿ ಸಾರ್.
------------------------------------
 ಬದ್ಧತೆ ಇದ್ದರೆ ಸಚಿವ ಶ್ರೀರಾಮುಲು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಫರ್ಧಿಸಿ ಗೆದ್ದು ತೋರಿಸಲಿ
-ವಿ.ಎಸ್.ಉಗ್ರಪ್ಪ, ಕೆಪಿಸಿಸಿ ಉಪಾಧ್ಯಕ್ಷ
  ದಯವಿಟ್ಟು ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಬೇಡಿ ಎಂದು ಪರೋಕ್ಷ ಮನವಿ ಇರಬೇಕು.

------------------------------------
 ಚರ್ಮಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟರೆ ಅದರ ಮಾಲಕರಿಗೆ ಪರಿಹಾರ ನೀಡಲು 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ -ಪ್ರಭು ಚವ್ಹಾಣ್, ಸಚಿವ
  ಒಟ್ಟಿನಲ್ಲಿ ಗಂಟು ಕಳ್ಳರಿಗೆ ಹಬ್ಬ.

------------------------------------
 ಪಕ್ಷ ನನಗೆ ಯಾವ ಸವಾಲು, ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಸಿದ್ಧ
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ
  ಜವಾಬ್ದಾರಿ ಕೊಡದೆ ಇದ್ದರೆ ಅದನ್ನು ಸಹಿಸಿಕೊಳ್ಳಲು ಸಿದ್ಧರಿದ್ದೀರಾ?

------------------------------------
 ಮುಂದಿನ ಲೋಕಸಭೆ ಚುನಾವಣೆಯಲ್ಲಿ ತೃತೀಯರಂಗ ಇರುವುದಿಲ್ಲ, ಪ್ರಧಾನ ರಂಗವೇ ಇರುತ್ತದೆ -ನಿತೀಶ್ ಕುಮಾರ್, ಬಿಹಾರ ಸಿಎಂ
   ಅಷ್ಟರಲ್ಲಿ ಕಳ್ಳಭಟ್ಟಿ ಸಾರಾಯಿ ಸೇವಿಸಿದ ಮತದಾರರು ಉಳಿದಿರುತ್ತಾರೆಯೇ?
------------------------------------
 ಬಿಜೆಪಿಯಲ್ಲಿರುವವರು ಪುಣ್ಯಾತ್ಮರು. ಕುಡ್ಲು, ಮಚ್ಚು ಹಿಡಿಯುವವರಲ್ಲ
-ನಾರಾಯಣಗೌಡ, ಸಚಿವ
  ಅವರು ಅವನ್ನೆಲ್ಲ ಬಡವರ ಕೈಗೆ ಕೊಟ್ಟು ದುರಾತ್ಮರ ಕೃತ್ಯಗಳನ್ನು ಮಾಡಿಸುತ್ತಾರಷ್ಟೆ.

------------------------------------
 ಬಡವರಿಗೆ ತೊಂದರೆಯಾದಾಗ ನಾನೂ ಗೂಂಡಾಗಿರಿ ಮಾಡುತ್ತಿದ್ದೆ -ಶ್ರೀರಾಮುಲು, ಸಚಿವ
  ಈಗ ಬಡವರಿಗೆ ತೊಂದರೆ ಮಾಡಲು ಗೂಂಡಾಗಿರಿ ಮಾಡುತ್ತಿದ್ದೀರಂತೆ!

share
ಪಿ.ಎ. ರೈ
ಪಿ.ಎ. ರೈ
Next Story
X