Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಣ್ಣಾಮಲೈ ಕೈಯಲ್ಲಿ ಫ್ರಾನ್ಸ್ ಮೂಲದ...

ಅಣ್ಣಾಮಲೈ ಕೈಯಲ್ಲಿ ಫ್ರಾನ್ಸ್ ಮೂಲದ ದುಬಾರಿ ಕೈಗಡಿಯಾರ: ರಾಷ್ಟ್ರೀಯತೆಯನ್ನು ಪ್ರಶ್ನಿಸಿದ ಡಿಎಂಕೆ ಸಚಿವ

19 Dec 2022 6:40 PM IST
share
ಅಣ್ಣಾಮಲೈ ಕೈಯಲ್ಲಿ ಫ್ರಾನ್ಸ್ ಮೂಲದ ದುಬಾರಿ ಕೈಗಡಿಯಾರ: ರಾಷ್ಟ್ರೀಯತೆಯನ್ನು ಪ್ರಶ್ನಿಸಿದ ಡಿಎಂಕೆ ಸಚಿವ

ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅವರ ಕೈಯಲ್ಲಿರುವ ವಿಶೇಷ ಆವೃತ್ತಿಯ ದುಬಾರಿ ರಫೇಲ್ ಕೈಗಡಿಯಾರ ವಿವಾದವನ್ನು ಸೃಷ್ಟಿಸಿದೆ. ಶನಿವಾರ ಸರಣಿ ಟ್ವೀಟ್ಗಳನ್ನು ಮಾಡಿರುವ ಡಿಎಂಕೆ ನಾಯಕ ಹಾಗೂ ಸಚಿವ ಸೆಂಥಿಲ್ ಬಾಲಾಜಿ, ‘ತನ್ನಲ್ಲಿರುವ ಆಸ್ತಿ ನಾಲ್ಕು ಆಡುಗಳು ಮಾತ್ರ ಎಂದು ಹೇಳಿಕೊಳ್ಳುತ್ತಿರುವ ಅಣ್ಣಾಮಲೈ ಫ್ರೆಂಚ್ ಕಂಪನಿಯು ತಯಾರಿಸಿರುವ ದುಬಾರಿ ವಾಚ್ ಅನ್ನು ಖರೀದಿಸಿದ್ದು ಹೇಗೆ’ ಎಂದು ಪ್ರಶ್ನಿಸಿದ್ದಾರೆ. ಕಂಪನಿಯು ಈ ಆವೃತ್ತಿಯಲ್ಲಿ ಕೇವಲ 500 ವಾಚ್ಗಳನ್ನು ತಯಾರಿಸಿದ್ದು, ಪ್ರತಿ ವಾಚ್ಗೂ ಐದು ಲ.ರೂ.ಗಿಂತ ಅಧಿಕ ಬೆಲೆಯಿದೆ ಎಂದೂ ಹೇಳಿರುವ ಬಾಲಾಜಿ, ವಾಚ್ ಖರೀದಿಯ ಪಾವತಿಯನ್ನು ತೋರಿಸುವಂತೆ ಸವಾಲು ಹಾಕಿದ್ದಾರೆ. ಬಿಜೆಪಿ ಅಧ್ಯಕ್ಷರ ರಾಷ್ಟ್ರವಾದವನ್ನೂ ಅವರು ಪ್ರಶ್ನಿಸಿದ್ದಾರೆ.

ರಫೇಲ್ ಫ್ರೆಂಚ್ ಕಂಪನಿ ಡಸಾಲ್ಟ್ ಏವಿಯೇಷನ್ ತಯಾರಿಕೆಯ ಯುದ್ಧವಿಮಾನವನ್ನು ಸೂಚಿಸುತ್ತದೆ. ಡಿಎಂಕೆ ಸಚಿವರ ಟ್ವೀಟ್ಗಳು ರಫೇಲ್ ವ್ಯವಹಾರದ ವಿವಾದವನ್ನು ನೆನಪಿಸಿವೆ. ರಫೇಲ್ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಸೆಂಥಿಲ್ ಆರೋಪಕ್ಕೆ ಉತ್ತರಿಸಲು ರವಿವಾರ ಸುದ್ದಿಗೋಷ್ಠಿಯನ್ನು ಕರೆದಿದ್ದ ಅಣ್ಣಾಮಲೈ, ‘ನಾನು ಧರಿಸಿರುವ ವಾಚ್ ಅನ್ನು ಭಾರತವು ರಫೇಲ್ ಯುದ್ಧವಿಮಾನಗಳಿಗೆ ಬೇಡಿಕೆ ಸಲ್ಲಿಸಿದಾಗ ತಯಾರಿಸಲಾಗಿತ್ತು. ಅದನ್ನು ವಿಮಾನದ ಬಿಡಿಭಾಗಗಳಿಂದ ನಿರ್ಮಿಸಲಾಗಿದೆ. ಇಂತಹ ಕೇವಲ 500 ವಾಚ್ಗಳಿದ್ದು,ಅದು ರಫೇಲ್ ವಿಶೇಷ ಆವೃತ್ತಿ ಎಂದು ಕರೆಯಲಾಗುವ ಸಂಗ್ರಾಹಕರ ಆವೃತ್ತಿಯಾಗಿದೆ. ನನಗೆ ರಫೇಲ್ ವಿಮಾನವನ್ನು ಹಾರಿಸುವ ಅವಕಾಶ ಸಿಗಲಿಲ್ಲ, ಹೀಗಾಗಿ ಓರ್ವ ರಾಷ್ಟ್ರವಾದಿಯಾಗಿ ನಾನು ರಫೇಲ್ ವಾಚ್ ಧರಿಸಿದ್ದೇನೆ. ನನ್ನ ಜೀವವಿರುವರೆಗೂ ಈ ವಾಚ್ ಅನ್ನು ನಾನು ಧರಿಸುತ್ತೇನೆ. ವಿಶ್ವದಲ್ಲಿ ಬೇರೆ ಯಾರು ಈ ವಾಚ್ ಖರೀದಿಸುತ್ತಾರೆ? ಓರ್ವ ಭಾರತೀಯ ಮಾತ್ರ ಅದನ್ನು ಖರೀದಿಸಬಲ್ಲ. ನಾನು ರಾಷ್ಟ್ರವಾದಿಯಾಗಿರುವುದರಿಂದ ನನ್ನ ದೇಶಕ್ಕಾಗಿ ಡಸಾಲ್ಟ್ ರಫೇಲ್ ವಿಮಾನದ ಬಿಡಿಭಾಗಗಳಿಂದ ತಯಾರಿಸಿರುವ ಈ ವಾಚ್ ಅನ್ನು ಧರಿಸಿದ್ದೇನೆ. ನಾನು ವಿಭಜನೆಯ ಬಗ್ಗೆ ಮಾತನಾಡುವ ವ್ಯಕ್ತಿಯಲ್ಲ’ ಎಂದು ಹೇಳಿದರು.

ತನ್ನ ಟ್ವೀಟ್ ಮೂಲಕ ಅಣ್ಣಾಮಲೈ ಸುದ್ದಿಗೋಷ್ಠಿಗೆ ಪ್ರತಿಕ್ರಿಯಿಸಿರುವ ಬಾಲಾಜಿ, ಅಣ್ಣಾಮಲೈ ಅವರೇ ರಫೇಲ್ ವಿವಾದವನ್ನು ಜನರಿಗೆ ನೆನಪಿಸಿದ್ದಾರೆ. ಹಲವಾರು ಲ.ರೂ.ಗಳ ಮೌಲ್ಯದ ವಿದೇಶಿ ನಿರ್ಮಿತ ವಾಚ್ ಅನ್ನು ಧರಿಸುವುದು ರಾಷ್ಟ್ರವಾದವೇ? ಅದು ಮೇಕ್ ಇನ್ ಇಂಡಿಯಾ ಆಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಅಣ್ಣಾಮಲೈ ವಾಚ್ ನ ಬಿಲ್ ತೋರಿಸುತ್ತಾರೆಯೇ ಇಲ್ಲವೇ ಎಂದೂ ಅವರು ಕೇಳಿದ್ದಾರೆ.

share
Next Story
X