ಡಿ.21ರಿಂದ ಗುಜರಾತ್‌ನ ಉಡ್ನಾ ಜಂಕ್ಷನ್- ಮಂಗಳೂರು ಜಂಕ್ಷನ್ ನಡುವೆ ಚಳಿಗಾಲದ ವಿಶೇಷ ರೈಲು

ಉಡುಪಿ, ಡಿ.19: ಗುಜರಾತ್‌ನ ಸೂರತ್ ಬಳಿಯ ಉಡ್ನಾ ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಕ್ರಿಸ್ಮಸ್ ಹಾಗೂ ಚಳಿಗಾಲದ ಪ್ರಯುಕ್ತ ವಿಶೇಷ ದರದಲ್ಲಿ ವಾರಕ್ಕೆ ಎರಡು ಬಾರಿ ವಿಶೇಷ ರೈಲನ್ನು ಪಶ್ಚಿಮ ರೈಲ್ವೆಯ ಸಹಯೋಗದೊಂದಿಗೆ ಓಡಿಸಲು ಕೊಂಕಣ ರೈಲ್ವೆ ನಿರ್ಧರಿಸಿದೆ.
ರೈಲು ನಂ.09057 ಉಡ್ನಾ ಜಂಕ್ಷನ್- ಮಂಗಳೂರು ಜಂಕ್ಷನ್ ನಡುವೆ ವಾರಕ್ಕೆರಡು ಬಾರಿ ವಿಶೇಷ ದರದಲ್ಲಿ ಡಿ.21ರಿಂದ ಜನವರಿ 1ರವರೆಗೆ ಓಡುವ ರೈಲು ಪ್ರತಿ ಬುಧವಾರ ಮತ್ತು ರವಿವಾರ ರಾತ್ರಿ 8:00ಗಂಟೆಗೆ ಉಡ್ನಾದಿಂದ ನಿರ್ಗಮಿಸಲಿದ್ದು, ಮರುದಿನ ಸಂಜೆ 6:30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ಅದೇ ರೀತಿ ರೈಲು ನಂ.09058 ಮಂಗಳೂರು ಜಂಕ್ಷನ್-ಉಡ್ನಾ ಜಂಕ್ಷನ್ ವಾರಕ್ಕೆರಡು ಬಾರಿ ಸಂಚರಿಸುವ ವಿಶೇಷ ದರದ ವಿಶೇಷ ರೈಲು ಡಿ.22ರಿಂದ ಜನವರಿ 2ರವರೆಗೆ ಪ್ರತಿ ಗುರುವಾರ ಮತ್ತು ಸೋಮವಾರ ರಾತ್ರಿ 8:45ಕ್ಕೆ ಮಂಗಳೂರು ಜಂಕ್ಷನ್‌ನಿಂದ ಪ್ರಯಾಣ ಪ್ರಾರಂಭಿಸಿ ಮರುದಿನ ಸಂಜೆ 7:25ಕ್ಕೆ ಉಡ್ನಾ ಜಂಕ್ಷನ್ ತಲುಪಲಿದೆ.
ಈ ರೈಲಿಗೆ ವಾಲ್ಸಾಡ್, ವಾಪಿ, ಪಾಲ್ಗರ್, ವಾಸೈ ರೋಡ್, ಪನ್ವೇಲ್, ರೋಹಾ, ಖೇಡ್, ಚುಪ್ಳುಣ್, ಸಂಗಮೇಶ್ವರ ರೋಡ್, ರತ್ನಗಿರಿ, ಕಂಕವಲ್ಲಿ, ಸಿಂಧುದುರ್ಗ, ಕುಡಾಲ, ಸಾವಂತವಾಡಿ ರೋಡ್, ತೀವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾಣಕೋನಾ, ಕಾರವಾರ, ಅಂಕೋಲ, ಗೋಕರ್ಣ ರೋಡ್, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಹಾಗೂ ಸುರತ್ಕಲ್‌ಗಳಲ್ಲಿ ನಿಲುಗಡೆ ಇರುತ್ತದೆ.
ಈ ರೈಲು 2ಟಯರ್ ಎಸಿ ಸೇರಿದಂತೆ ಒಟ್ಟು 24 ಕೋಚ್‌ಗಳೊಂದಿಗೆ ಸಂಚರಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.







