ಥೈಲ್ಯಾಂಡ್: ನೌಕಾಪಡೆಯ ಹಡಗು ಮುಳುಗಡೆ; 31 ಮಂದಿ ನಾಪತ್ತೆ

ಬ್ಯಾಂಕಾಕ್, ಡಿ.19: ಥೈಲ್ಯಾಂಡ್ ಕೊಲ್ಲಿಯಲ್ಲಿ ಗಸ್ತು ತಿರುಗುತ್ತಿದ್ದ ಥೈಲ್ಯಾಂಡ್ ನೌಕಾಪಡೆಯ ಹಡಗು ಸಮುದ್ರದಲ್ಲಿ ಮುಳುಗಿದ್ದು ಹಡಗಿನಲ್ಲಿ 100ಕ್ಕೂ ಅಧಿಕ ನಾವಿಕರಿದ್ದರು ಎಂದು ವರದಿಯಾಗಿದೆ.
3 ಹಡಗು ಹಾಗೂ 2 ಹೆಲಿಕಾಪ್ಟರ್ ಬಳಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು 75 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ 31 ಮಂದಿ ನಾಪತ್ತೆಯಾಗಿದ್ದು ಅವರ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ನೌಕಾಪಡೆಯ ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರದೇಶದಲ್ಲಿ ಬೀಸುತ್ತಿರುವ ಬಿರುಗಾಳಿಯಿಂದಾಗಿ ಹಡಗಿನೊಳಗೆ ನೀರು ನುಗ್ಗಿದೆ. ಬಿರುಗಾಳಿಯ ಹೊಡೆತಕ್ಕೆ ಹಡಗಿನ ವಿದ್ಯುತ್‌ವ್ಯವಸ್ಥೆಗೆ ಹಾನಿಯಾದ್ದರಿಂದ ಪಂಪ್ ಬಳಸಿ ಹಡಗಿನೊಳಗಿನ ನೀರನ್ನು ಹೊರಸಾಗಿಸಲು ಸಾಧ್ಯವಾಗದೆ ಹಡಗು ಮುಳುಗಿದೆ ಎಂದು ನೌಕಾಪಡೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
Video from the ill fated #Thailand Navy vessel #HTMSSukhothai just before she sank in stormy seas after pumps failed due to a short circuit arising from a saltwater leak via the exhaust system .
— Ninjamonkey (@Aryan_warlord) December 19, 2022
As on date 31 #Thai sailors remain missing , here's praying for their safe recovery. pic.twitter.com/kQNc6q2e3F