́ಜಾಂಬೂರಿ ಪ್ರಯುಕ್ತ 50 ಅಡಿ ಎತ್ತರದ ಬೃಹತ್ ಗಾಳಿಪಟ

ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಕೀರ್ಣದ ಆವರಣದಲ್ಲಿ ಡಿ.21ರಿಂದ 27ರವರೆಗೆ ನಡೆಯಲಿರುವ ಸ್ಕೌಟ್ಸ್ ಮತ್ತು ಗೈಡ್ಸ್‌ನ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಹಿನ್ನೆಲೆಯಲ್ಲಿ 50 ಅಡಿ ಎತ್ತರದ ಬೃಹತ್ ಗಾಳಿಪಟಕ್ಕೆ ಸಿದ್ಧತೆಯು ನಗರದಲ್ಲಿ ಗೋಕುಲ್ ಸಭಾಂಗಣದಲ್ಲಿ ನಡೆಸಲಾಗುತ್ತಿದೆ.
ದಿನೇಶ್ ಹೊಳ್ಳ ಅವರ ವಿನ್ಯಾಸ ಮತ್ತು ಪರಿಕಲ್ಪನೆಯ ಗಾಳಿಪಟ ತಯಾರಿಯಲ್ಲಿ ಅಂತರ್‌ರಾಷ್ಟ್ರೀಯ ಖ್ಯಾತಿಯ ‘ಟೀಮ್ ಮಂಗಳೂರು ’ - ಹವ್ಯಾಸಿ ಗಾಳಿಪಟ ತಂಡದ ಕಲಾವಿದರು ತೊಡಗಿಸಿಕೊಂಡಿದ್ದಾರೆ. ದಿನೇಶ್ ಹೊಳ್ಳ, ನವೀನ್ ಅಡ್ಕರ್, ಸತೀಶ್ ರಾವ್, ಭವನ್ ಪಿ.ಜಿ., ಅನುರಾಧಾ ಬಣ್ಣ ಸಂಯೋಜನೆ ನಡೆಸಿದ್ದಾರೆ.
ಟೀಮ್ ಮಂಗಳೂರು-ಅಂತರ್ ರಾಷ್ಟ್ರೀಯ ಹವ್ಯಾಸಿ ಗಾಳಿಪಟ ತಂಡದ ಸ್ಥಾಪಕ ಸರ್ವೇಶ್ ರಾವ್ ತಾಂತ್ರಿಕ ವಿನ್ಯಾಸಗೊಳಿಸಿದ್ದಾರೆ.
ಅರುಣ್ ಕುಮಾರ್ ಸಹಕಾರ ನೀಡಿದ್ದಾರೆ. ಗಾಳಿಪಟದ ಹೊಲಿಗೆ ಕಾರ್ಯದಲ್ಲಿ ರವಿ ಶೆಟ್ಟಿ, ಅರಸಿನಮಕ್ಕಿ, ಬಿದಿರು ಕಡ್ಡಿ ಅಳವಡಿಕೆಯಲ್ಲಿ ಶೇಖರ್ ಶಿಶಿಲ, ಬಣ್ಣ ಸಂಯೋಜನೆಯಲ್ಲಿ ಸಪ್ನಾ ನೋರೋನ್ಹ, ಪ್ರಾಣೇಶ್ ಕುದ್ರೋಳಿ, ಪ್ರೀತಮ್ ಸಹಕರಿಸಿದ್ದಾರೆ.