Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ...

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ 74.99 ಕೋಟಿ ರೂ. ವೆಚ್ಚ

ಜಿ.ಮಹಾಂತೇಶ್ಜಿ.ಮಹಾಂತೇಶ್20 Dec 2022 8:18 AM IST
share
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ 74.99 ಕೋಟಿ ರೂ. ವೆಚ್ಚ

ಬೆಂಗಳೂರು, ಡಿ.19: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಬೆಂಗಳೂರಿನಲ್ಲಿ ನವೆಂಬರ್ 2ರಿಂದ 4ರವರೆಗೆ ಆಯೋಜಿಸಿದ್ದ  ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ರೋಡ್, ಶೋ, ನಾಡಗೀತೆ ಗಾಯನ, ಜಾಹೀರಾತು, ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಪ್ರಚಾರ ಸಭೆ, ಹೊಟೇಲ್ ವಾಸ್ತವ್ಯ, ಮೂಲಸೌಕರ್ಯ ಪ್ರಚಾರ ಫಲಕ, ವಿದೇಶ ಪ್ರವಾಸ ಸೇರಿದಂತೆ ಇನ್ನಿತರ ಬಾಬ್ತುಗಳಿಗೆ ಒಟ್ಟಾರೆ 74.99 ಕೋಟಿ ರೂ. ಖರ್ಚಾಗಿರುವುದು ಆರ್‌ಟಿಐನಿಂದ ಬಹಿರಂಗವಾಗಿದೆ.

ಬೆಳಗಾವಿಯ ಸಾಮಾಜಿಕ ಹೋರಾಟಗಾರ ಮತ್ತು ವಕೀಲ ಭೀಮನಗೌಡ ಪರಗೊಂಡ ಎಂಬವರಿಗೆ ಇನ್ವೆಸ್ಟ್ ಕರ್ನಾಟಕ ಫೋರಂ ಸಂಸ್ಥೆಯು ನೀಡಿರುವ ಆರ್‌ಟಿಐ ಮಾಹಿತಿಯು ''the-file.in''ಗೆ ಲಭ್ಯವಾಗಿದೆ.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಜಾಹೀರಾತು ಮತ್ತು ಮಾಧ್ಯಮ ಪ್ರಚಾರಕ್ಕೆ 10.58 ಕೋಟಿ ರೂ., ಸಾಕ್ಷ್ಯಚಿತ್ರಗಳು, ಜಾಹೀರಾತುಗಳ  ವಿನ್ಯಾಸಕ್ಕೆ 4.02 ಕೋಟಿ ರೂ., ಅಂತರ್‌ರಾಷ್ಟ್ರೀಯ ಪ್ರಚಾರ ಸಭೆಗಳಿಗೆ 3,27,91,178 ರೂ.,  ಮತ್ತು ರಾಷ್ಟ್ರೀಯ ಪ್ರಚಾರ ಸಭೆಗೆ 1,28,11,962 ರೂ. ಸೇರಿ ಒಟ್ಟು 4,56,03,140 ರೂ. ಖರ್ಚಾಗಿರುವುದು ಆರ್‌ಟಿಐ ನಿಂದ ತಿಳಿದು ಬಂದಿದೆ.

ವೆಚ್ಚದ ವಿವರ: ಜಾಗದ ಬಾಡಿಗೆ (ಬೆಂಗಳೂರು ಅರಮನೆ ಆವರಣ) 1.27 ಕೋ. ರೂ., ಅಂತರ್‌ರಾಷ್ಟ್ರೀಯ ಪ್ರಚಾರ ಸಭೆಗಳಿಗೆ 3.27 ಕೋ.ರೂ., ರಾಷ್ಟ್ರೀಯ ಪ್ರಚಾರ ಸಭೆಗಳಿಗೆ 1.28 ಕೋ.ರೂ., ಕರ್ಟನ್ ರೈಸರ್, ಇತರ ಸಮಾವೇಶ ಪೂರ್ವ ಪ್ರವರ್ಧನಾ ಕಾರ್ಯಕ್ರಮಗಳಿಗೆ 64.38 ಲಕ್ಷ ರೂ., ಜಾಹೀರಾತು ಹಾಗೂ ಮಾಧ್ಯಮ ಪ್ರಚಾರಕ್ಕೆ 10.52 ಕೋ.ರೂ., ಸಾಕ್ಷ್ಯಚಿತ್ರಗಳು, ಜಾಹೀರಾತುಗಳ ವಿನ್ಯಾಸಕ್ಕೆ 4.02 ಕೋ.ರೂ., ಸಮಾವೇಶ ಮೂಲಸೌಕರ್ಯ ಅಭಿವೃದ್ಧಿ ಮತ್ತು ಆಯೋಜನೆ ಸೇವೆಗಳಿಗೆ 50.68 ಕೋ. ರೂ. ವೆಚ್ಚವಾಗಿದೆ.

ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 34.92 ಲಕ್ಷ ರೂ., ಊಟ ಮತ್ತು ಉಪಹಾರ ಸೇವೆಗಳಿಗೆ 2.02 ಕೋಟಿ ರೂ., ಗಣ್ಯರಿಗೆ ಮತ್ತ ಸ್ಪೀಕರ್‌ಗಳಿಗೆ ವಾಸ್ತವ್ಯ ಮತ್ತು ಸಾರಿಗೆ ವ್ಯವಸ್ಥೆಗೆ 64.52 ಲಕ್ಷ ರೂ., ಸ್ಮರಣಿಕೆಗಳು, ಮುದ್ರಣ ಮತ್ತು ಲೇಖನ ಸಾಮಗ್ರಿಗಳಿಗೆ 22.27 ಲಕ್ಷ ರೂ., ಅಂಚೆ, ಕೊರಿಯರ್ ಆಡಿಟ್ ಫೀಜ್‌ಗೆ 4.72 ಲಕ್ಷ ರೂ. ಖರ್ಚಾಗಿದೆ.

ವಿವಿಧ ಸೇವೆಗಳಿಗೆ ಸಂಬಂಧಿಸಿದಂತೆ ಎಂಸಿಎಗೆ 15.65 ಕೋಟಿ ರೂ., ಸಮಾವೇಶ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಮಾವೇಶ ಆಯೋಜನೆ ಸೇವೆಗಳಿಗೆ ಬೆನೆಟ್ ಕೋಲ್ಮನ್ ಆ್ಯಂಡ್ ಕಂಪೆನಿ ಲಿಮಿಟೆಡ್ ಮುಂಬೈಗೆ 50,50,00,000 ರೂ., ಸಮಾವೇಶದಲ್ಲಿ ಊಟ ಮತ್ತು ಉಪಹಾರ ಸೇವೆಗಳನ್ನು ಒದಗಿಸಿದ  ಹೊಟೇಲ್ ವೆಸ್ಟೆಂಡ್‌ಗೆ 1.88 ಕೋಟಿ ರೂ., ಕಾಮತ್ ಪೆಲೆಟ್ ಕಾರ್ನರ್ ಗೆ 14.23 ಲಕ್ಷ ರೂ., ನೀಡಲಾಗಿದೆ.

ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳ ನೇರ ಪ್ರಸಾರ ಮಾಡಿದ ಬೆಂಗಳೂರು ದೂರದರ್ಶನಕ್ಕೆ 5.60 ಲಕ್ಷ ರೂ., ದೇಶಿಯ ಮತ್ತು ವಿದೇಶ ವಿಮಾನಯಾನ ಟಿಕೆಟ್‌ಗಳನ್ನು ಒದಗಿಸಿದ ಮೈಲ್ಸ್ ಅಫ್ ಸ್ಟೈಲ್ಸ್ ಬೆಂಗಳೂರು ಇವರಿಗೆ 1.78 ಕೋಟಿ ರೂ., ಟ್ರಾನ್ಸ್ ಸ್ಕ್ರೇವೇಸ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್‌ಗೆ 1.12 ಲಕ್ಷ ರೂ., ಸಮಾವೇಶಕ್ಕೆ ಸಂಬಂಧಪಟ್ಟ ವಿಶೇಷ ಸಂಚಿಕೆ ಹೊರತಂದ ಸಣ್ಣ ಕೈಗಾರಿಕೆ ವಾರ್ತೆಗೆ 4.50 ಲಕ್ಷ ರೂ. ವೆಚ್ಚವಾಗಿರುವುದು ಆರ್‌ಟಿಐನಿಂದ ಗೊತ್ತಾಗಿದೆ.

ನಾಡಗೀತೆ ಗಾಯನಕ್ಕೆ ಮೃತ್ಯುಂಜಯ ದೊಡ್ಡವಾಡ ಎಂಬವರಿಗೆ 30,000 ರೂ., ರಿಕ್ಕಿ ಕೇಜ್ ಅವರಿಗೆ (ಲೈವ್ ಕಾನ್ಸರ್ಟ್)ಗೆ 13,57,000 ರೂ., ವಸುಂಧರ ದಾಸ್ (ಡ್ರಂಜಾಮ್) 7.67 ಲಕ್ಷ ರೂ., ಕರ್ನಾಟಕ ಮಹಿಳಾ ಯಕ್ಷಗಾನ ತಂಡಕ್ಕೆ 1.80 ಲಕ್ಷ ರೂ., ಸಿರಿಕಲಾ ಮೇಳಕ್ಕೆ (ಯಕ್ಷಗಾನ) 40,000 ರೂ., ಚಂದ್ರಕುಮಾರ್ ಎ.ಎಸ್. (ಡೊಳ್ಳು ಕುಣಿತ) 40,000 ರೂ., ಕಾಂತರಾಜ್.ಎಚ್ (ಕಹಳೆ ವಾದನ) 40,000 ರೂ., ನ್ಯಾಷನಲ್ ಗ್ಯಾಲರಿ ಆಫ್ ಮಾಡ್ರರ್ನ್ ಆರ್ಟ್ಸ್ (ಆರ್ಟ್ಸ್ ಎಕ್ಸಿಬಿಷನ್) 4,42,411 ರೂ., ಕರ್ನಾಟಕ ಚಿತ್ರಕಲಾ ಪರಿಷತ್ (ಕರಕುಶಲ ಮತ್ತು ಕೈಮಗ್ಗ ಪ್ರದರ್ಶನ) 5,95,900 ರೂ. ಖರ್ಚಾಗಿದೆ.

ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆಗೆ (ಟೆಂಡರ್ ಪ್ರಕ್ರಿಯೆಯ ಫೆಸಿಲಿಟೇಷನ್ ಸೇವೆ) 9,73,500 ರೂ., ಹೊಟೇಲ್ ಜೆಡಬ್ಲ್ಯೂ ಮ್ಯಾರಿಯೇಟ್ (ಕಾನ್ಕ್ಲೇವ್ ಹಾಲ್ ಬಾಡಿಗೆ ಮತ್ತು ಊಟಕ್ಕೆ ) 3,77,600 ರೂ., ಭಾರತೀಯ ರಾಯಭಾರ ಕಚೇರಿಗಳ ಮೂಲಕ ವಿದೇಶ ಪ್ರವಾಸದಲ್ಲಿ ರಾಜ್ಯದ ನಿಯೋಗಕ್ಕೆ ವಸತಿ ಮತ್ತು ಸಾರಿಗೆ ವ್ಯವಸ್ಥೆ ಹಾಗೂ ಸಭೆಗಳ ಆಯೋಜನೆಗೆ 1.83 ಕೋಟಿ ರೂ., ರೋಡ್ ಶೋಗಳಿಗೆ ವಿದೇಶ ಪ್ರವಾಸ ಕೈಗೊಂಡ ರಾಜ್ಯ ನಿಯೋಗದ ಸದಸ್ಯರಿಗೆ ತುಟ್ಟಿಭತ್ತೆಗೆ 15,11,200 ರೂ., ಹೋಪ್ ರೀಚ್ ಮೀಡಿಯಾಕ್ಕೆ (ಭಾಷಾಂತರ ಮತ್ತು ಮುದ್ರಣ) 1,80,540 ಲಕ್ಷ ರೂ., ಇಂಡೋ ಫ್ರೆಂಚ್ ಛೇಂಬರ್ ಅಫ್ ಕಾಮರ್ಸ್ ಇಂಡಸ್ಟ್ರಿ ಬೆಂಗಳೂರು (ಭಾಷಾಂತರ) 29,049 ರೂ., ಕರ್ನಾಟಕ ಭವನ ನವದಿಲ್ಲಿ (ವಾಸ್ತವ್ಯ) 7,695 ರೂ, ವೆಚ್ಚವಾಗಿದೆ.

 ನೇಚರ್ ಇನ್ ಫೋಕಸ್ ಬೆಂಗಳೂರಿಗೆ 3,54,000 ರೂ., ಚನ್ನಪ್ಪ ಆ್ಯಂಡ್ ಅಸೋಸಿಯೇಟ್ಸ್‌ಗೆ 4,72,000 ರೂ., ಭಗವಾನ್ ಮಹಾವೀರ್ ಆ್ಯಂಡ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್‌ಗೆ (ಸಮಾವೇಶಕ್ಕೆ ವಾಹನಗಳ ಸೇವೆ) 2,75,124 ರೂ., ಮೈನಿ ಮೆಟರಿಲಿಯ್ಸ್ ಮೂವ್ಮೆಂಟ್ ಪ್ರೈ ಲಿ., (ಸಮಾವೇಶ ಆವರಣದಲ್ಲಿ ಬಗ್ಗಿಗಳ ಸೇವೆ) 3,37,480 ರೂ., ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಸಮಾವೇಶಕ್ಕೆ ಸಾರಿಗೆ ವ್ಯವಸ್ಥೆ) 2,12,000 ರೂ. ನೀಡಲಾಗಿದೆ.

 ಹೊಟೇಲ್ ತಾಜ್ ವೆಸ್ಟೆಂಡ್ ಬೆಂಗಳೂರು (ಹಾಲ್ ಬಾಡಿಗೆ,ಊಟ ಮತ್ತು ಗಣ್ಯರಿಗೆ ವಾಸ್ತವ್ಯ) 11,20,616 ರೂ., ಹೊಟೇಲ್ ಶಾಂಗ್ರಿಲಾ ಬೆಂಗಳೂರು (ಗಣ್ಯರಿಗೆ ವಾಸ್ತವ್ಯ) 67,183 ರೂ., ಹೊಟೇಲ್ ಲಲಿತ್ ಅಶೋಕ್ (ಗಣ್ಯರಿಗೆ ವಾಸ್ತವ್ಯ) 72,279 ರೂ., ಹೊಟೇಲ್ ಐಟಿಸಿ ಗಾರ್ಡೇನಿಯಾ (ಕರ್ಟನ್ ರೈಸರ್ ಹಾಲ್, ಬಾಡಿಗೆ ಮತ್ತು ಊಟ) 9,18,530 ರೂ., ವಾಸಂತಿ ಹರಿಪ್ರಕಾಶ್ ಅವರಿಗೆ (ಎಂ ಸಿ ಚಾರ್ಜ್ಸ್ ), 92,000 ರೂ., ಬಹುರೂಪಿ ಬುಕ್ ಹಬ್ ಬೆಂಗಳೂರು 5,015 ರೂ., ಸೇರಿ ಒಟ್ಟು 74,99,58, 947 ರೂ. ವೆಚ್ಚವಾಗಿದೆ.

‘ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಹೆಸರಲ್ಲಿ ಅಧಿಕಾರಿಗಳು ಮತ್ತು ರಾಜ್ಯ ಸರಕಾರದ ಮಂತ್ರಿಗಳು ಸಾರ್ವಜನಿಕ ಬೊಕ್ಕಸ ಖಾಲಿ ಮಾಡಿದ್ದಾರೆ. ಸಮಾಜ ಕಲ್ಯಾಣ ಚಟುವಟಿಕೆಗಳಿಗೆ ನೀಡುವ ಅನುದಾನ ಕಡಿತ ಮಾಡಿ ಬಂಡವಾಳಶಾಹಿಗಳಿಗೆ  ರತ್ನ ಗಂಬಳಿ ಹಾಸಿದೆ. ರೈತರನ್ನು ಬೀದಿಗೆ ತಳ್ಳಿ, ಇನ್ನಷ್ಟು ಜನರನ್ನು ಬಡತನಕ್ಕೆ  ತರಳುವ ಹುನ್ನಾರ ಇದರ ಹಿಂದಿದೆ.  ಈ ಸಮಾವೇಶದ ಹೆಸರಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ದೃಡೀಕೃತ ದಾಖಲೆಗಳನ್ನು ಪಡೆದು ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ವಕೀಲ ಭೀಮನಗೌಡ ಪರಗೊಂಡ ಅವರು ’’ಠಿಛ್ಛಿಜ್ಝಿಛಿ.ಜ್ಞಿ’’ಗೆ ಪ್ರತಿಕ್ರಿಯೆ ನೀಡಿದ್ದಾರೆ.

ರೋಡ್ ಶೋಗಳಿಗೆ 72.87 ಲಕ್ಷ ರೂ. ವೆಚ್ಚ

ಹೊಟೇಲ್ ಲೀಲಾ ಪ್ಯಾಲೇಸ್ ನವದಿಲ್ಲಿ (ರೋಡ್ ಶೋ, ಹಾಲ್ ಬಾಡಿಗೆ,ಊಟ ಮತ್ತು ವಾಸ್ತವ್ಯ) 12,11,148ರೂ., ಫಿಕ್ಕಿ ಮುಖಾಂತರ (ದಿಲ್ಲಿ ರೋಡ್ ಶೋ ವೆಚ್ಚ) 11,28,699 ರೂ., ಹೊಟೇಲ್ ತಾಜ್ ಕೃಷ್ಣ ಮತ್ತು ತಾಜ್ ಡೆಕ್ಕನ್ ಹೈದರಾಬಾದ್ (ರೋಡ್ ಶೋ, ಹಾಲ್ ಬಾಡಿಗೆ, ಊಟ ಮತ್ತು ವಾಸ್ತವ್ಯ) 17,77, 276 ರೂ., ಅಸೋಚಾಮ್ ಮುಖಾಂತರ (ಹೈದರಾಬಾದ್ ರೋಡ್ ಶೋ ವೆಚ್ಚ) 7,95,808 ರೂ., ಹೊಟೇಲ್ ಟ್ರೈಡೆಂಟ್ ಮುಂಬೈ (ರೋಡ್ ಶೋ, ಹಾಲ್ ಬಾಡಿಗೆ ಊಟ ಮತ್ತು ವಾಸ್ತವ್ಯಕ್ಕೆ ) 15,46,826 ರೂ., ಸಿಐಐ ಮುಖಾಂತರ ಮುಂಬೈ ರೋಡ್ ಶೋ ವೆಚ್ಚಕ್ಕೆ 8,27,399 ರೂ. ಪಾವತಿಸಲಾಗಿದೆ.

ಜಾಹೀರಾತಿಗೆ 10.52 ಕೋಟಿ ರೂ.

ದಿನಪತ್ರಿಕೆಗಳ ಜಾಹೀರಾತಿಗೆ 4.83 ಕೋಟಿ ರೂ., ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಚಾರಕ್ಕೆ 1.59. ಕೋಟಿ ರೂ., ದೂರದರ್ಶನ ಚಾನಲ್‌ಗಳಲ್ಲಿ ಜಾಹೀರಾತಿಗೆ 77.52 ಲಕ್ಷ ರೂ., ವಿಮಾನ ನಿಲ್ದಾಣಗಳ ಪ್ರಚಾರ ಫಲಕಗಳಲ್ಲಿ ಜಾಹೀರಾತುಗಳಿಗೆ 2.90 ಕೋಟಿ ರೂ., ಹೊರಾಂಗಣ ಪ್ರಚಾರ ಫಲಕಗಳಲ್ಲಿ ಜಾಹೀರಾತುಗಳಿಗೆ 34.85 ಲಕ್ಷ ರೂ., ಎಫ್‌ಎಂ ರೇಡಿಯೋ ಚಾನಲ್‌ಗಳಲ್ಲಿ ಜಾಹೀರಾತಿಗೆ 4.95 ಲಕ್ಷ ರೂ., ಸಣ್ಣ ಪತ್ರಿಕೆ (10 ಸಣ್ಣಪತ್ರಿಕೆಗಳು)ಗಳಲ್ಲಿ ಜಾಹೀರಾತಿಗೆ 2.50 ಲಕ್ಷ ರೂ. ಸೇರಿ ಒಟ್ಟು 10.52 ಕೋಟಿ ರೂ. ಪಾವತಿಸಲಾಗಿದೆ.

share
ಜಿ.ಮಹಾಂತೇಶ್
ಜಿ.ಮಹಾಂತೇಶ್
Next Story
X