ಕಾಂತಾರ, ಕೆಜಿಎಫ್-2, 777 ಚಾರ್ಲಿ: ಕನ್ನಡ ಚಿತ್ರರಂಗಕ್ಕೆ ಹುಮ್ಮಸ್ಸು ತುಂಬಿದ ವರ್ಷ

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ 2022 ಸ್ಮರಣೀಯ ವರ್ಷವಾಗಿ ಪರಿಣಮಿಸಿದೆ. 2021ಕ್ಕಿಂತ ಮುನ್ನ ಕನ್ನಡ ಚಿತ್ರರಂಗದಲ್ಲಿ ಕೇವಲ ಒಂದು ಚಿತ್ರ 100 ಕೋಟಿ ಗಳಿಕೆಯ ಗಡಿಯನ್ನು ದಾಟಿದ್ದರೆ, 2022ರಲ್ಲಿ ಐದು ಚಿತ್ರಗಳು ಈ ಅಪೂರ್ವ ಸಾಧನೆ ಮಾಡಿವೆ.
ದೇಶಾದ್ಯಂತ ಈ ಬಾರಿ ಅತ್ಯಂತ ಗರಿಷ್ಠ ಆದಾಯ ಸೃಷ್ಟಿಸಿದ ಅಗ್ರ 10 ಚಿತ್ರಗಳ ಪೈಕಿ ಎರಡು ಕನ್ನಡ ಚಿತ್ರಗಳು ಸೇರಿರುವುದು ಕನ್ನಡ ಚಿತ್ರರಂಗದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಸಹಜವಾಗಿಯೇ ಗಳಿಕೆ, ಚಿತ್ರದ ಕಥಾವಸ್ತು, ವಿಮರ್ಶೆ ಹೀಗೆ ಯಾವ ಮಾನದಂಡವನ್ನು ತೆಗೆದುಕೊಂಡರೂ, ಕನ್ನಡ ಚಿತ್ರರಂಗದ ಪ್ರಾಬಲ್ಯ ಎದ್ದು ಕಾಣುತ್ತಿದೆ. ಚಿತ್ರೋದ್ಯಮದ ಮಂದಿ ಹಾಗೂ ಈ ಬದಲಾವಣೆಗಳನ್ನು ಪುಟ್ಟ ಚಿತ್ರೋದ್ಯಮದಲ್ಲಿ ಹೇಗೆ ಮಾಡಲು ಸಾಧ್ಯವಾಯಿತು ಎನ್ನುವ ಅಚ್ಚರಿ ಮೂಡಿದೆ.
RRR ಚಿತ್ರ ದೇಶಾದ್ಯಂತ ಸುದ್ದಿ ಮಾಡಿ, ಗೋಲ್ಡನ್ ಗ್ಲೋಬ್ ನಾಮನಿರ್ದೇಶನಗೊಂಡಿರುವುದು ವಾಸ್ತವವಾದರೂ, ಗಳಿಕೆ ವಿಚಾರದಲ್ಲಿ ಇದು ಕೆಜಿಎಫ್-2 ಚಿತ್ರಕ್ಕಿಂತ ಭಾರಿ ಹಿಂದಿದೆ. ಉದಾಹರಣೆಗೆ ಕೆಜಿಎಫ್-2ನ ಹಿಂದಿ ಅವತರಣಿಕೆ, ದೇಶದಲ್ಲಿ ಇದುವರೆಗೆ ಯಾವುದೇ ಹಿಂದಿ ಚಿತ್ರ ಗಳಿಸದಷ್ಟು ದೊಡ್ಡ ಆದಾಯವನ್ನು ಗಳಿಸಿದೆ. ಕೆಜಿಎಫ್-2 ಹಿಂದಿ ಅವತರಣಿಕೆಯ ಒಟ್ಟು ಗಳಿಕೆ 435 ಕೋಟಿ ರೂಪಾಯಿ ಮೀರಿದ್ದರೆ, ದಂಗಲ್ (387 ಕೋಟಿ), ಸಂಜು (342 ಕೋಟಿ) ಹಾಗೂ ಟೈಗರ್ ಝಿಂಧಾ ಹೆ (339 ಕೋಟಿ) ತೀರಾ ಹಿಂದಿವೆ. ಈ ವರ್ಷದ ಗರಿಷ್ಠ ಗಳಿಕೆಯ ಹಿಂದಿ ಚಿತ್ರ ಬ್ರಹ್ಮಸೂತ್ರ 257 ಕೋಟಿ ರೂಪಾಯಿ ಗಳಿಸಿದೆ. ಇದುವರೆಗೆ ಯಾವ ಕನ್ನಡ ಚಿತ್ರವೂ ಅಗ್ರ 10ರಲ್ಲಿ ಸ್ಥಾನ ಪಡೆದಿಲ್ಲ. ಆದರೆ ಈ ಬಾರಿ ಎರಡು ಚಿತ್ರಗಳು ಆ ಹೆಗ್ಗಳಿಕೆಗೆ ಪಾತ್ರವಾಗಿವೆ.
2018ರಲ್ಲಿ ಕೆಜಿಎಫ್ ಚಿತ್ರ 250 ಕೋಟಿ ರೂಪಾಯಿ ಆದಾಯ ಗಳಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಕರಾವಳಿ ಕರ್ನಾಟಕದ ಕಥಾನಕವನ್ನು ಹೊಂದಿದ ರಿಷಬ್ ಶೆಟ್ಟಿಯವರ ’ಕಾಂತಾರ’ ಚಿತ್ರ ಈ ಎಲ್ಲ ದಾಖಲೆಗಳನ್ನು ಅಳಿಸಿ ಹಾಕಿದೆ. ಅದು 400 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡಿದೆ. ಇದರ ಹಿಂದಿ ಅವತರಣಿಕೆಯೇ 100 ಕೋಟಿ ರೂಪಾಯಿ ಆದಾಯ ತಂದಿದೆ.
777 ಚಾರ್ಲಿ ಚಿತ್ರ ಕನ್ನಡ ಚಿತ್ರರಂಗದ ಮತ್ತೊಂದು ಮೈಲುಗಲ್ಲು. ವಿಕ್ರಾಂತ್ ರೋಣ ಮತ್ತು ಜೇಮ್ಸ್ ನಿರ್ಮಿತ ಚಿತ್ರ ರಾಜ್ಯದಾಚೆಗೂ ಅಪಾರ ಜಜಪೆರಿಯತೆ ಗಳಿಸಿದೆ. ಈ ಎಲ್ಲ ಚಿತ್ರಗಳು ಭಿನ್ನ ಕಾರಣಗಳಿಗಾಗಿ ಜನ ಮನ ಗೆದ್ದಿವೆ. ಕೆಜಿಎಫ್-2 ಕೂಡಾ ರಾಜ್ಯ ಚಿತ್ರರಂಗದಲ್ಲಿ ಇಂಥದ್ದೇ ಸಂಚಲನ ಮೂಡಿಸಿತು.







