ದಟ್ಟ ಮಂಜು: ಹರ್ಯಾಣ ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಪ್ರಯಾಣಿಸುತ್ತಿದ್ದ ವಾಹನ ಅಪಘಾತ

ಚಂಡೀಗಡ: ಹರ್ಯಾಣದ ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಅವರು (Haryana Deputy Chief Minister Dushyant Chautala) ಪ್ರಯಾಣಿಸುತ್ತಿದ್ದ ವಾಹನವು ಮಂಗಳವಾರ ಬೆಳಗ್ಗೆ ಪೊಲೀಸ್ ಜೀಪಿಗೆ ಢಿಕ್ಕಿ ಹೊಡೆದಿದೆ. ಚೌತಾಲಾ ಅವರ ಬೆಂಗಾವಲು ಪಡೆ ಹಿಸಾರ್‌ನಿಂದ ಸಿರ್ಸಾಗೆ ಹೋಗುತ್ತಿದ್ದಾಗ ಅಗ್ರೋಹಾ ಬಳಿ ಅಪಘಾತ ಸಂಭವಿಸಿದೆ.
ದಟ್ಟವಾದ ಮಂಜಿನ ಪರಿಣಾಮವಾಗಿ ಕಡಿಮೆ ಗೋಚರತೆಯಿಂದಾಗಿ ರಾಜ್ಯ ಪೊಲೀಸರ ಬೊಲೆರೊ ಕಾರು ಹಠಾತ್ ಬ್ರೇಕ್ ಹಾಕಿದಾಗ ದುಷ್ಯಂತ್ ಚೌಟಾಲಾ ಅವರ ಬೆಂಗಾವಲು ಪಡೆಯ ವಾಹನ ಡಿಕ್ಕಿ ಹೊಡೆದಿದೆ. ಉಪ ಮುಖ್ಯಮಂತ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಏತನ್ಮಧ್ಯೆ, ಮತ್ತೊಂದು ಘಟನೆಯಲ್ಲಿ, ಹರ್ಯಾಣ ಗೃಹ ಸಚಿವ ಅನಿಲ್ ವಿಜ್ ಅವರು ತಮ್ಮ ಅಧಿಕೃತ ಕಾರಿನಲ್ಲಿ ಅಂಬಾಲಾ ಕ್ಯಾಂಟ್‌ನಿಂದ ಗುರುಗ್ರಾಮ್‌ಗೆ ಪ್ರಯಾಣಿಸುತ್ತಿದ್ದಾಗ ಪವಾಡಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಪಂಜಾಬ್, ಹರ್ಯಾಣ, ಚಂಡೀಗಢ, ದೆಹಲಿ ಮತ್ತು ಉತ್ತರ ಪ್ರದೇಶದ ಮೇಲೆ ದಟ್ಟವಾದ ಮಂಜಿನ ಸ್ಥಿತಿಯು ಮುಂದಿನ ಎರಡು ಮೂರು ಗಂಟೆಗಳ ಕಾಲ ಮುಂದುವರಿಯುತ್ತದೆ ಮತ್ತು ಕ್ರಮೇಣ ಸುಧಾರಿಸುತ್ತದೆ ಎಂದು IMD ಹೇಳಿದೆ.





