ಸಿಬಿಐ, ಐಟಿ, ಈ.ಡಿ. ಬಿಜೆಪಿಯ ಮುಂಚೂಣಿ ಘಟಕಗಳು: ಬಿ.ಕೆ. ಹರಿಪ್ರಸಾದ್
ಬೆಂಗಳೂರು: ಸಿಬಿಐ, ಐಟಿ, ಈ.ಡಿ. ಬಿಜೆಪಿಯ ಮುಂಚೂಣಿ ಘಟಕಗಳು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಮಾಲಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ವಿಚಾರವಾಗಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಇವುಗಳನ್ನೇ ಇಟ್ಟುಕೊಂಡು ನಮ್ಮನ್ನು ಹೆದರಿಸುವ ಕೆಲಸ ಮಾಡುತ್ತಿದೆ. ಆದರೆ, ನಾವು ಭಯಪಡುವವರಲ್ಲ ಎಂದರು.
ಹಲಾಲ್ ಬಿಲ್ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ರಾಜ್ಯದ ರೈತರ, ಕಾರ್ಮಿಕರ ಸಮಸ್ಯೆ ಬಗ್ಗೆ ಹರಿಸುವಲ್ಲಿ ವಿಫಲವಾಗಿದೆ. ಇವುಗಳನ್ನು ವಿಷಯಾಂತರ ಮಾಡಲು ಸರ್ಕಾರ ಹಲಾಲ್ ಬಿಲ್ ಮುನ್ನಲೆಗೆ ತರುತ್ತಿದೆ ಎಂದರು.
ಇದನ್ನೂ ಓದಿ: ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ ಕೆ. ಎಸ್. ಈಶ್ವರಪ್ಪ - ರಮೇಶ್ ಜಾರಕಿಹೊಳಿ ಭೇಟಿ
Next Story