ಕಾರ್ಕಳ: ಕೈಗಾರಿಕಾ ಮತ್ತು ಶೈಕ್ಷಣಿಕ ಪರಿಣತರ ಸಮಾವೇಶ- 2022

ಕಾರ್ಕಳ: ಶೈಕ್ಷಣಿಕ ಗುಣಮಟ್ಟ ಹಾಗೂ ಕೈಗಾರಿಕಾ ರಂಗಗಳ ಸವಾಲುಗಳನ್ನು ಪರಿಹರಿಸಲು ಕೈಗಾರಿಕಾ ಮತ್ತು ಶೈಕ್ಷಣಿಕ ಪರಿಣತರ ಸಮಾವೇಶವು ವಿಪುಲ ಅವಕಾಶವನ್ನು ತೆರೆದಿಡುತ್ತದೆ ಎಂದು ಬೆಂಗಳೂರಿನ ಕೇಂದ್ರೀಯ ಉತ್ಪಾದನಾ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ನಾಗಹನುಮಯ್ಯಾ ಹೇಳಿದರು. ಅವರು ನಿಟ್ಟೆ ತಾಂತ್ರಿಕ ಕಾಲೇಜಿನ ಸಂಭ್ರಮ ಸಭಾಂಗಣದಲ್ಲಿ ನಡೆದ ಕೈಗಾರಿಕಾ ಮತ್ತು ಶೈಕ್ಷಣಿಕ ಪರಿಣತರ ಸಮಾವೇಶ- 2022 ಉದ್ಘಾಟಿಸಿ ಮಾತನಾಡಿದರು .
ಕೇಂದ್ರ ಸರಕಾರವು ಅತ್ಮನಿರ್ಭರ ಯೋಜನೆಗೆ ಹೆಚ್ಚಿನ ಒತ್ತು ನೀಡುತ್ತಿದೆ, ನಮ್ಮ ಯುವಜನತೆ ಸಂಶೋಧನೆಗಳನ್ನು ಮಾಡುತ್ತಾ ದೇಶದ ಬೆಳವಣಿಗೆಗೆ ಕಾರಣೀಭೂತರಾಗಬೇಕು . ಜಗತ್ತಿನ ಪ್ರತಿಯೊಂದು ಸಂಶೋಧನೆಯ ಹಿಂದೆ ಭಾರತೀಯನ ಸಾಧನೆಯಿದೆ ಎಂದರು
ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸಹ ಕುಲಪತಿ ಮೂಡಿತ್ತಾಯ ಮಾತನಾಡಿ ಲೋಕಲ್ ಟು ಗ್ಲೋಬಲ್ ಘೋಷಣೆ ಮೂಲಕ ಸ್ಥಳೀಯ ಮಟ್ಟದ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡಬೇಕು ,ಅದಕ್ಕಾಗಿ ಉತ್ತಮ ಗುಣಮಟ್ಟದ ಶಿಕ್ಷಣ, ಸಂಶೋಧನೆ, ಪ್ರತಿಭಾ ಕೌಶಲ್ಯಗಳು ಮಹತ್ವ ಪಡೆಯುತ್ತವೆ, ಅದನ್ನು ವಿದ್ಯಾರ್ಥಿಗಳಲ್ಲಿ ರೂಪಿಸಬೇಕಾಗಿದೆ ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಪರಮೇಶ್ವರನ್ ಮಾತನಾಡಿ, ಭಾರತ ಸರ್ಕಾರದ ನೀತಿ ಆಯೋಗ ಗುರುತಿಸಿರುವ ಆದ್ಯತೆಯ ಕ್ಷೇತ್ರಗಳ ಸೆಮಿಕಂಡಕ್ಟರ್ ವಲಯ, ಇಂಧನ ಕ್ಷೇತ್ರ ಶಕ್ತಿ ಸಂಪನ್ಮೂಲ, ವಾಹನೋದ್ಯಮ, ಭಾರತೀಯ ಕೈಗಾರಿಕೆಗಳು ಮತ್ತು ಡಿಜಿಟಲಿಕರಣ ಸವಾಲುಗಳನ್ನು ಎದುರಿಸಲು ನಾವು ಸಂಶೋಧನೆ ಮೂಲಕ ಸಿದ್ದರಾಗಬೇಕು ಎಂದರು
ಈ ಸಂದರ್ಭದಲ್ಲಿ ಕಾಲೇಜು ಕ್ಯಾಂಪಸ್ ನ 550 ಕಿ.ವ್ಯಾಟ್ ಸಾಮಾರ್ಥ್ಯದ ಸೋಲಾರ್ ವಿದ್ಯುತ್ ಘಟಕವನ್ನು ಬಿ.ಎನ್ ಎಂ ತಾಂತ್ರಿಕ ಸಂಸ್ಥೆಯ ಹೆಚ್ಚುವರಿ ನಿರ್ದೇಶಕ ಡಾ. ಎಸ್ ವೈ ಕುಲಕರ್ಣಿ ಉದ್ಘಾಟಿಸಿದರು.
ನಿಟ್ಟೆ ತಾಂತ್ರಿಕ ಕಾಲೇಜಿನ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ ನಿರಂಜನ್ ಎಸ್ ಚಿಪ್ಳುಣ್ಕರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಇದೆ ಸಂದರ್ಭದಲ್ಲಿ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ ಅಭಿಲಾಶ್ ಪಿ ನಗದು ಬಹುಮಾನ ವಿತರಿಸಲಾಯಿತು .
ಕಾಲೇಜಿನ ಪ್ರಾಧ್ಯಾಪಕ ರೋಷನ್ ಫರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು . ಪ್ರಾದ್ಯಾಪಕಿ ರಶ್ಮಿ ಶೆಟ್ಟಿ ಧನ್ಯವಾದ ವಿತ್ತರು.







