ಕಳ್ಳಭಟ್ಟಿ ದುರಂತದ ತನಿಖೆಗೆ ಬಿಹಾರಕ್ಕೆ ಎನ್‌ಎಚ್‌ಆರ್‌ಸಿ ತಂಡ

ಪಾಟ್ನಾ, ಡಿ. 20: ಅರುವತ್ತಕ್ಕೂ ಅಧಿಕ ಮಂದಿ ಸಾವನ್ನಪ್ಪಲು ಕಾರಣವಾದ ಕಳ್ಳ ಭಟ್ಟಿ ದುರಂತದ ತನಿಖೆ ನಡೆಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ದ ತಂಡ ಮಂಗಳವಾರ ಪಾಟ್ನಾಕ್ಕೆ ಆಗಮಿಸಿದೆ.
ಸರನ್ ಜಿಲ್ಲೆಯ ಛಾಪ್ರಾದಲ್ಲಿ ನಡೆದ ಈ ಕಳ್ಳಭಟ್ಟಿ ದುರಂತದ ತನಿಖೆ ನಡೆಸಲು ಆಗಮಿಸಿದ ಎನ್‌ಎಚ್‌ಆರ್‌ಸಿ ತಂಡದಲ್ಲಿ 9 ಮಂದಿ ಸದಸ್ಯರಿದ್ದಾರೆ.
ಕಳ್ಳಭಟ್ಟಿ ಸೇವಿಸಿ ಜನರು ಮೃತಪಟ್ಟ ಬಳಿಕ ಆಕ್ರೋಶಿತರಾಗಿದ್ದ ಗ್ರಾಮಸ್ಥರು ಬಿಹಾರ ರಾಜ್ಯ ಹೆದ್ದಾರಿ 90ರ ಮಾಸ್ರಕ್ ಹನುಮಾನ್ ಚೌಕ್‌ನಲ್ಲಿ ಸಂಚಾರಕ್ಕೆ ತಡೆ ಒಡ್ಡಿದ್ದರು ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.
ಈ ದುರಂತ ಬಿಹಾರ ವಿಧಾನ ಸಭೆಯಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಕಳ್ಳಭಟ್ಟಿ ದುರಂತದ ಕುರಿತಂತೆ ಪ್ರತಿಪಕ್ಷದ ನಾಯಕರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
Next Story





