ಪತಂಜಲಿಯ ದಿವ್ಯ ಫಾರ್ಮಸಿ ಸೇರಿದಂತೆ 16 ಭಾರತೀಯ ಔಷಧಿ ಕಂಪೆನಿಗಳಿಗೆ ನೇಪಾಳದಲ್ಲಿ ನಿಷೇಧ

ಕಠ್ಮಂಡು,ಡಿ.20: ಭಾರತದಯೋಗ ಗುರು ರಾಮದೇವ್(Guru Ramdev) ಮಾಲಕತ್ವದ ಪತಂಜಲಿ ಉತ್ಪನ್ನಗಳನ್ನು ತಯಾರಿಸುವ ದಿವ್ಯ ಫಾರ್ಮಸಿ(Divya Pharmacy) ಸೇರಿದತೆ 16 ಭಾರತೀಯ ಫಾರ್ಮಾಸ್ಯೂಟಿಕಲ್ (ಔಷಧಿ) ಕಂಪೆನಿಗಳನ್ನು ನಿಷೇಧಿಸಿರುವುದಾಗಿ ನೇಪಾಳದ ಔಷಧಿ ನಿರ್ವಹಣಾ ಇಲಾಖೆಯು ಮಂಗಳವಾರ ಘೋಷಿಸಿದೆ. ವಿಶ್ವ ಆರೋಗ್ಯ ಸಂಸ್ಥೆ (WHO)ಯ ಉತ್ತಮ ಉತ್ಪಾದನಾ ನಿಯಮಗಳನ್ನು ಪಾಲಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಅವುಗಳನ್ನು ನಿಷೇಧಿಸಲಾಗಿದೆಯೆಂದು ನೇಪಾಳ ಸರಕಾರದ ಮೂಲಗಳು ತಿಳಿಸಿವೆ.
ಈ ಕಂಪೆನಿಗಳು ಉತ್ಪಾದಿಸಿದ ಔಷಧಿಗಳನ್ನು ನೇಪಾಳಕ್ಕೆ ಆಮದು ಮಾಡಿಕೊಳ್ಲುವಂತಿಲ್ಲವೆಂದದು ನೇಪಾಳದ ಔಷಧಿ ನಿರ್ವಹಣಾ ಇಲಾಖೆ ತಿಳಿಸಿದೆ. ಈ ಇಲಾಖೆಯು ನೇಪಾಳದಲ್ಲಿ ಅಲೋಪಥಿ ಹಾಗೂ ಆಯುರ್ವೇದ ಔಷಧಿಗಳ ಮಾರುಕಟ್ಟೆಯನ್ನು ನಿಯಂತ್ರಿಸುವ ರಾಷ್ಟ್ರೀಯ ಸಂಸ್ಥೆಯಾಗಿದೆ.
ನಿಗದಿಪಡಿಸಲಾದ ಮಾನದಂಡಗಳಿಗೆ ಅನುಗುಣವಾಗಿ ಔಷಧಿ ವಸ್ತುಗಳನ್ನು ಉತ್ಪಾದಿಸಲಾಗುತ್ತದೆಯೇ ಹಾಗೂ ನಿಯಂತ್ರಿಸಲಾಗುತ್ತಿದೆಯೇ ಎಂಬುದನ್ನು ಉತ್ತಮ ಉತ್ಪಾದನಾ ನಿಯಮಗಳಡಿ ಪರಿಶೀಲಿಸಲಾಗುತ್ತದೆ.
ನೇಪಾಳಕ್ಕೆ ಔಷಧಿಗಳನ್ನು ಪೂರೈಕೆ ಮಾಡುವ ಫಾರ್ಮಾಸ್ಯೂಟಿಕಲ್ ಕಂಪೆನಿಗಳ ಉತ್ಪಾದನಾ ಘಟಕಗಳ ಪರಿಶೀಲನೆಗಾಗಿ ಕಳೆದ ಎಪ್ರಿಲ್ ಹಾಗೂ ಜುಲೈ ತಿಂಗಳಲ್ಲಿ ನೇಪಾಳದ ಔಷಧಿ ಇಲಾಖೆಯು ಔಷಧಿ ತಪಾಸಕರ ತಂಡವೊಂದನ್ನು ಬಾರತಕ್ಕೆ ಕಳುಹಿಸಿತ್ತು.
ನೇಪಾಳವು ನಿಷೇಧಿಸಿರುವ ಭಾರತದ 16 ಫಾರ್ಮಾಸ್ಯೂಟಿಕಲಂ ಕಂಪೆನಿಗಳಲ್ಲಿ, ದಿವ್ಯ ಫಾರ್ಮಸಿ, ರೇಡಿಯಂಟ್ ಪ್ಯಾರೆಂಟೆರಲ್ಸ್ ಲಿ., ಮರ್ಕ್ಯುರಿ ಲಾಬೊರೇಟರೀಸ್, ಅಲಿಯಾನ್ಸ್ ಬಯೋಟೆಕ್, ಕ್ಯಾಪ್‌ಟ್ಯಾಬ್ ಬಯೋಟೆಕ್, ಝೀ ಲ್ಯಾಬೋರೇಟರೀಸ್ ಲಿ., ಜಿಎಲ್‌ಎಸ್ ಫಾರ್ಮಾ, ಕ್ಯಾಪ್‌ಟ್ಯಾಬ್ ಬಯೋಟೆಕ್, ಡ್ಯಾಫೋಡಿಲ್ಸ್ ಫಾರ್ಮಾಸ್ಯೂಟಿಕಲ್ಸ್ ಲಿ., ಕ್ಯಾಡಿಲಾ ಹೆಲ್ತ್‌ಕೇರ್ ಲಿ,, ಶ್ರೀ ಆನಂದ್ ಲೈಫ್ ಸಯನ್ಸ್ ಲಿ. ಒಳಗೊಂಡಿವೆ.