ಖೇಲೋ ಇಂಡಿಯಾ ಯೂತ್ಗೇಮ್ಸ್ | ಬಾಲಕಿಯರ ವಾಲಿಬಾಲ್ ತಂಡಕ್ಕಾಗಿ ಡಿ.28ರಂದು ಆಯ್ಕೆ ಪ್ರಕ್ರಿಯೆ ಪ್ರಾರಂಭ
ಬೆಂಗಳೂರು ಡಿ.20: ಖೇಲೋ ಇಂಡಿಯಾ ಯೂತ್ ಗೇಮ್ಸ್ನ್ನು ಮಧ್ಯಪ್ರದೇಶ ಮತ್ತು ದೆಹಲಿ ರಾಜ್ಯದಲ್ಲಿ 2023ರ ಜ.30ರಿಂದ ಫೆ.11ರವರೆಗೆ ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ರಾಜ್ಯದ ಬಾಲಕಿಯರ, ವಾಲಿಬಾಲ್ ತಂಡವನ್ನು ಕಳುಹಿಸಲು ಆಯ್ಕೆ ಪ್ರಕ್ರಿಯೆ 2022ರ ಡಿ.28ರಂದು ನಡೆಯಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖಾ ತಿಳಿಸಿದೆ.
ಆಯ್ಕೆ ಪ್ರಕ್ರಿಯೆ 2022ರ ಡಿ.28ರಂದು ಬುಧವಾರ ಬೆಳಗ್ಗೆ 9 ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯದ ಪ್ರತಿಭಾವಂತೆ ವಾಲಿಬಾಲ್, ಬಾಲಕಿಯರ ಕ್ರೀಡಾಪಟುಗಳು(2004ರ ಜ.1ರಂದು ನಂತರ ಜನಿಸಿರುವ ಬಾಲಕಿಯರು) ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳೂ ಯಾವುದೇ ರೀತಿಯ ಭತ್ಯೆಗೆ ಆರ್ಹರಿರುವುದಿಲ್ಲ ಎಂದು ಇಲಾಖೆ ಹೇಳಿದೆ.
ಹೆಚ್ಚಿನ ಮಾಹಿತಿಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಹಿರಿಯ ವಾಲಿಬಾಲ್ ತರಬೇತುದಾರರಾದ ಅಶೋಕ್ ಕೆ. ಸಿ. ಮೊಬೈಲ್ ಸಂಖ್ಯೆ 9844123832 ಇವರನ್ನು ಸಂಪರ್ಕಿಸಬುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ, ಜಂಟಿ ನಿರ್ದೇಶಕರು(ಆಡಳಿತ), ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.