ಅರೆ ನಗ್ನತೆ ಪ್ರದರ್ಶನ ಆರೋಪ: ಉರ್ಫಿ ಜಾವೇದ್‌ರನ್ನು ವಶಕ್ಕೆ ಪಡೆದ ದುಬೈ ಪೊಲೀಸ್

ದುಬೈ: ಅರೆ ನಗ್ನತೆ ಪ್ರದರ್ಶಿಸುವಂಥ ಉಡುಗೆ ತೊಟ್ಟು ವಿಡಿಯೊ ಚಿತ್ರೀಕರಿಸಿದ ಆರೋಪದಲ್ಲಿ ನಟಿ, ಸಾಮಾಜಿಕ ಮಾಧ್ಯಮ ತಾರೆ ಉರ್ಫಿ ಜಾವೇದ್‌ರನ್ನು ದುಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ತಮ್ಮ ವಸ್ತ್ರವಿನ್ಯಾಸದ ಆಯ್ಕೆಗಾಗಿ ಹೆಸರಾಗಿರುವ ಉರ್ಫಿ ಜಾವೇದ್ ನಗ್ನತೆ ಪ್ರದರ್ಶನಕ್ಕೆ ನಿರ್ಬಂಧವಿದ್ದ ಸಾರ್ವಜನಿಕ ಸ್ಥಳದಲ್ಲಿ ಅರೆ ನಗ್ನತೆ ಪ್ರದರ್ಶಿಸುವಂಥ ಉಡುಗೆ ತೊಟ್ಟು ವಿಡಿಯೊ ಚಿತ್ರೀಕರಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ.
ಯುಎಇ ಪ್ರವಾಸದಲ್ಲಿರುವ ಉರ್ಫಿ ಜಾವೇದ್, ವಿಡಿಯೊ ಒಂದನ್ನು ಚಿತ್ರೀಕರಿಸುವಾಗ ದುಬೈ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ಯುಎಇ ದೇಶದಲ್ಲಿ ನಗ್ನತೆ ಪ್ರದರ್ಶನಕ್ಕೆ ನಿರ್ಬಂಧವಿದೆ. ಉರ್ಫಿ ಜಾವೇದ್ ತಮ್ಮ ಸಾರ್ವಜನಿಕ ನಡವಳಿಕೆಗಾಗಿ ದುಬೈ ಪೊಲೀಸರಿಂದ ವಿಚಾರಣೆ ಎದುರಿಸುತ್ತಿದ್ದಾರೆ ಎಂದು hindustantimes.com ವರದಿ ಮಾಡಿದೆ.
Next Story