Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ವಿಶ್ವಕಪ್‌ ಗೆದ್ದರೂ ಮೆಸ್ಸಿ ಕಪ್‌ ಮನೆಗೆ...

ವಿಶ್ವಕಪ್‌ ಗೆದ್ದರೂ ಮೆಸ್ಸಿ ಕಪ್‌ ಮನೆಗೆ ಕೊಂಡೊಯ್ಯುವಂತಿಲ್ಲ: ಕಾರಣವೇನು ಗೊತ್ತೇ?

21 Dec 2022 4:20 PM IST
share
ವಿಶ್ವಕಪ್‌ ಗೆದ್ದರೂ ಮೆಸ್ಸಿ ಕಪ್‌ ಮನೆಗೆ ಕೊಂಡೊಯ್ಯುವಂತಿಲ್ಲ: ಕಾರಣವೇನು ಗೊತ್ತೇ?

ದೋಹಾ: ಫಿಫಾ ವಿಶ್ವಕಪ್‌ (FIFA world cup) ಫೈನಲ್‌ನಲ್ಲಿ ಫ್ರಾನ್ಸ್‌ ತಂಡದ ಎದುರು ಗೆದ್ದು ಅರ್ಜೆಂಟಿನಾದ ಲಿಯೊನೆಲ್‌ ಮೆಸ್ಸಿ (Lionel Messi) ಅವರ ನೇತೃತ್ವದ ತಂಡ ಸಂಭ್ರಮಾಚರಣೆಯಲ್ಲಿದೆ. ತಮ್ಮ ಚೊಚ್ಚಲ ವಿಶ್ವಕಪ್‌ ಪಂದ್ಯವಾಳಿಯನ್ನು ಆಡಿದ 16 ವರ್ಷಗಳ ನಂತರ ಮೆಸ್ಸಿ ಅವರಿಗೆ ಈ ಪ್ರತಿಷ್ಠಿತ ಟ್ರೋಫಿ ಲಭಿಸಿದೆ. ಆದರೆ ಅವರು ಅಥವಾ ಅವರ ತಂಡ ಈ ಟ್ರೋಫಿಯನ್ನು ತಮ್ಮ ದೇಶಕ್ಕೆ ಕೊಂಡೊಯ್ಯುವಂತಿಲ್ಲ.

ಮೂಲ ಫಿಫಾ ವಿಶ್ವಕಪ್‌ ಟ್ರೋಫಿಯನ್ನು ಜೂಲ್ಸ್‌ ರಿಮೆಟ್‌ ಟ್ರೋಫಿ ಎಂದು ಕರೆಯಲಾಗುತ್ತಿತ್ತು. ಮಾಜಿ ಫಿಫಾ ಅಧ್ಯಕ್ಷ ಜೂಲ್ಸ್‌ ರಿಮೆಟ್‌ ಅವರ ಗೌರವಾರ್ಥ ಈ ಹೆಸರು ಇಡಲಾಗಿತ್ತು. ವಿಶ್ವಕಪ್‌ ಪಂದ್ಯಾವಳಿಯನ್ನು ಆಯೋಜಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಮೊದಲ ವಿಶ್ವಕಪ್‌ ಪಂದ್ಯಾವಳಿ ನಡೆದ 1930 ರಿಂದ ಹಿಡಿದು 1970 ತನಕ ಮೂಲ ಟ್ರೋಫಿಯನ್ನು ಗೆದ್ದ ತಂಡಗಳಿಗೆ ನೀಡಲಾಗುತ್ತಿತ್ತು. ಚಿನ್ನ ಲೇಪಿತ ಸ್ಟರ್ಲಿಂಗ್‌ ಬೆಳ್ಳಿ ಬಳಸಿ ತಯಾರಿಸಲಾದ ಟ್ರೋಫಿಯ ತೂಕ 3.8 ಕೆಜಿ ಆಗಿತ್ತು.

ಆಗಿನ ಫಿಫಾ ನಿಯಮದ ಪ್ರಕಾರ ವಿಶ್ವಕಪ್‌ ಅನ್ನು ಮೂರು ಬಾರಿ ಗೆದ್ದ ದೇಶಗಳು ಮೂಲ ಟ್ರೋಫಿಯನ್ನು ಇರಿಸಬಹುದಾಗಿತ್ತು. ಈ ನಿಯಮದ ಪ್ರಕಾರ 1970 ರಲ್ಲಿ ಮೂರನೇ ಬಾರಿ ವಿಶ್ವ ಕಪ್‌ ಗೆದ್ದ ಬ್ರೆಝಿಲ್‌ ತಂಡ ಜೂಲ್ಸ್‌ ರಿಮೆಟ್‌ ಟ್ರೋಫಿಯನ್ನು ತೆಗೆದುಕೊಂಡಿತ್ತು. ಬ್ರೆಝಿಲ್‌ನ ರಿಯೋ ಡಿ ಜನೈರೋ ದಲ್ಲಿರುವ ಬ್ರೆಝಿಲಿಯನ್‌ ಫುಟ್ಬಾಲ್‌ ಕಾನ್ಫೆಡರೇಶನ್‌ ಮುಖ್ಯ ಕಾರ್ಯಾಲಯದಲ್ಲಿ ಈ ಟ್ರೋಫಿಯನ್ನು ಪ್ರದರ್ಶನಕ್ಕಿಡಲಾಗಿತ್ತು. ಆದರೆ 1983 ರಲ್ಲಿ ಅದು ಕಳ್ಳತನವಾಗಿತ್ತು ಹಾಗೂ ನಂತರ ಅದು ಪತ್ತೆಯಾಗಲೇ ಇಲ್ಲ. ಟ್ರೋಫಿ ಕದ್ದವರು ಅದರ ಲೋಹವನ್ನು ಕರಗಿಸಿ ಮಾರಾಟ ಮಾಡಿರಬೇಕೆಂದು ಶಂಕಿಸಲಾಗಿದೆ.

ಟ್ರೋಫಿ ಕದ್ದು ಹೋಗುತ್ತಿರುವುದು ಇದು ಎರಡನೇ ಬಾರಿಯಾಗಿತ್ತು. ಇದಕ್ಕೂ ಮೊದಲು 1966 ರಲ್ಲಿ ಇಂಗ್ಲೆಂಡ್‌ ದೇಶದ ಆತಿಥ್ಯದಲ್ಲಿ ನಡೆಯಬೇಕಿದ್ದ ವಿಶ್ವ ಕಪ್‌ ಪಂದ್ಯಾವಳಿಯ ಕೆಲವೇ ದಿನಗಳಲ್ಲಿ ಅದು ಲಂಡನ್‌ ಸಾರ್ವಜನಿಕ ಪ್ರದರ್ಶನ ಸ್ಥಳದಿಂದ ಕಳ್ಳತನವಾಗಿತ್ತು ಆದರೆ ಆಗ 10 ದಿನಗಳಲ್ಲಿಯೇ ಅದನ್ನು ಪತ್ತೆಹಚ್ಚಲಾಗಿತ್ತು.

ನಂತರದ ವರ್ಷಗಳಲ್ಲಿ ವಿಜೇತರಿಗೆ ಮೂಲ ಫಿಫಾ ಟ್ರೋಫಿಯ ಪಡಿಯಚ್ಚಾಗಿರುವ ಚಿನ್ನ ಲೇಪಿತ ಕಂಚಿನ ಟ್ರೋಫಿ ನೀಡಲಾಗುತ್ತಿದೆ. ಮೂಲ ಟ್ರೋಫಿಯನ್ನು ಭದ್ರತಾ ಕಾರಣಗಳಿಗಾಗಿ ವಿಜೇತ ತಂಡ ತನ್ನ ದೇಶಕ್ಕೆ ಕೊಂಡೊಯ್ಯುವಂತಿಲ್ಲ.

share
Next Story
X