ಇಟಲಿ ಕಾಂಗ್ರೆಸ್‍ನ ಒಂದು ನಾಯಿಯೂ ಭಾರತದ ಪರವಾಗಿ ಬೊಗಳಿಲ್ಲ: ಸಿ.ಟಿ ರವಿ

ಬೆಳಗಾವಿ, ಡಿ.20: 'ಇಟಲಿ ಕಾಂಗ್ರೆಸ್‍ನ ಒಂದು ನಾಯಿಯೂ ಭಾರತದ ಪರವಾಗಿ ಬೊಗಳಿಲ್ಲ, ಬದಲಿಗೆ ಚೀನಾ, ಪಾಕಿಸ್ತಾನದ ಪರ ಬೊಗಳುತ್ತೆ' ಎಂದು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬುಧವಾರ ಸುವರ್ಣ ಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಒಂದು ನಾಯಿಯೂ ಭಾಗವಹಿಸಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆಯವರು ಹೇಳಿದ್ದಾರೆ. ಆದರೆ ಭಾರತೀಯ ಜನಸಂಘ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದೆ. ಸರ್ವಾಧಿಕಾರಿ ಇಂದಿರಾ ಗಾಂಧಿಯನ್ನು ಕೆಳಗೆ ಇಳಿಸಿದರು. ಖರ್ಗೆಯವರು ಅಂದಿನ ದಿನಮಾನ ನೆನಪಿಸಿಕೊಳ್ಳಲಿ'' ಎಂದು ತಿರುಗೇಟು ನೀಡಿದರು.
'ಮಹಾತ್ಮಾ ಗಾಂಧೀಜಿಯ ಕಾಂಗ್ರೆಸ್ ಅಲ್ಲ ಇದು, ಈಗ ಇರೋದು ಇಟಲಿ ಕಾಂಗ್ರೆಸ್' ಎಂದು ವಾಗ್ದಾಳಿ ನಡೆಸಿದರು.
Next Story