ಹಿಂದೂ ಅಮೆರಿಕ ಫೌಂಡೇಶನ್‌ನ ಮಾನನಷ್ಟ ಮೊಕದ್ದಮೆ ತಿರಸ್ಕರಿಸಿದ ಅಮೆರಿಕ ಕೋರ್ಟ್
ಅಲ್‌ಜಝೀರಾ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಲೇಖನಗಳ ವಿರುದ್ಧ ಅರ್ಜಿ ಸಲ್ಲಿಸಿದ್ದ ಹಿಂದುತ್ವ ಸಂಘಟನೆ

ವಾಶಿಂಗ್ಟನ್,ಡಿ.21: ಅಲ್‌ಜಝೀರಾ (Al Jazeera)ಸುದ್ದಿಜಾಲತಾಣದಲ್ಲಿ ಪ್ರಕಟವಾದ ಎರಡು ಲೇಖನಗಳಿಗೆ ಸಂಬಂಧಿಸಿ ಖ್ಯಾತ ಇತಿಹಾಸತಜ್ಞೆ ಆಡ್ರಿ ಟ್ರುಶ್(Audrey Trush) ಕೆ ಹಾಗೂ ಇತರ ನಾಲ್ವರು ಕಾರ್ಯಕರ್ತರ ವಿರುದ್ಧ ಹಿಂದೂ ಅಮೆರಿಕನ್ ಫೌಂಡೇಶನ್(Hindu American Foundation) ಸಲ್ಲಿಸಿದ ಮಾನನಷ್ಟ ಮೊಕದ್ದಮೆಯನ್ನು ಅಮೆರಿಕದ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ.
ಟ್ರುಶ್‌ಕೆ ಹಾಗೂ ಇತರರು ನೀಡಿದ ಹೇಳಿಕೆಗಳು ದುರುದ್ದೇಶದಿಂದ ಕೂಡಿದ್ದವು ಎಂಬುದಾಗಿ ಅರ್ಥೈಸಲು ಸಾಧ್ಯವಿಲ್ಲವೆಂದು ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸುತ್ತಾ ತಿಳಿಸಿದೆ.
ಅಮೆರಿಕ ಮೂಲದ ಹಿಂದುತ್ವ ಸಂಘಟನೆ ‘ಹಿಂದೂ ಅಮೆರಿಕ ಫೌಂಡೇಶನ್’, ಕಳೆದ ವರ್ಷದ ಮೇ 7ರಂದು ಕೊಲಂಬಿಯಾ ಪ್ರಾಂತದಲ್ಲಿ ಈ ಅರ್ಜಿಯನ್ನು ಸಲ್ಲಿಸಿತ್ತು. ಟ್ರಶ್‌ಕೆ ಜೊತೆಗೆ ‘ಮಾನವಹಕ್ಕುಗಳಿಗಾಗಿ ಹಿಂದೂಗಳು’ (Hindus for Human Rights)ಸಂಸ್ಥೆಯ ಸಂಸ್ಥಾಪಕರಾದ ಸುನೀತಾ ವಿಶ್ವನಾಥ್ (Sunita Vishwanath)ಹಾಗೂ ರಾಜು ರಾಜಗೋಪಾಲ್(Raju Rajagopal), ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ರಶೀದ್ ಅಹ್ಮದ್(Rashid Ahmed), ಉತ್ತರ ಅಮೆರಿಕದ ಇಂಡಿಯನ್ ಅಮೆರಿಕನ್ ಕ್ರೈಸ್ತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಜಾನ್ ಪ್ರಭುದಾಸ್(John Prabhudas) ವಿರುದ್ದವೂ ಮೊಕದ್ದಮೆ ಹೂಡಿತ್ತು.
8,33,000 (ಸುಮಾರು 6.9 ಕೋಟಿ ರೂ.) ಮೊತ್ತದ ಫೆಡರಲ್ ಕೋವಿಡ್ 19 ಪರಿಹಾರ ನಿಧಿಯನ್ನು ಹಿಂದೂ ಅಮೆರಿಕನ್ ಫೌಂಡೇಶನ್ ಹಾಗೂ ಇತರ ನಾಲ್ಕು ಅಮೆರಿಕ ಪ್ರತಿಷ್ಠಾನಗಳಿಗೆ ನೀಡಲಾಗಿದೆಯೆಂದು 2021ರ ಎಪ್ರಿಲ್‌ನಲ್ಲಿ ಅಲ್‌ಜಝೀರಾ(Al Jazeera) ಸುದ್ದಿಜಾಲತಾಣದಲ್ಲಿ ಪ್ರಕಟವಾದ ಲೇಖನಗಳಲ್ಲಿ ಆರೋಪಿಸಲಾಗಿತ್ತು. ಈ ಐದು ಸಂಘಟನೆಗಳು ಹಿಂದೂ ಶ್ರೇಷ್ಠತಾವಾದಿ ಹಾಗೂ ಹಿಂದೂ ಧಾರ್ಮಿಕ ಗುಂಪುಗಳ ಜೊತೆ ನಂಟು ಹೊಂದಿರುವುದಾಗಿ ವರದಿ ತಿಳಿಸಿದ್ದವು.
ಹಿಂದೂ ಅಮೆರಕನ್ ಪ್ರತಿಷ್ಠಾನವು ನರೇಂದ್ರ ಮೋದಿ ಸರಕಾರದ ವಿರುದ್ಧ ಮಾಡಲಾಗುವ ಯಾವುದೇ ಟೀಕೆಗಳನ್ನು ತಳ್ಳಿಹಾಕಲು ಲಾಬಿ ನಡೆಸುವಂತಹ ಸಂಘಟನೆಯಾಗಿದೆ ಎಂದು ಅಲ್‌ಜಝೀರಾ ಸುದ್ದಿಜಾಲತಾಣದಲ್ಲಿ ಪ್ರಕಟವಾದ ಲೇಖನದಲ್ಲಿ ಬರೆದಿರುವ ಬರಹಗಾರರಾದ ಹಮೀದ್ ನಾಕ್ ಅವರನ್ನು ಸಹಸಂಚುಗಾರನೆಂದು ಹಿಂದೂ ಅಮೆರಿಕ ಪ್ರತಿಷ್ಠಾನವು ಮೊಕದ್ದಮೆಯಲ್ಲಿ ಆರೋಪಿಸಿತ್ತು
ವಿಶ್ವನಾಥ, ಅಹ್ಮದ್ ಹಾಗೂ ಪ್ರಭುದಾಸ್ ಅವರ ಹೇಳಿಕೆಗಳನ್ನು ಕೂಡಾ ಅಲ್‌ಜಝೀರಾದಲ್ಲಿ ಪ್ರಕಟವಾದ ಲೇಖನದಲ್ಲಿ ಉಲ್ಲೇಖಿಸಲಾಗಿತ್ತು.
ಲೇಖನದಲ್ಲಿ ಉಲ್ಲೇಖಿಸಲಾಗಿರುವ ‘ಭಾರತದಲ್ಲಿ ಜನಾಂಗೀಯ ನರಮೇಧ ತಡೆಗಟ್ಟಲು ಮೈತ್ರಿಕೂಟ’ ಎಂಬ ಸಂಘಟನೆಯ ಹೇಳಿಕೆಯೊಂದು ಅಮೆರಿಕ ಪ್ರತಿಷ್ಠಾನ ವಿಶ್ವಹಿಂದೂ ಪರಿಷದ್ ಅಮೆರಿಕ,, ಅಮೆರಿದ ಏಕಲವ್ಯ ವಿದ್ಯಾಲಯ ಪ್ರತಿಷ್ಠಾನ, ಇನ್‌ಫಿನಿಟಿ ಪ್ರತಿಷ್ಠಾನ ಹಾಗೂ ಸೇವಾ ಇಂಟರ್‌ನ್ಯಾಶನಲ್ ಸಂಸ್ಥೆಗಳು ಆರೆಸ್ಸೆಸ್ ಜೊತೆ ಬಾಹ್ಯ ನಂಟುಗಳನ್ನು ಹೊಂದಿದೆ’ ಎಂಬುದಾಗಿ ಆರೋಪಿಸಿತ್ತು.
ಈ ಐದು ಸಂಘಟನೆಗಳು. ಕ್ರೈಸ್ತರು, ಮುಸ್ಲಿಮರು, ದಲಿತರು ಹಾಗೂ ಭಾರತದಲ್ಲಿನ ಇತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯ ಹಿಂದೆ ಇರುವ ಚಾಲಕಶಕ್ತಿಯಾಗಿರುವ ಹಿಂದುತ್ವ ಶ್ರೇಷ್ಠತಾವಾದದ ಚಿಂತನೆಯನ್ನು ಪ್ರತಿ ಪಾದಿಸುತ್ತವೆ ಎಂದು ಜನಾಂಗೀಯ ನರಮೇಧದ ತಡೆಗೆ ಮೈತ್ರಿಕೂಟ ಲೇಖನದಲ್ಲಿ ಆಪಾದಿಸಿತ್ತು.
ಪ್ರತಿವಾದಿಗಳಾದ ವಿಶ್ವನಾಥ್, ರಾಜಗೋಪಾಲ್, ಅಹ್ಮದ್ ಹಾಗೂ ಪ್ರಭುದಾಸ್ ಅವರಿಗೆ ಜನಾಂಗೀಯ ನರಮೇಧ ತಡೆಗೆ ಮೈತ್ರಿಕೂಟದಲ್ಲಿ ನಿಯಂತ್ರಣಾತ್ಮಕ ಹಿತಾಸಕ್ತಿಯನ್ನು ಹೊಂದಿದ ಸದಸ್ಯರಾಗಿದ್ದಾರೆ. ಅವರ ಹೇಳಿಕೆಗಳು ಹಿಂದೂ ಅಮೆರಿಕ ಫೌಂಡೇಶನ್‌ನ ವರ್ಚಸ್ಸು ಹಾಗೂ ಅದರ ನಿಧಿ ಸಂಗ್ರಹ ಸಾಮರ್ಥ್ಯದ ಮೇಲೆ ಗಣನೀಯ ಹಾನಿಯನ್ನುಂಟು ಮಾಡಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಆದಾಗ್ಯೂ ಪ್ರಕರಣದ ವಿಚಾರಣೆಯನ್ನು ನಡೆಸಿದ ಅಮೆರಿಕದ ಜಿಲ್ಲಾ ನ್ಯಾಯಾಧೀಶ ಅಮಿತ್ ಪಿ. ಮೆಹ್ತಾ (Amit P. Mehta)ಅವರು ಅಲ್‌ಜಝೀರಾದ ಸುದ್ದಿಜಾಲತಾಣದಲ್ಲಿ ಪ್ರಕಟವಾದ ಲೇಖನವು ದುರುದ್ದೇಶದಿಂದ ಕೂಡಿದೆ ಎಂಬುದನ್ನು ದೃಢಪಡಿಸಲು ಹಿಂದೂ ಅಮೆರಿಕ ಪ್ರತಿಷ್ಟಾನವು ವಿಫಲವಾಗಿದೆಯೆಂದು ಎಂದು ಘೋಷಿಸುವ ಮೂಲಕ ಅರ್ಜಿಯನ್ನು ತಳ್ಳಿಹಾಕಿದ್ದಾರೆ.