ಡಾ. ಪುಷ್ಪಲತಾ ರಿಗೆ ಸುಮಿತ್-2022 ಪ್ರಶಸ್ತಿ

ಭಟ್ಕಳ : ಮುರ್ಡೇಶ್ವರದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಪುಷ್ಪಲತಾ ಅವರಿಗೆ ಉತ್ತಮ ಕಾರ್ಯನಿರ್ವಹಣೆಗಾಗಿ ಬ್ಯಾಂಕಾಂಕ್‍ನಲ್ಲಿ ನಡೆದ ಏಷಿಯಾ ಪೆಸಿಪಿಕ್ ಎಜ್ಯುಕೇಶನ್ ಸುಮಿತ್ ಅವಾರ್ಡ್-2022 ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಬಾಲಿವುಡ್‍ನ ಹೆಸರಾಂತ ಗಾಯಕಿ ಅಮೀಷ ಪಾಟೀಲ ಉಪಸ್ಥಿತರಿದ್ದರು. ಪುಷ್ಪಲತಾ ವೈದ್ಯರಿಗೆ ಪ್ರಶಸ್ತಿ ಲಭಿಸಿರುವುದು ಬೀನಾ ವೈದ್ಯ ಸಂಸ್ಥೆಯ ಅಧ್ಯಕ್ಷ ಮಂಕಾಳ ವೈದ್ಯ, ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
Next Story





