SSLC ಪರೀಕ್ಷಾ ಶುಲ್ಕವನ್ನು ಪಾವತಿಸಲು ಡಿ.27 ಕೊನೆಯ ದಿನ
![SSLC ಪರೀಕ್ಷಾ ಶುಲ್ಕವನ್ನು ಪಾವತಿಸಲು ಡಿ.27 ಕೊನೆಯ ದಿನ SSLC ಪರೀಕ್ಷಾ ಶುಲ್ಕವನ್ನು ಪಾವತಿಸಲು ಡಿ.27 ಕೊನೆಯ ದಿನ](https://www.varthabharati.in/sites/default/files/images/articles/2022/12/22/360955-1671720662.jpg)
ಬೆಂಗಳೂರು, ಡಿ.22: ಪ್ರಸಕ್ತ ವರ್ಷದ ಎಸೆಸೆಲ್ಸಿ ಪರೀಕ್ಷೆಗೆ ನೋಂದಣಿ ಮಾಡಿ, ಪರೀಕ್ಷಾ ಶುಲ್ಕವನ್ನು ಪಾವತಿ ಮಾಡಲು ಡಿ.27ರವರೆಗೆ ಅವಕಾಶ ನೀಡಲಾಗಿದೆ.
ಶಾಲಾ ಲಾಗಿನ್ನಲ್ಲಿ ಸೃಜಿಸಲಾಗುವ ಚಲನ್ ಅನ್ನು ಬಳಸಿಯೇ ಶುಲ್ಕವನ್ನು ಪಾವತಿ ಮಾಡಬೇಕು. ಗುರುವಾರದಿಂದ(ಡಿ.22) ಮಂಡಳಿಯ ಶಾಲಾ ಲಾಗಿನ್ನಲ್ಲಿ ಚಲನ್ ಜನರೇಟ್ ಆಗುತ್ತಿದ್ದು, ಮಂಡಳಿಯ ಇತರೆ ಯಾವುದೇ ಚಲನ್ ಬಳಸಿ ಶುಲ್ಕವನ್ನು ಪಾವತಿ ಮಾಡಬಾರದು.
ಚಲನ್ ಮುದ್ರಿಸಿಕೊಂಡು ಬ್ಯಾಂಕಿಗೆ ಪರೀಕ್ಷಾ ಶುಲ್ಕವನ್ನು ಜಮೆ ಮಾಡಲು ಡಿ.29ರವರೆಗೆ ಅವಕಾಶ ನೀಡಲಾಗಿದೆ. ಜ.6ರೊಳಗೆ ಪುನರಾವರ್ತಿತ ಅಭ್ಯರ್ಥಿಗಳ ಮೂಲ ಚಲನ್ಗಳನ್ನು ಮತ್ತು ಇತರೆ ದಾಖಲೆಗಳನ್ನು ಮಂಡಳಿಗೆ ಸಲ್ಲಿಸಲು ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ.
Next Story