ರಾಜ್ಯದ ಬೆಟ್ಟ ಕುರುಬರಿಗೆ ಎಸ್ಟಿ ಸ್ಥಾನಮಾನ ನೀಡುವ ಮಸೂದೆ ಸಂಸತ್ತಿನಲ್ಲಿ ಅಂಗೀಕಾರ

ಹೊಸದಿಲ್ಲಿ: ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡ (ST)ಗಳ ಪಟ್ಟಿಗೆ ‘ಕಾಡು ಕುರುಬ’(Wild shepherd) ಜೊತೆಗೆ ಬೆಟ್ಟ ಕುರುಬ ಸಮುದಾಯವನ್ನು ಸೇರಿಸಲು ಮಸೂದೆಯನ್ನು ಸಂಸತ್ತು ಗುರುವಾರ ಅಂಗೀಕರಿಸಿತು.
ಸಂವಿಧಾನ (ಪರಿಶಿಷ್ಟ ಪಂಗಡಗಳು) ಆದೇಶ (ನಾಲ್ಕನೇ ತಿದ್ದುಪಡಿ) ಮಸೂದೆ 2022ನ್ನು ರಾಜ್ಯಸಭೆಯು ಗುರುವಾರ ಧ್ವನಿಮತದ ಮೂಲಕ ಅಂಗೀಕರಿಸಿತು. ಲೋಕಸಭೆಯು ಡಿ.19ರಂದು ಈ ಮಸೂದೆಯನ್ನು ಅಂಗೀಕರಿಸಿತ್ತು. ಕರ್ನಾಟಕದಲ್ಲಿ ವಾಸವಿರುವ,ಕೇವಲ 5,000 ಜನಸಂಖ್ಯೆಯನ್ನು ಹೊಂದಿರುವ ಬೆಟ್ಟ ಕುರುಬ ಸಮುದಾಯಕ್ಕೆ ನ್ಯಾಯವನ್ನೊದಗಿಸಲು ಮಸೂದೆಯು ಬಯಸಿದೆ ಎಂದು ಅದನ್ನು ಸದನದಲ್ಲಿ ಮಂಡಿಸಿದ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ ಮುಂಡಾ(Arjuna Munda) ಹೇಳಿದರು.
Next Story





