ಮಂಗಳೂರು: ‘ಲ್ಯಾಂಡ್ ಟ್ರೇಡ್ಸ್ ಪ್ರಾಪರ್ಟಿ ಶೋ’ಗೆ ಅವಧಿ ವಿಸ್ತರಣೆ

ಮಂಗಳೂರು: ನಗರದ ಪ್ರಖ್ಯಾತ ಪ್ರಾಪರ್ಟಿ ಡೆವೆಲಪರ್ ‘ಲ್ಯಾಂಡ್ ಟ್ರೇಡ್ಸ್’ ಸಂಸ್ಥೆಯು ನಗರದ ಬಲ್ಮಠದ ಕಲೆಕ್ಟರ್ ಗೇಟ್ ಬಳಿಯ ‘ಮೈಲ್‌ಸ್ಟೋನ್-25’ ವಾಣಿಜ್ಯ ಸಂಕೀರ್ಣದಲ್ಲಿ ಏರ್ಪಡಿಸಲಾಗಿರು ‘ಲ್ಯಾಂಡ್ ಟ್ರೇಡ್ಸ್ ಪ್ರಾಪರ್ಟಿ ಶೋ’ದ ಅವಧಿಯನ್ನು ಡಿ.24ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಈ ಹಿಂದೆ ಡಿ.22ರವರೆಗೆ ಮೇಳ ನಡೆಸುವುದಾಗಿ ತಿಳಿಸಲಾಗಿತ್ತು. ಆದರೆ ಗ್ರಾಹಕರ ಒತ್ತಾಸೆಯ ಮೇರೆಗೆ ಡಿ.24ರವರೆಗೆ ಈ ಮೇಳವನ್ನು ವಿಸ್ತರಿಸಲಾಗಿದೆ. ಗ್ರಾಹಕರು ಬೆಳಗ್ಗೆ 10ರಿಂದ ಸಂಜೆ 7ರ ತನಕ ಮೇಳಕ್ಕೆ ಭೇಟಿ ನೀಡಿ ನೂತನ ಯೋಜನೆಗಳಲ್ಲಿನ ಖರೀದಿಗೆ ಆಕರ್ಷಕ ಕೊಡುಗೆ ಪಡೆಯಬಹುದು ಎಂದು ಲ್ಯಾಂಡ್ ಟ್ರೇಡ್ಸ್‌ನ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ತಿಳಿಸಿದ್ದಾರೆ.
Next Story