Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ​ಹಸಿರು ವಲಯ ನಿರ್ಮಿಸದ, ಸರಕಾರದ ಆದೇಶ...

​ಹಸಿರು ವಲಯ ನಿರ್ಮಿಸದ, ಸರಕಾರದ ಆದೇಶ ಪಾಲಿಸದ ಎಂಆರ್‌ಪಿಎಲ್ ಕಂಪೆನಿ ವಿರುದ್ಧ ಕ್ರಮಕ್ಕೆ ಆಗ್ರಹ

22 Dec 2022 11:23 PM IST
share
​ಹಸಿರು ವಲಯ ನಿರ್ಮಿಸದ, ಸರಕಾರದ ಆದೇಶ ಪಾಲಿಸದ ಎಂಆರ್‌ಪಿಎಲ್ ಕಂಪೆನಿ ವಿರುದ್ಧ ಕ್ರಮಕ್ಕೆ ಆಗ್ರಹ

ಮಂಗಳೂರು: ಎಂಆರ್‌ಪಿಎಲ್ ಮೂರನೇ ಹಂತದ ಕೋಕ್ ಸಲ್ಫರ್ ಘಟಕದಿಂದ ಜೋಕಟ್ಟೆ, ಕಳವಾರು, ಕೆಂಜಾರು ಗ್ರಾಮಗಳಲ್ಲಿ ಪರಿಸರ ಮಾಲಿನ್ಯ, ಶಬ್ಧ ಮಾಲಿನ್ಯ, ವಾಯುಮಾಲಿನ್ಯ, ಅಂತರ್ಜಲ ಕಲುಷಿತದಿಂದ ಜನರು ವಿವಿಧ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಕಂಪೆನಿಯ ಅಕ್ರಮಗಳ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಜ್ಯ ಸರಕಾರ ಮೌನ ವಹಿಸಿದೆ. ಹಾಗಾಗಿ ಹಸಿರು ವಲಯ ನಿರ್ಮಿಸದ ಮತ್ತು ಆದೇಶವನ್ನೂ ಪಾಲಿಸದ ಎಂಆರ್‌ಪಿಎಲ್ ಕಂಪೆನಿಯ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜೋಕಟ್ಟೆಯ ನಾಗರಿಕ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ನಗರದ ‘ವಿಕಾಸ’ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೧೪ರ ಎಂಆರ್‌ಪಿಎಲ್ ಮೂರನೆ ಹಂತದ ಕೋಕ್ ಸಲ್ಫರ್ ಘಟಕ ಕಾರ್ಯಾಚರಣೆ ಅರಂಭಿಸಿತು. ಆ ಸಂದರ್ಭ ಕೋಕ್, ಸಲ್ಫರ್ ಹಾರುಬೂದಿ ಗ್ರಾಮದೊಳಗೆ ಸುರಿಯುವುದು, ವಿಪರೀತ ಶಬ್ಧ ಮಾಲಿನ್ಯ, ಆರೋಗ್ಯದ ಸಮಸ್ಯೆಗಳು ಜೋಕಟ್ಟೆ, ಕಳವಾರು ಭಾಗದಲ್ಲಿ ಕಾಣಿಸಿಕೊಂಡಾಗ ಎರಡು ವರ್ಷ ತೀವ್ರ ಹೋರಾಟಗಳನ್ನು ಸಂಘಟಿಸಲಾಗಿತ್ತು. ಪೊಲೀಸ್ ಬಲ ಪ್ರಯೋಗ, ವಿವಿಧ ರೀತಿಯ ತಂತ್ರಗಳ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನಗಳು ನಡೆದರೂ ಕೂಡ ಅದೆಲ್ಲವನ್ನು ಎದುರಿಸಿ ಗ್ರಾಮಸ್ಥರ ಹೋರಾಟ ಯಶಸ್ಸು ಕಂಡಿತ್ತು. ಆರು ಅಂಶಗಳ ಪರಿಹಾರ ಕ್ರಮಗಳನ್ನು ಎಂಆರ್‌ಪಿಎಲ್ ಕಂಪೆನಿಯು ಕಾಲಮಿತಿಯೊಳಗಡೆ ಕೈಗೊಳ್ಳಬೇಕು ಎಂದು ೨೦೧೬ರಲ್ಲಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಅದರಲ್ಲಿ ಐದು ಆದೇಶಗಳನ್ನು ಅರೆಬರೆಯಾಗಿ ಕಂಪೆನಿ ಪಾಲಿಸಿದೆ. ಆದರೆ ಮಾಲಿನ್ಯದಿಂದ ಅತೀ ಹೆಚ್ಚು ಹಾನಿಗೊಳಗಾಗಿರುವ ಪ್ರದೇಶದಲ್ಲಿ ೨೭ ಎಕರೆ ಜಮೀನು ವಶಪಡಿಸಿಕೊಂಡು ಅಲ್ಲಿ ಹಸಿರು ವಲಯ ನಿರ್ಮಿಸಬೇಕು ಮತ್ತು ಅಲ್ಲಿಂದ ಒಕ್ಕಲೆಬ್ಬಿಸಲ್ಪಡುವ ಸಂತ್ರಸ್ತರಿಗೆ ನಿಯಮದಂತೆ ಪುನರ್ವಸತಿ ಕಲ್ಪಿಸಬೇಕು ಎಂಬ ಆದೇಶವನ್ನು ಜಾರಿಗೆ ತರದೆ ಕಂಪೆನಿಯು ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ಮೂರನೆ ಹಂತದ ಘಟಕದ ಸರ್ವೆ ಸಂದರ್ಭ ಹಸಿರು ವಲಯ ನಿರ್ಮಿಸಬೇಕಿದ್ದ ೮೩ ಎಕರೆ ಜಮೀನಿನಲ್ಲಿ ೪೦ ಎಕರೆಯಲ್ಲಿ ಮಾತ್ರ ಹಸಿರು ವಲಯ ನಿರ್ಮಿಸಿರುವುದು ಅಧಿಕೃತವಾಗಿ ಗುರುತಿಸಲಾಯಿತು. ಉಳಿದ ಕೆಲವು ಖಾಲಿ ಜಾಗಗಳು, ಸರಕಾರದ ಆದೇಶದಂತೆ ಕೋಕ್ ಡಂಪಿಂಗ್ ಯಾರ್ಡ್ ಸ್ಥಳಾಂತರದಿಂದ ಒದಗುವ ಜಾಗಗಳಲ್ಲಿ ಹಸಿರು ವಲಯ ನಿರ್ಮಿಸುವುದಾಗಿ ಕಂಪೆನಿ ಹೇಳಿಕೊಂಡಿತ್ತು. ಅದರ ಹೊರತಾಗಿಯೂ ೨೭ ಎಕರೆ ಹಸಿರು ವಲಯ ಕೊರತೆ ಬೀಳುವುದನ್ನು ಜೋಕಟ್ಟೆ, ಕಳವಾರು, ಕೆಂಜಾರು ಗ್ರಾಮದ ಅತಿ ಹೆಚ್ಚು ಹಾನಿಗೀಡಾಗಿರುವ ಪ್ರದೇಶದಲ್ಲಿ ಜಮೀನು ವಶಪಡಿಸಿ ಅಲ್ಲಿ ಭರ್ತಿ ಮಾಡುವಂತೆ ಆದೇಶಿಸಲಾಗಿತ್ತು. ಆದರೆ ಕಂಪೆನಿ ಈವರೆಗೂ ಬಾಕಿ ಉಳಿಸಿರುವ ಹಸಿರು ವಲಯ ಭರ್ತಿ ಮಾಡುವ ವಾಗ್ದಾನವನ್ನು ಪೂರೈಸಿಲ್ಲ. ಕಂಪೆನಿಯ ಒಳಗಡೆಯಲ್ಲಿ ತೋರಿಸಿದ್ದ ಖಾಲಿ ಜಮೀನು, ಕೋಕ್ ಡಂಪಿಂಗ್ ಯಾರ್ಡ್ ಸ್ಥಳಾಂತರದಿಂದ ಒದಗಿರುವ ಜಮೀನನ್ನೂ ಅನ್ಯ ಉದ್ದೇಶಕ್ಕೆ ಬಳಸಿದೆ ಎಂದು ಆರೋಪಿಸಿದರು.

ಸರಕಾರದ ಆರು ಅಂಶಗಳ ಪರಿಹಾರ ಕ್ರಮದ ಆದೇಶ ಪಾಲಿಸದಿರುವುದು, ಶೇ.೩೩ ಹಸಿರು ವಲಯ ನಿರ್ಮಿಸದೆ ಗಂಭೀರ ಅಪರಾಧ ಎಸಗಿರುವುದರ ಕುರಿತು ಸರಕಾರ ಮೌನ ವಹಿಸಿರುವುದು ಖಂಡನೀಯ. ಇದರಿಂದ ಸುತ್ತಲ ಗ್ರಾಮದಲ್ಲಿ ಅನಾರೋಗ್ಯ ಕಳವಳಕಾರಿ ಮಟ್ಟಕ್ಕೆ ತಲುಪಿದೆ. ಈ ಬಗ್ಗೆ ಸಂಸದರು, ಶಾಸಕರು ಜನರ ಸಮಸ್ಯೆಗಳಿಗಿಂತಲೂ ಕಂಪೆನಿಯ ಹಿತಾಸಕ್ತಿಗಳ ಕುರಿತು ಹೆಚ್ಚು ಕಾಳಜಿ ಹೊಂದಿದ್ದಾರೆ.

ಈ ಸ್ಥಿತಿ ಹೀಗೆ ಮುಂದುವರಿದರೆ ಭೂಪಾಲ್ ಮಾದರಿಯ ದುರಂತ ಸುರತ್ಕಲ್, ಬಜ್ಪೆಭಾಗದಲ್ಲಿ ಉಂಟಾಗುವ ಸಾಧ್ಯತೆಯಿದೆ. ಸರಕಾರ ತಕ್ಷಣ ಎಚ್ಚೆತ್ತು ಎಂಆರ್‌ಪಿಎಲ್ ಕಂಪೆನಿಯ ಮೇಲೆ ಕಠಿಣ ಕ್ರಮಗಳನ್ನು ಜರುಗಿಸಬೇಕು. ಸರಕಾರದ ಆದೇಶ, ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಾತರಿ ಪಡಿಸಬೇಕು. ಅದಕ್ಕಾಗಿ ನಾಗರಿಕ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಬೇಕು. ಎಕ್ಕಾರು, ಪೆರ್ಮುದೆ ಭಾಗದಲ್ಲಿ ಕಂಪೆನಿ ಸಾವಿರ ಎಕರೆಯಲ್ಲಿ ಘಟಕ ವಿಸ್ತರಣೆಗೆ ಪಡೆದಿರುವ ಅನುಮತಿಯನ್ನು ರದ್ದುಗೊಳಿಸಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್, ಹೋರಾಟ ಸಮಿತಿ ಪ್ರಮುಖರಾದ ಅಬೂಬಕ್ಕರ್ ಬಾವ ಪುರುಷೋತ್ತಮ ಆಚಾರ್ಯ, ಶ್ರೀನಿವಾಸ್, ರೋನಾಲ್ಡ್ ಕ್ರಾಸ್ತ, ಲ್ಯಾನ್ಸಿ ಪೆರಿಸ್, ಅಬ್ದುಲ್ ರಝಾಕ್, ಅಹ್ಮದ್ ಬಾವ ನಲ್ಕೆಮಾರ್, ಸಿಲ್ವಿಯಾ ಜೋಕಟ್ಟೆ, ಮರಿಯಾ ಕ್ರಾಸ್ತ, ಜಾಬಿರ್ ಉಪಸ್ಥಿತರಿದ್ದರು.

share
Next Story
X