ದಾವಣಗೆರೆ | ಯುವತಿಯನ್ನು ಹಾಡಹಗಲೇ ಇರಿದು ಕೊಲೆಗೈದ ಪ್ರಕರಣ: ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಮೃತ್ಯು

ದಾವಣಗೆರೆ, ಡಿ.23: ಯುವತಿಯನ್ನು ಹಾಡಹಗಲೇ ರಸ್ತೆಯಲ್ಲಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಬಳಿಕ ವಿಷ ಸೇವಿಸಿದ್ದ ಆರೋಪಿ ಯುವಕ ಸಾದಾತ್ ಅಲಿಯಾಸ್ ಚಾಂದ್ ಪೀರ್ ಮೃತಪಟ್ಟಿದ್ದಾನೆ.
ನಗರ ಪಿ.ಜೆ. ಬಡಾವಣೆಯ ಚರ್ಚ ಬಳಿ ಗುರುವಾರ ಹಾಡು ಹಗಲೇ ಚಾಂದ್ ಸುಲ್ತಾನ್(28) ಯುವತಿಯನ್ನು ಚಾಕುನಿಂದ ಇರಿದು ಕೊಲೆಗೈಯಲಾಗಿತ್ತು. ಈ ಕೊಲೆ ಪ್ರಕರಣದ ಆರೋಪಿ ಸಾದಾತ್ ನಂತರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ವಿಚಾರ ತಿಳಿದು ಪೊಲೀಸರು ಆತನನ್ನು ದಾವಣಗೆರೆ ಸಿಟಿ ಸೆಂಟ್ರಲ್ ಆಸ್ಪತ್ರೆ ಗೆ ದಾಖಲು ಮಾಡಿದ್ದರು. ಚಿಕಿತ್ಸೆ ಫಲಿಸದೇ ಆತ ಇಂದು ಮೃತಪಟ್ಟಿದ್ದಾನೆ.
ವಿದ್ಯಾನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





