ಐಪಿಎಲ್ ಹರಾಜು: ದಾಖಲೆಯ ರೂ. 18.5 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾದ ಸ್ಯಾಮ್ ಕರನ್
ರೂ 17.5 ಕೋಟಿಗೆ ಕ್ಯಾಮರೋನ್ ಗ್ರೀನ್ ಖರೀದಿಸಿದ ಮುಂಬೈ ಇಂಡಿಯನ್ಸ್

ರೂ 17.5 ಕೋಟಿಗೆ ಕ್ಯಾಮರೋನ್ ಗ್ರೀನ್ ಖರೀದಿಸಿದ ಮುಂಬೈ ಇಂಡಿಯನ್ಸ್
ಕೊಚ್ಚಿ: ಇಂದು ಕೊಚ್ಚಿಯಲ್ಲಿ ನಡೆಯುತ್ತಿರುವ ಐಪಿಎಲ್ 2023 ಹರಾಜಿನಲ್ಲಿ ಇಂಗ್ಲೆಂಡಿನ ಸ್ಯಾಮ್ ಕರನ್ ಮತ್ತು ಆಸ್ಟ್ರೇಲಿಯಾದ ಕ್ಯಾಮರೋನ್ ಗ್ರೀನ್ ಅವರನ್ನು ಸಾರ್ವಕಾಲಿಕ ಐಪಿಎಲ್ ಹರಾಜು ದಾಖಲೆಯ ಮೊತ್ತಕ್ಕೆ ಕ್ರಮವಾಗಿ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಪಡೆದುಕೊಂಡಿವೆ. ಸ್ಯಾಮ್ ಅವರು ರೂ 18.50 ಕೋಟಿಗೆ ಹರಾಜಾದರೆ ಕ್ಯಾಮರೋನ್ ಅವರು ರೂ 17.50 ಕೋಟಿಗೆ ಹರಾಜಾದರು.
ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ರೂ 16.25 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.
ಇಂಗ್ಲೆಂಡ್ ತಂಡದ ಹ್ಯಾರಿ ಬ್ರೂಕ್ ಅವರನ್ನು ಪಡೆಯಲು ಸಾಕಷ್ಟು ಬಿಡ್ ನಡೆದು ಅಂತಿಮವಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಅವರನ್ನು ರೂ 13.25 ಕೋಟಿಗೆ ಪಡೆದುಕೊಂಡಿದೆ. ಇದೇ ತಂಡ ಮಾಯಾಂಕ್ ಅಗರ್ವಾಲ್ ಅವರನ್ನು ರೂ 8.25 ಕೋಟಿಗೆ ಪಡೆದುಕೊಂಡಿದೆ.
ಕೇನ್ ವಿಲಿಯಂಸನ್ ಅವರು ರೂ 2 ಕೋಟಿಗೆ ಗುಜರಾತ್ ಟೈಟನ್ಸ್ ಪಾಲಾಗಿದ್ದಾರೆ.
ಇಂದು ಒಟ್ಟು 405 ಆಟಗಾರರು ಹರಾಜಾಗಲಿದ್ದಾರೆ.
Next Story