ಈಗ ಎಷ್ಟು ಬೇಕೋ ಅಷ್ಟು ಸಾಲ ಮಾಡಿ, ಕುಮಾರಣ್ಣ ಅಧಿಕಾರಕ್ಕೆ ಬಂದು ಮನ್ನಾ ಮಾಡ್ತಾರೆ: ಅನಿತಾ ಕುಮಾರಸ್ವಾಮಿ
ಶಾಸಕಿಯ ವಿಡಿಯೋ ವೈರಲ್
ರಾಮನಗರ , ಡಿ. 23: 'ಈಗ ಎಷ್ಟು ಬೇಕೋ ಅಷ್ಟು ಸಾಲ ಮಾಡಿಕೊಳ್ಳಿ, ಕುಮಾರಣ್ಣ ಆ ಸಾಲವನ್ನು ಮನ್ನಾ ಮಾಡುತ್ತಾರೆ' ಎಂದು ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ' ಹೆಣ್ಣು ಮಕ್ಕಳು ಸ್ತ್ರೀ ಶಕ್ತಿ ಯೋಜನೆಯಡಿ ಈಗ ಎಷ್ಟು ಬೇಕೋ ಅಷ್ಟು ಸಾಲ ಮಾಡಿಕೊಳ್ಳಿ, ಕುಮಾರಣ್ಣ ಅವರು ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಸಾಲವನ್ನು ಮನ್ನಾ ಮಾಡುತ್ತಾರೆ ಎಂದು ಘೋಷಿಸಿದ್ದಾರೆ' ಎಂದು ಹೇಳುತ್ತಿದ್ದಂತೆ ಕಾರ್ಯಕರ್ತರು ಚಪ್ಪಾಳೆ ತಟ್ಟಿದರು.
ಸದ್ಯ ಅನಿತಾ ಕುಮಾರಸ್ವಾಮಿ ನೀಡಿರುವ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ.
ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ರಾಮನಗರ JDS ಅಭ್ಯರ್ಥಿ: ಶಾಸಕಿ ಅನಿತಾ ಘೋಷಣೆ
MLA of #Ramanagara Anitha Kumaraswamy wife of JDS head @hd_kumaraswamy tells voters to take loans under Stree Shakti scheme and to not to repay the loans. After Kumaraswamy comes to power, he will write off the loans in 24 hours. No problem #Karnataka pic.twitter.com/vbS8poQJt3
— Imran Khan (@KeypadGuerilla) December 23, 2022