Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಅವಿಸ್ಮರಣೀಯ ಸಾಕರ್ ವಿಶ್ವಕಪ್‌ನಲ್ಲಿ...

ಅವಿಸ್ಮರಣೀಯ ಸಾಕರ್ ವಿಶ್ವಕಪ್‌ನಲ್ಲಿ ಎಂಬಾಪೆ ಎಂಬ ಹುಡುಗನ ಸಾಹಸದಾಟ

ಇಬ್ರಾಹಿಂ ಅಡ್ಕಸ್ಥಳಇಬ್ರಾಹಿಂ ಅಡ್ಕಸ್ಥಳ24 Dec 2022 10:16 AM IST
share
ಅವಿಸ್ಮರಣೀಯ ಸಾಕರ್ ವಿಶ್ವಕಪ್‌ನಲ್ಲಿ ಎಂಬಾಪೆ ಎಂಬ ಹುಡುಗನ ಸಾಹಸದಾಟ

ಖತರ್‌ನಲ್ಲಿ ನಡೆದ 22ನೇ ಆವೃತ್ತಿಯ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನ ಸಾಕರ್ ಜಗತ್ತಿನ ನೂತನ ಅಧಿಪತಿಯಾಗಿ  ಚಾಂಪಿಯನ್‌ಪಟ್ಟ ಅಲಂಕರಿಸಿತು. ಕಳೆದ ಬಾರಿಯ ಚಾಂಪಿಯನ್ ಆಗಿದ್ದ ಫ್ರಾನ್ಸ್‌ಗೆ ಸತತ ವಿಶ್ವಕಪ್ ಗೆಲ್ಲುವ ಪ್ರಯತ್ನ ಫಲಿಸಲಿಲ್ಲ.

2022 ನವೆಂಬರ್ 20ರಿಂದ ಡಿಸೆಂಬರ್ 18ರ ತನಕ ಅರಬರ ನಾಡಲ್ಲಿ ಮೊದಲ ಹಾಗೂ ಏಶ್ಯದಲ್ಲಿ ನಡೆದ ಎರಡನೇ ವಿಶ್ವಕಪ್ ಈ ವರೆಗೆ ನಡೆದ ವಿಶ್ವಕಪ್‌ಗಳ ಪೈಕಿ ಅತ್ಯಂತ ದುಬಾರಿ ಎನಿಸಿಕೊಂಡಿದೆ. ಈ ವಿಶ್ವಕಪ್‌ನ ಪೂರ್ವದಲ್ಲಿ ನಾನಾ ವಿವಾದಗಳು. ಅನೇಕ ಸವಾಲುಗಳು ಎದುರಾಗಿದ್ದರೂ, ಸಂಘಟಕರು ಎಲ್ಲವನ್ನು ನಿಭಾಯಿಸಿ ಅಚ್ಚುಕಟ್ಟಾಗಿ ವಿಶ್ವಕಪ್‌ನ್ನು ನಡೆಸಿದರು. 32 ತಂಡಗಳು ಈ ಬಾರಿ 29 ದಿನಗಳ ಕಾಲ ಖತರ್‌ನ ಐದು ನಗರಗಳ ಎಂಟು ಕ್ರೀಡಾಂಗಣಗಳಲ್ಲಿ  64 ಪಂದ್ಯಗಳನ್ನು ಆಡಿದವು. ವಿಶ್ವಕಪ್ ಕೂಟದ ಆತಿಥ್ಯ ವಹಿಸಿಕೊಂಡ ಹಿನ್ನೆಲೆಯಲ್ಲಿ ಕೂಟದಲ್ಲಿ ಸ್ವಯಂಚಾಲಿತ ಅವಕಾಶ ಪಡೆದಿದ್ದ ಖತರ್ ಗ್ರೂಪ್ ಹಂತದ ಮೂರು ಪಂದ್ಯಗಳನ್ನು ಕಳೆದುಕೊಂಡಿತು. ಪ್ರತೀ ಪಂದ್ಯದಲ್ಲೂ ಸೋಲು ಅನುಭವಿಸಿ ಹೊರಬಿದ್ದ ಮೊದಲ ಆತಿಥೇಯ ತಂಡ ಎನಿಸಿಕೊಂಡಿತು. ಇದೇ ರೀತಿ 2010ರಲ್ಲಿ ಆತಿಥ್ಯ ವಹಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡವು ಮೊದಲ ಹಂತವನ್ನು ದಾಟದೆ ಹೊರಬಿದ್ದಿರುವುದು ಈಗ ಇತಿಹಾಸ.

ಈ ಬಾರಿಯ ಫೈನಲ್ ಪಂದ್ಯವು ಫುಟ್ಬಾಲ್ ವಿಶ್ವಕಪ್‌ನ ಇತಿಹಾಸದಲ್ಲಿ ಅವಿಸ್ಮರಣೀಯ ಎನಿಸಿಕೊಂಡಿದೆ. ಹೆಚ್ಚುವರಿ ಸಮಯದ ನಂತರ ಪಂದ್ಯ 3-3ರಲ್ಲಿ ಡ್ರಾ ಆಗಿ ಕೊನೆಗೊಂಡಾಗ  ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನ ತಂಡವು ಫ್ರಾನ್ಸ್‌ನ್ನು 4-2 ಅಂತರದಲ್ಲಿ ಬಗ್ಗು ಬಡಿದು ಚಾಂಪಿಯನ್ ಕಿರೀಟವನ್ನು ಧರಿಸಿತು. 

ಇದು ಅರ್ಜೆಂಟೀನದ ಮೂರನೇ ಪ್ರಶಸ್ತಿಯಾಗಿದೆ ಮತ್ತು 1986 ಬಳಿಕ  ಮೊದಲ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಜೊತೆಗೆ 2002ರ ಬಳಿಕ ಪ್ರಶಸ್ತಿ ಜಯಿಸಿದ ದಕ್ಷಿಣ ಅಮೆರಿಕದ ಮೊದಲ ರಾಷ್ಟ್ರವಾಗಿದೆ. ಫ್ರಾನ್ಸ್‌ನ ಯುವ  ಆಟಗಾರ ಕಿಲಿಯನ್ ಎಂಬಾಪೆಅವರು ಜಿಯೋಫ್ ಹರ್ಸ್ಟ್ ನಂತರ ವಿಶ್ವಕಪ್ ಫೈನಲ್‌ನಲ್ಲಿ ಹ್ಯಾಟ್ರಿಕ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಪಂದ್ಯಾವಳಿಯಲ್ಲಿ ಗರಿಷ್ಠ ಗೋಲು (8) ಗಳಿಸಿದ ಎಂಬಾಪೆ ಗೋಲ್ಡನ್ ಬೂಟ್ ಹಾಗೂ ಬೆಳ್ಳ್ಳಿಯ ಚೆಂಡು ಗೆದ್ದರು. ಅರ್ಜೆಂಟೀನದ ನಾಯಕ ಲಿಯೋನೆಲ್ ಮೆಸ್ಸಿ ಗೋಲ್ಡನ್ ಬಾಲ್‌ನ್ನು, ಅತ್ಯುತ್ತಮ ಗೋಲು ಕೀಪರ್ ಆಗಿ ಅವರ ತಂಡದ ಎಮಿಲಿಯಾನೊ ಮಾರ್ಟಿನೆಜ್ ಗೋಲ್ಡನ್ ಗ್ಲೋವ್‌ನ್ನು ಮತ್ತು ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿಯನ್ನು ಎಂಜೊ ಫೆರ್ನಾಂಡಿಸ್ ಪಡೆದರು.

ಈ ಪಂದ್ಯಾವಳಿಯು ಹಲವು ವೈಶಿಷ್ಟ್ಯತೆಗಳನ್ನು ದಾಖಲಿಸಿಕೊಂಡಿವೆ. ಮಾಜಿ ಚಾಂಪಿಯನ್ ಜರ್ಮನಿ ಮತ್ತು ಉರುಗ್ವೆ ಗುಂಪು ಹಂತದಲ್ಲೇ ಹೊರಬಿದ್ದಿತು. ವಿಶ್ವದ ಎರಡನೇ ಶ್ರೇಯಾಂಕಿತ ತಂಡ ಮತ್ತು 2018ರಲ್ಲಿ ಮೂರನೇ ಸ್ಥಾನ ಪಡೆದ ತಂಡ ಬೆಲ್ಜಿಯಂ ಗುಂಪು ಹಂತದಲ್ಲಿ ಹೊರಬಿತ್ತು. ಚಾಂಪಿಯನ್  ಅರ್ಜೆಂಟೀನ  ತಂಡವು  ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯ ವಿರುದ್ಧ ಸೋಲಿನ ಆಘಾತ ಅನುಭವಿಸಿತ್ತು. ಮೊದಲ ಸೋಲಿನಿಂದ ಸಾಕಷ್ಟು ಪಾಠವನ್ನು ಕಲಿತುಕೊಂಡ ಅರ್ಜೆಂಟೀನ ಮುಂದೆ ಬಲಿಷ್ಠ ತಂಡವಾಗಿ ಫೈನಲ್ ತಲುಪಿ ತನ್ನ ಪ್ರಶಸ್ತಿಯ ಕನಸನ್ನು ನನಸಾಗಿಸಿತು.

ಐದು ಬಾರಿ ವಿಶ್ವವಿಜೇತ ಮತ್ತು ಟೂರ್ನಮೆಂಟ್‌ನ ಪೂರ್ವದಲ್ಲಿ ಗೆಲ್ಲುವ ಕುದುರೆಯಾಗಿ ಬಿಂಬಿಸಲ್ಪಟ್ಟ ಬ್ರೆಝಿಲ್ ತಂಡವು ಕ್ವಾರ್ಟರ್ ಫೈನಲ್‌ನಲ್ಲಿ ಕ್ರೊಯೇಷಿಯಾ ವಿರುದ್ಧ ಸೋಲು ಅನುಭವಿಸಿ ನಿರ್ಗಮಿಸಿತು. ಕ್ರೊಯೇಷಿಯಾ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಕ್ಕೆ ಶರಣಾಗಿದ್ದರೂ, ಬಳಿಕ ನಡೆದ ಹಣಾಹಣಿಯಲ್ಲಿ ಮೊರೊಕ್ಕೊ ತಂಡವನ್ನು 2-1 ಅಂತರದಲ್ಲಿ ಮಣಿಸಿ ಮೂರನೇ ಸ್ಥಾನ ಪಡೆಯಿತು.

2010ರ ಚಾಂಪಿಯನ್ ಸ್ಪೇನ್ 16ನೇ ಘಟ್ಟದಲ್ಲಿ ಮೊರೊಕ್ಕೊ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲು ಅಭಿಯಾನ ಕೊನೆಗೊಳಿಸಿತು. ಮೊರೊಕ್ಕೊ ತಂಡ ಕ್ವಾರ್ಟರ್ ಫೈನಲ್‌ನಲ್ಲಿ  ಪೋರ್ಚುಗಲ್‌ನ್ನು ಕೂಟದಿಂದ ಹೊರದಬ್ಬಿ ಗಮನ ಸೆಳೆಯಿತು.
ನಾಕೌಟ್ ಹಂತಗಳಲ್ಲಿ ಫೈನಲ್ ಸೇರಿದಂತೆ ಐದು ಪಂದ್ಯಗಳ ಫಲಿತಾಂಶ ಪೆನಾಲ್ಟಿ ಶೂಟೌಟ್‌ನಲ್ಲಿ ಇತ್ಯರ್ಥಗೊಂಡವು. ಅಂದರೆ  90 ನಿಮಿಷಗಳ ನಿಯಮಿತದ ಆಟದ ಸಮಯ ಮತ್ತು ಬಳಿಕ ಹೆಚ್ಚುವರಿ ಸಮಯದಲ್ಲಿ ಇತ್ಯರ್ಥವಾಗಲಿಲ್ಲ. ಇಂತಹ ವಾತಾವರಣ ಸೃಷ್ಟಿಯಾಗಿದ್ದು 64 ವರ್ಷಗಳಲ್ಲಿ ಇದೇ ಮೊದಲ ಬಾರಿಯಾಗಿದೆ.  

ವಿಶ್ವ ಗೆದ್ದ ಮೆಸ್ಸಿ, ಜನಮನ ಜಯಿಸಿದ ಎಂಬಾಪೆ 

ವಿಶ್ವಕಪ್ ಫೈನಲ್‌ನಲ್ಲಿ ಕಿಲಿಯನ್ ಎಂಬಾಪೆಹ್ಯಾಟ್ರಿಕ್ ಗಳಿಸಿದರು. ಪಂದ್ಯದ ಮೊದಲಾರ್ಧದಲ್ಲಿ ಅರ್ಜೆಂಟೀನ 2-0 ಮುಂದೆ ಇತ್ತು. ಮೆಸ್ಸಿ (23ನೇ ನಿ.) ಮತ್ತು ಡಿ ಮರಿಯಾ (36ನೇ ನಿ.) ಗೋಲು ಗಳಿಸಿದ್ದರು. ಆದರೆ ಆಟದ ಸಮಯ ಮುಕ್ತಾಯಗೊಳ್ಳಲು 10 ನಿಮಿಷ ಬಾಕಿ ಇದ್ದಾಗ 80ನೇ ನಿಮಿಷದಲ್ಲಿ ಎಂಬಾಪೆ 97 ಸೆಕೆಂಡ್‌ಗಳ ಅಂತರದಲ್ಲಿ ಅಂದರೆ 80ನೇ ನಿಮಿಷದಲ್ಲಿ ಸಿಕ್ಕಿದ ಪೆನಾಲ್ಟಿ ಅವಕಾಶದಲ್ಲಿ ಮತ್ತು 81ನೇ ನಿಮಿಷದಲ್ಲಿ ಇನ್ನೊಂದು ಮಿಂಚಿನ ಗೋಲು ಗಳಿಸಿ ಸಮಬಲ ಸಾಧಿಸಿದರು. ಹೆಚ್ಚುವರಿ ಸಮಯದ 108ನೇ ನಿಮಿಷದಲ್ಲಿ ಮೆಸ್ಸಿ ಗೋಲು ಅರ್ಜೆಂಟೀನದ ಗೆಲುವಿನ ಆಸೆ ಚಿಗುರುವಂತೆ ಮಾಡಿತ್ತು. ಆದರೆ ಎಂಬಾಪೆ 118ನೇ ನಿಮಿಷದಲ್ಲಿ ತಮಗೆ ದೊರೆತ ಎರಡನೇ ಪೆನಾಲ್ಟಿ ಅವಕಾಶದಲ್ಲಿ ಗೋಲು ಜಮೆ ಮಾಡಿ ಡ್ರಾ(3-3) ಸಾಧಿಸಿ ಫಲಿತಾಂಶವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ನಿರ್ಣಯವಾಗುವಂತೆ ಮಾಡಿದರು.

ಎಂಬಾಪೆ ಪೆನಾಲ್ಟಿ ಶೂಟೌಟ್‌ನಲ್ಲಿ ಮೆಸ್ಸಿಗೆ ಸಮನಾಗಿ ಚೆಂಡನ್ನು ಗುರಿಯತ್ತ ಸಾಗಿಸಿ ಫ್ರಾನ್ಸ್‌ನ ಗೆಲುವಿನ ಅವಕಾಶವನ್ನು ಜೀವಂತವಾಗಿರಿಸಿದ್ದರು. ಆದರೆ ಕಿಂಗ್ಸಿಲ್ ಕೋಮನ್ ಮತ್ತು ಆರೆಲಿಯನ್ ಟ್ಚೌಮೆನಿ ಚೆಂಡನ್ನು ಗುರಿ ತಲುಪಿಸುವಲ್ಲಿ ಎಡವಿದ ಕಾರಣದಿಂದಾಗಿ ಫ್ರಾನ್ಸ್ ಸತತ ವಿಶ್ವ ಚಾಂಪಿಯನ್ ಪಟ್ಟವನ್ನಲಂಕರಿಸುವ ಅವಕಾಶ ಕಳೆದುಕೊಂಡಿತು.

ಅರ್ಜೆಂಟೀನದ ಎಲ್ಲ ಆಟಗಾರರು ಗೆಲುವಿನ ಸಂಭ್ರಮದಲ್ಲಿದ್ದಾಗ ಅರ್ಜೆಂಟೀನದ ನಾಯಕ ಮೆಸ್ಸಿ ಅವರು ಮೌನವಾಗಿ ಎಂಬಾಪೆಯ ಕೈ ಹಿಡಿದು ಮುಂದೆ ಸಾಗುವ ಮೂಲಕ ಕ್ರೀಡಾಸ್ಫೂರ್ತಿಯನ್ನು ಮೆರೆದರು. 35ರ ಹರೆಯದ ಮೆಸ್ಸಿ ವೃತ್ತಿಜೀವನ ವಿಶ್ವಕಪ್ ಗೆಲ್ಲುವುದೊಂದಿಗೆ ಪರಿಪೂರ್ಣಗೊಂಡಿದೆ. ಅರ್ಜೆಂಟೀನ ನಾಯಕ ಅಂತಿಮವಾಗಿ ಎಲ್ಲಾ ಚಾಂಪಿಯನ್ಸ್ ಲೀಗ್‌ಗಳು, ದೇಶೀಯ ಚಾಂಪಿಯನ್‌ಶಿಪ್‌ಗಳು ಮತ್ತು ಕಪ್‌ಗಳನ್ನು ಜಯಿಸಿದ ದಾಖಲೆಗೆ ವಿಶ್ವಕಪ್ ವಿಜೇತ ಪದಕವನ್ನು ಸೇರಿಸಿದ್ದಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಆಡಿರುವ 7 ಪಂದ್ಯಗಳ ಪೈಕಿ ಪೊಲ್ಯಾಂಡ್ ವಿರುದ್ಧದ 1 ಪಂದ್ಯವನ್ನು ಹೊರತುಪಡಿಸಿ ಎಲ್ಲ ಪಂದ್ಯಗಳಲ್ಲೂ ಗೋಲು ಗಳಿಸಿದ್ದಾರೆ. ಎರಡು ಪೆನಾಲ್ಟಿ ಶೂಟೌಟ್‌ಗಳಲ್ಲೂ ಚೆಂಡನ್ನು ಯಶಸ್ವಿಯಾಗಿ ಗುರಿ ತಲುಪಿಸಿದ್ದಾರೆ. ಇದೀಗ ಫುಟ್ಬಾಲ್ ದಂತಕಥೆ ಡಿಗೊ ಮರಡೋನಾ ಸಾಲಿಗೆ ಸೇರಿದ್ದಾರೆ.

23ರ ಹರೆಯದ ಕಿಲಿಯನ್ ಎಂಬಾಪೆ 2018ರ ವಿಶ್ವಕಪ್ ಜಯಿಸಿದ ಫ್ರಾನ್ಸ್ ತಂಡದ ಸದಸ್ಯರಾಗಿದ್ದರು. ಅವರು ಫೈನಲ್‌ನಲ್ಲಿ 1, ಪ್ರಿಕ್ವಾರ್ಟರ್ ಫೈನಲ್‌ನಲ್ಲಿ 2 ಮತ್ತು ಗ್ರೂಪ್ ಹಂತದ ಪಂದ್ಯದಲ್ಲಿ 1 ಗೋಲು ಸೇರಿದಂತೆ 4 ಗೋಲುಗಳನ್ನು ದಾಖಲಿಸಿ ಫಿಫಾ ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿಯನ್ನು ಅಂದು ಬಾಚಿಕೊಂಡಿದ್ದರು. ಈ ಬಾರಿ ಆಡಿದ 7 ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಒಟ್ಟು 8 ಗೋಲು ಜಮೆ ಮಾಡಿದ್ದಾರೆ. ಫೈನಲ್‌ನಲ್ಲಿ  ಅರ್ಜೆಂಟೀನ ವಿರುದ್ಧ ಬಹುತೇಕ ಏಕಾಂಗಿಯಾಗಿ ಹೋರಾಟ ನಡೆಸಿದರು. ಆದರೆ ಅವರ ಪ್ರಯತ್ನವೊಂದೇ ಸಾಕಾಗಲಿಲ್ಲ.  ಫ್ರಾನ್ಸ್‌ನ ಸಂಘಟಿತ ಹೋರಾಟದ ಕೊರತೆ ವಿಶ್ವಚಾಂಪಿಯನ್ ಪಟ್ಟವನ್ನು ದೂರ ಮಾಡಿತು.

share
ಇಬ್ರಾಹಿಂ ಅಡ್ಕಸ್ಥಳ
ಇಬ್ರಾಹಿಂ ಅಡ್ಕಸ್ಥಳ
Next Story
X