ಸೇತುವೆಯಿಂದ ಉರುಳಿ ಬಿದ್ದ ಕಾರು, ಬಿಜೆಪಿ ಶಾಸಕನಿಗೆ ಗಾಯ
![ಸೇತುವೆಯಿಂದ ಉರುಳಿ ಬಿದ್ದ ಕಾರು, ಬಿಜೆಪಿ ಶಾಸಕನಿಗೆ ಗಾಯ ಸೇತುವೆಯಿಂದ ಉರುಳಿ ಬಿದ್ದ ಕಾರು, ಬಿಜೆಪಿ ಶಾಸಕನಿಗೆ ಗಾಯ](https://www.varthabharati.in/sites/default/files/images/articles/2022/12/24/361119-1671862412.jpg)
ಪುಣೆ: ಮಹಾರಾಷ್ಟ್ರದ ಬಿಜೆಪಿ ಶಾಸಕ ಜಯಕುಮಾರ್ ಗೋರೆ ಅವರು ಪ್ರಯಾಣಿಸುತ್ತಿದ್ದ ಕಾರು ಶನಿವಾರ ಮುಂಜಾನೆ ಅವರ ಹುಟ್ಟೂರಾದ ಸತಾರಾ ಜಿಲ್ಲೆಯ ಫಾಲ್ತಾನ್ ಬಳಿ ಸೇತುವೆಯಿಂದ ಬಿದ್ದು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಯಕುಮಾರ್ ಗೋರೆ ಅವರಲ್ಲದೆ, ಅವರ ಅಂಗರಕ್ಷಕ ಹಾಗೂ ಚಾಲಕ ಸೇರಿದಂತೆ ವಾಹನದಲ್ಲಿದ್ದ ಇತರ ಮೂವರು ಪ್ರಯಾಣಿಕರಿಗೂ ಗಾಯಗಳಾಗಿವೆ ಎಂದು ಅವರು ಹೇಳಿದರು.
"ಶನಿವಾರ ನಸುಕಿನ ವೇಳೆ ಅಪಘಾತ ಸಂಭವಿಸಿದೆ. ಕಾರು ಚಾಲಕ ತನ್ನ ವಾಹನದ ಮೇಲೆ ನಿಯಂತ್ರಣ ಕಳೆದಕೊಂಡ ಪರಿಣಾಮ ಕಾರು ಲೋನಾಂಡ್-ಫಾಲ್ಟನ್ ರಸ್ತೆಯಿಂದ 30 ಅಡಿ ಕೆಳಗೆ ಸೇತುವೆಯಿಂದ ಬಿದ್ದಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪಘಾತದಲ್ಲಿ ಶಾಸಕ ಗೋರೆ ಸೇರಿ ಮೂವರು ಗಾಯಗೊಂಡಿದ್ದಾರೆ. ಗೋರೆ ಅವರನ್ನು ಪುಣೆ ಮೂಲದ ರೂಬಿ ಹಾಲ್ ಕ್ಲಿನಿಕ್ಗೆ ದಾಖಲಿಸಲಾಗಿದ್ದು, ಇತರ ಗಾಯಾಳುಗಳು ಇತರ ಕೆಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಅವರು ಹೇಳಿದರು.
ಗೋರೆ ಅವರು ಸತಾರಾ ಜಿಲ್ಲೆಯ ಮ್ಯಾನ್ ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.