ಕೃಷಿಕರನ್ನು ಕೃಷಿಕರೇ ಮೊದಲು ಗೌರವಿಸಿ: ರಾಮಕೃಷ್ಣ ಶರ್ಮ
ಪೆರಂಪಳ್ಳಿಯಲ್ಲಿ ರೈತ ದಿನಾಚರಣೆ

ಉಡುಪಿ: ಕೃಷಿಕರನ್ನು ಕೃಷಿಕರೇ ಗೌರವಿಸುವುದನ್ನು ಮೊದಲು ರೂಢಿಸಿಕೊಳ್ಳಬೇಕು. ನಮ್ಮ ಹಿರಿಯರ ರೀತಿಯಲ್ಲಿ ಪರಸ್ಪರ ಪ್ರೀತಿ, ಸಹಕಾರ ಸಹಾಯದ ಮನೋಭಾವವನ್ನು ಬೆಳೆಸಿಕೊಂಡು ವೈಜ್ಞಾನಿಕ ಕೃಷಿ ಮಾಡಲು ಹೊರಟರೆ ಕೃಷಿಕರಷ್ಟು ಶ್ರೀಮಂತರು, ಸುಖಿಗಳು ಬೇರಾರೂ ಇರಲಾರರು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿ ವತಿಯಿಂದ ಪೆರಂಪಳ್ಳಿ ಅಂಬಡೆಬೆಟ್ಟು ಗಿರಿಜಾ ಪೂಜಾರಿ ಮನೆ ವಠಾರದಲ್ಲಿ ಶುಕ್ರವಾರ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಜಿಲ್ಲಾ ಕೃಷಿಕ ಸಂಘದ ಪೆರಂಪಳ್ಳಿ ವಲಯ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಶೀಂಬ್ರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಶಾಸಕ ರಘುಪತಿ ಭಟ್ ಉದ್ಘಾಟಿಸಿದರು.
ಪದಾಧಿಕಾರಿಗಳಾದ ಶ್ರೀನಿವಾಸ್ ಬಲ್ಲಾಳ್, ಫೆಡ್ರಿಕ್ ಡಿಸೋಜಾ, ಪಿ. ಎನ್.ಶಶಿಧರ ರಾವ್, ಶಂಕರ ಕೋಟ್ಯಾನ್, ಅಂತಪ್ಪ ಪೂಜಾರಿ, ಹರಿಕೃಷ್ಣ ಶಿವತ್ತಾಯ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಆಲಿಸ್ ಡಿಸೋಜಾ. ನಗರಸಭಾ ನಾಮ ನಿರ್ದೇಶಿತ ಸದಸ್ಯೆ ಅರುಣಾ ಸುಧಾಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸುತ್ತಿರುವ ಹಿರಿಯ ಕೃಷಿಕರಾದ ಸುಶೀಲ ಪೂಜಾರಿ, ಗಿರಿಜಾ ಅಕ್ಕಮ ಪೂಜಾರಿ, ಬೆನೆಡಿಕ್ಟ್ ಡಿಸೋಜಾ, ಗಿರಿಜಾ ಪೂಜಾರಿ ಮತ್ತು ಹೈನುಗಾರಿಕೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಪಿ.ಕಮಲರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಯಶೋದಾ ಪೂಜಾರಿ ನಡುತೋಟ ಮತ್ತು ಹೆನ್ರಿ ಡಿಸೋಜಾ ಅವರನ್ನು ಅವರುಗಳ ಮನೆಗಳಿಗೇ ಹೋಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಡಭಾಂಡೇಶ್ವರ ವಾರ್ಡಿನ ನಗರಸಭಾ ಸದಸ್ಯ ಯೋಗಿಶ್, ಮರಿಯಾ ಡಿಸೋಜಾ, ಜೂಲಿಯಾನ್ ದಾಂತಿ, ಹೇಮಾ ವಿಜಯ್, ಜಯಂತಿ ಶಂಕರ್, ಶಾಂತಿ ಡಿಸೋಜಾ, ಪೌಸ್ತಿನ್ ಡಿಸೋಜಾ, ಆನಂದ ಜತ್ತನ್ ಹಿರಿಯಡ್ಕ, ರಾಫೇಲ್ ಡಿಸೋಜಾ, ಮಧುರ ಕರಂಬಳ್ಳಿ, ರಾಜೇಶ್, ಜಯಕುಮಾರ್ ಸಾಲ್ಯಾನ್ ಶೀಂಬ್ರ, ಚೆಲುವರಾಜ್ ಪೆರಂಪಳ್ಳಿ, ರವೀಂದ್ರ ಗುಜ್ಜರಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಶ್ರೀಯಾನ್ ಕಾರ್ಯಕ್ರಮ ನಿರೂಪಿಸಿದರೆ, ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ವಂದಿಸಿದರು.