MEIF ವತಿಯಿಂದ ಪೂರ್ವ ಝೋನಲ್ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆ

ಮಂಗಳೂರು: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದ.ಕ ಹಾಗೂ ಉಡುಪಿ ಜಿಲ್ಲೆ (MEIF ) ವತಿಯಿಂದ ಪೂರ್ವ ಝೋನಲ್ ಮಟ್ಟದ ಅಂತರ್ ಶಾಲಾ ಪ್ರತಿಭಾ ಸ್ಪರ್ಧೆ "Talent Hunt -2022 -23" ಡಿ.24 ರಂದು ಆಯಿಶಾ ಆಂಗ್ಲ ಮಾಧ್ಯಮ ಶಾಲೆ ಆತೂರಿನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಡಬ ತಾಲೂಕು ವೈದ್ಯಾಧಿಕಾರಿ ಡಾ. ಸುಚಿತ್ರ ರಾವ್ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಆಯಿಶಾ ಆಂಗ್ಲ ಮಾಧ್ಯಮ ಶಾಲೆ ಇದರ ಅಧ್ಯಕ್ಷರಾದ ಯು.ಎಂ ಅಬ್ದುಲ್ ರವೂಫ್, ಸಂಚಾಲಕರಾದ ಅಬ್ದುಲ್ ಹಸೀಬ್ ,ಡಾ. ಹಾಜಿರಾ ಸಜಿನಿ (ಗಣಿ ಮತ್ತು ಭೂವಿಜ್ಞಾನಿ, ಉಡುಪಿ ಜಿಲ್ಲೆ) ಭಾಗವಹಿಸಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು MEIF ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ವಹಿಸಿದರು. MEIF ಪೂರ್ವ ಝೋನಲ್ ಉಪಾಧ್ಯಕ್ಷ ಕೆ. ಎಂ ಮುಸ್ತಫ ಸುಳ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಯಿಶಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಆಯಿಶಾ ಫರ್ಝಾನ ಸ್ವಾಗತಿಸಿದರು, ಉಪ ಪ್ರಾಂಶುಪಾಲೆ ರಮ್ಯಾ ಕಾರ್ಯಕ್ರಮ ನಿರೂಪಿಸಿದರು.
MEIF ಮಂಗಳೂರು ಝೋನಲ್ ಕನ್ವೀನರ್ ಮುಹಮ್ಮದ್ ಶಾರಿಕ್ ಪ್ರತಿಭಾ ಸ್ಪರ್ಧೆಗಳನ್ನು ಸಂಯೋಜಿಸಿದರು. ಕಾರ್ಯಕ್ರಮದಲ್ಲಿ ಪುತ್ತೂರು , ಸುಳ್ಯ , ಕಡಬ ಉಪ್ಪಿನಂಗಡಿ ವ್ಯಾಪ್ತಿಯ MEIF ವಿದ್ಯಾ ಸಂಸ್ಥೆಗಳ 60 ವಿದ್ಯಾರ್ಥಿಗಳು ಭಾಗವಹಿಸಿದರು. ಎಲ್ಲಾ ಸ್ಪರ್ಧೆಗಳು ಅತ್ಯಂತ ಆಕರ್ಷಣೀಯವಾಗಿ ಮೂಡಿಬಂದಿದ್ದು, ವಿಜೇತರಿಗೆಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿಗಳು 2023 ಜನವರಿ ತಿಂಗಳಿನಲ್ಲಿ ಮಂಗಳೂರಿನ ಟೌನ್ ಹಾಲ್ ನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ " Talent Hunt " ನಲ್ಲಿ ಸ್ಪರ್ಧಿಸಲಿದ್ದಾರೆ.
ಡ್ರಾಯಿಂಗ್ - ಆಯಿಶಾ (ಮೌಂಟೈನ್ ವ್ಯೂ ಆಂಗ್ಲ ಮಾಧ್ಯಮ ಶಾಲೆ ಸಾಲ್ಮರ ಪುತ್ತೂರು .)
ಕ್ವಿಝ್ - ಮುಹಮ್ಮದ್ ಅಫ್ರಾ & ಇಯಾಝ್ ಇಬ್ರಾಹಿಂ (ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು)
ಪಿಕ್ & ಸ್ಪೀಕ್ - ಫಾತಿಮಾ ರಿಝ (ದಾರುಲ್ ಹಿಕ್ಮ ಆಂಗ್ಲ ಮಾಧ್ಯಮ ಶಾಲೆ ಬೆಳ್ಳಾರೆ ಸುಳ್ಯ )
ಸೈನ್ಸ್ ಮಾಡೆಲ್ - ಸಹನಾ ಫಾತಿಮಾ & ರಿಯಾ ಮರ್ಯಮ್ (ಆಯಿಶಾ ಆಂಗ್ಲ ಮಾಧ್ಯಮ ಶಾಲೆ ಆತೂರು )
ಫಾತಿಮಾ ಸಾನಿಯಾ & ಫಾತಿಮಾ ಸನ (ಇಂಡಿಯನ್ ಆಂಗ್ಲ ಮಾಧ್ಯಮ ಶಾಲೆ ಉಪ್ಪಿನಂಗಡಿ )
ಕಾರ್ಯಕ್ರಮದ ತೀರ್ಪುಗಾರರಾಗಿ ಹೈದರ್ ಮರ್ದಾಲ (ಪ್ರಾಂಶುಪಾಲರು -ಮನ್ಶರ್ ಪಾರ ಮೆಡಿಕಲ್ ಕಾಲೇಜು ಬೆಳ್ತಂಗಡಿ) , ಮಯೂರ್ .ಪಿ (ಶಿಕ್ಷಕರು ಹಳೆನೇರಂಕಿ ಸರ್ಕಾರಿ ಶಾಲೆ ) ಸಹಕರಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಆಯಿಶಾ ಆಂಗ್ಲ ಮಾಧ್ಯಮ ಶಾಲೆ ಆತೂರು ವಹಿಸಿತು.