35 ಲಕ್ಷ ಮೌಲ್ಯದ ಗಾಂಜಾ ವಶ; ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು, ಡಿ.24: ಡ್ರಗ್ಸ್ ಮಾರಾಟ ಮಾಡುವವರ ವಿರುದ್ಧ ಕಾರ್ಯಾಚರಣೆ ನಡೆಸಿ ಇಬ್ಬರು ಡ್ರಗ್ ಪೆಡ್ಲರ್‍ಗಳನ್ನು ಬಂಧಿಸಿ, 35 ಲಕ್ಷ ರೂ.ಮೌಲ್ಯದ ಗಾಂಜಾವನ್ನು ಕೋಣನಕುಂಟೆ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಒರಿಸ್ಸಾ ಮೂಲದ ಸೇಥಿ(44), ಮುರಳಿ(26) ಎಂದು ಗುರುತಿಸಲಾಗಿದೆ. ಆರೋಪಿಗಳು ಒರಿಸ್ಸಾ ಹಾಗೂ ಆಂಧ್ರಪ್ರದೇಶದ ಗಡಿ ಭಾಗಗಳ ಕಾಡು ಜನರಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿಕೊಂಡು ಬಂದು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ನಗರದ ವಿವಿಧೆಡೆ ಸಂಚರಿಸಿ ಮಾರಾಟ ಮಾಡಲು ಪ್ರಯತ್ನ ನಡೆಸಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಕೋಣನಕುಂಟೆಯ ಪಿಳ್ಳಗಾನಹಳ್ಳಿಯ ಡಿಪೋ ಪಕ್ಕದ ಹಾಳು ಬಿದ್ದ ಮನೆಯಲ್ಲಿ ಆರೋಪಿಗಳು ಗಾಂಜಾ ಮೂಟೆಗಳನ್ನು ಸಂಗ್ರಹಿಸಿದ್ದು, ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡ ಕೋಣನಕುಂಟೆ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸಿ, ಮೂಟೆಗಳಲ್ಲಿ ಕಟ್ಟಿದ್ದ 35 ಲಕ್ಷ ರೂ.ಮೌಲ್ಯದ 263 ಕೆಜಿ 700 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
Next Story





