ಜಪಾನ್: ಭಾರೀ ಹಿಮಪಾತ 13 ಮಂದಿ ಬಲಿ; ಹಲವರಿಗೆ ಗಾಯ

ಟೋಕಿಯೊ: ಜಪಾನ್(Japan) ಉತ್ತರ ಪ್ರಾಂತ ಹಾಗೂ ಇತರ ಪ್ರಮುಖ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗಿದ್ದು 13 ಮಂದಿ ಮೃತಪಟ್ಟಿದ್ದಾರೆ. ಅವಘಡದಲ್ಲಿ 80ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಹಿಮಪಾತದಿಂದ ವಿದ್ಯುತ್ ಪೂರೈಕೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು 10,000ಕ್ಕೂ ಅಧಿಕ ಮನೆಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಉತ್ತರ ಜಪಾನ್ ಮತ್ತು ಜಪಾನ್ ಸಮುದ್ರ ಕರಾವಳಿಯಲ್ಲಿ ಹಿಮಮಾರುತ ಮತ್ತು ಅಲೆಗಳ ಅಬ್ಬರ ಕಂಡುಬಂದಿದ್ದು ನೆಲ 2 ಅಡಿಗಳಷ್ಟು ಹಿಮದಿಂದ ಮುಚ್ಚಿಹೋಗಿದೆ.
ಉತ್ತರ ಜಪಾನ್ ನಲ್ಲಿ ರೈಲು ಮತ್ತು ವಿಮಾನ ಸೇವೆ ವ್ಯತ್ಯಯಗೊಂಡಿದ್ದು ಕೇಂದ್ರ ಮತ್ತು ಪಶ್ಚಿಮ ಪ್ರಾಂತದ ಹಲವೆಡೆ ಟ್ರಾಫಿಕ್ ಜಾಂ ಉಂಟಾಗಿದೆ. ಹಿಮಪಾತದಿಂದ 13 ಮಂದಿ ಮೃತಪಟ್ಟಿದ್ದಾರೆ. 80 ಮಂದಿ ಗಾಯಗೊಂಡಿದ್ದು ಇವರಲ್ಲಿ 30 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ
Next Story