Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬಿಜೆಪಿಯ ಪ್ರಚಾರದ ವಿಷಯವನ್ನು...

ಬಿಜೆಪಿಯ ಪ್ರಚಾರದ ವಿಷಯವನ್ನು ಸುದ್ದಿಯನ್ನಾಗಿ ಪ್ರಸಾರ ಮಾಡಿದ 'ಆಜ್ ತಕ್' ಮತ್ತು 'ಇಂಡಿಯಾ ಟಿವಿ'

ಬಸಂತ್ ಕುಮಾರ್- newslaundry.comಬಸಂತ್ ಕುಮಾರ್- newslaundry.com25 Dec 2022 6:56 PM IST
share
ಬಿಜೆಪಿಯ ಪ್ರಚಾರದ ವಿಷಯವನ್ನು ಸುದ್ದಿಯನ್ನಾಗಿ ಪ್ರಸಾರ ಮಾಡಿದ ಆಜ್ ತಕ್ ಮತ್ತು ಇಂಡಿಯಾ ಟಿವಿ

ಹೊಸದಿಲ್ಲಿ: ಟಿವಿ ಸುದ್ದಿ ಮಾಧ್ಯಮಗಳ ಅವನತಿಯನ್ನು ನೋಡುತ್ತಿರುವವರಿಗೆ ಮುಂದೆ ಭಾರತೀಯ ಸುದ್ದಿ ನಿರೂಪಕರು ಬಿಜೆಪಿಯ ಪ್ರಚಾರವನ್ನು ಪ್ರಸಾರ ಮಾಡುವ ಕಾರ್ಯಕ್ರಮಗಳನ್ನು ನಿರ್ವಹಿಸಲು ಪಕ್ಷದ ಪ್ರಧಾನ ಕಚೇರಿಯಲ್ಲಿ ಕುಳಿತುಕೊಂಡರೆ ಅಚ್ಚರಿ ಅನ್ನಿಸಲಿಕ್ಕಿಲ್ಲ. ಆದರೆ ಅವರು ಬಿಜೆಪಿಯ ಪ್ರಚಾರ ವಿಭಾಗದಿಂದ ಎತ್ತಿಕೊಂಡ ಬೈಟ್ಗಳನ್ನು ಮತ್ತು ವೀಡಿಯೊಗಳನ್ನು ಪ್ರಸಾರ ಮಾಡಿದರೆ ಏನಾಗಬಹುದು?

ಇತ್ತೀಚಿನ ಚುನಾವಣೆಗಳ ಬಳಿಕ ಟಿವಿ ಸುದ್ದಿ ಮಾಧ್ಯಮಗಳ ದೊಡ್ಡ ವಿಭಾಗವೊಂದು ಆಯೋಜಿಸಿದ್ದ ಹಲವಾರು ಕಾರ್ಯಕ್ರಮಗಳು ಬಿಜೆಪಿಯು ಹಿಮಾಚಲ ಪ್ರದೇಶ ವಿಧಾನಸಭಾ ಮತ್ತು ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಸೋತಿದ್ದರೂ ಎಲ್ಲ ಫಲಿತಾಂಶಗಳು ಬಿಜೆಪಿಯ ಪರವಾಗಿವೆ ಎಂದು ಬಿಂಬಿಸಿದ್ದವು. ಆದರೆ ಗುಜರಾತಿನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದು ಹೌದು. ಬಿಜೆಪಿ ಮತ್ತು ಪ್ರಧಾನಿ ಮೋದಿಯವರನ್ನು ಹೊಗಳಲು ಚಾನೆಲ್ಗಳು ಪರಸ್ಪರ ಪೈಪೋಟಿಗೆ ಬಿದ್ದಿದ್ದರೆ ಡಿ.11ರಂದು ಆಜ್ ತಕ್ ಮತ್ತು ಇಂಡಿಯಾ ಟುಡೇ ಟಿವಿಗಳಲ್ಲಿ ಪ್ರಸಾರವಾಗಿದ್ದ ಎರಡು ಕಾರ್ಯಕ್ರಮಗಳು ಒಂದು ಹೆಜ್ಜೆ ಇನ್ನೂ ಮುಂದಿದ್ದವು. ಈ ಎರಡೂ ಚಾನೆಲ್ಗಳು ತಮ್ಮ ಎಲ್ಲ ಬೈಟ್ಗಳನ್ನು ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ‘Modi Story’ ಟ್ವಿಟರ್ ಹ್ಯಾಂಡಲ್ ಮತ್ತು ವೆಬ್ಸೈಟ್ನಿಂದ ಎತ್ತಿಕೊಂಡಿದ್ದವು. ವಾಸ್ತವದಲ್ಲಿ ಬಿಜೆಪಿ ಅವುಗಳನ್ನು ತಿಂಗಳುಗಳ ಮೊದಲೇ ಪ್ರಕಟಿಸಿತ್ತು.

'ಆಜ್ ತಕ್' ನ ಶ್ವೇತಾ ಸಿಂಗ್ ‘ಯೂಹಿಂ ಕೋಯಿ ಮೋದಿ ನಹೀ ಬನ್ ಜಾತಾ (ಸುಮ್ಮನೆ ಯಾರೂ ಮೋದಿ ಆಗುವುದಿಲ್ಲ)’ ಎಂಬ ಕಾರ್ಯಕ್ರಮವನ್ನು ನಡೆಸಿದ್ದರೆ ಇಂಡಿಯಾ ಟಿವಿಯ ವರದಿಗಾರ ಪವನ್ ನಾರಾ ‘ಮೋದಿ ಸ್ಟೋರಿ’ಯ ನಿರೂಪಕರಾಗಿದ್ದರು.

ಪ್ರಧಾನಿ ಮೋದಿಯವರನ್ನು ಹತ್ತಿರದಿಂದ ಬಲ್ಲವರ ನೆನಪುಗಳನ್ನು ಹಂಚಿಕೊಳ್ಳುವುದು ‘ಮೋದಿ ಸ್ಟೋರಿ ’ವೆಬ್ಸೈಟ್ ನ  ಉದ್ದೇಶವಾಗಿದೆ. ಮಹಾತ್ಮಾ ಗಾಂಧಿಯವರ ಮರಿಮೊಮ್ಮಗಳು ಸುಮಿತ್ರಾ ಗಾಂಧಿಯವರು ಈ ವೆಬ್ಸೈಟ್ ಅನ್ನು ಮಾರ್ಚ್ 2016ರಲ್ಲಿ ಉದ್ಘಾಟಿಸಿದ್ದರು ಮತ್ತು ಸಮಾರಂಭದ ವೀಡಿಯೊವನ್ನು ಪೋಸ್ಟ್ ಮಾಡಿದ್ದ ಬಿಜೆಪಿಯ ಟ್ವಿಟರ್ ಹ್ಯಾಂಡಲ್, ಅದನ್ನು ಸ್ವಯಂಸೇವಕ-ಚಾಲಿತ ಉಪಕ್ರಮ ಎಂದು ಬಣ್ಣಿಸಿತ್ತು.

ಮೋದಿ ಮತ್ತು ಹಲವಾರು ಕೇಂದ್ರ ಸಚಿವರು ಆಗಾಗ್ಗೆ ವೆಬ್ ಸೈಟ್ಗೆ ಪ್ರಚಾರ ಮತ್ತು ಸಂದರ್ಶನಗಳನ್ನು ನೀಡುತ್ತಿರುತ್ತಾರೆ. ಟ್ವಿಟರ್ ನಲ್ಲಿ ಅದನ್ನು ಹಲವಾರು ಬಿಜೆಪಿ ಸಚಿವರು ಮತ್ತು ನಾಯಕರು ಫಾಲೋ ಮಾಡುತ್ತಾರೆ ಮತ್ತು ಖಾತೆಯು ಕೇವಲ ಮೋದಿಯವರನ್ನು ಫಾಲೋ ಮಾಡುತ್ತದೆ.

ಮೋದಿ ಸ್ಟೋರಿ ವೆಬ್ಸೈಟ್ ನಲ್ಲಿಯ ಹೆಚ್ಚಿನ ವೀಡಿಯೊಗಳು NarendraModi.in ಮತ್ತು NaMo ಆ್ಯಪ್ ನಲ್ಲಿಯೂ ಕಾಣಿಸಿಕೊಂಡಿದ್ದವು. ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಇವುಗಳ ಮುಖ್ಯ ಅಧಿಕಾರಿಯೂ ಆಗಿದ್ದಾರೆ.

ತಮ್ಮ ಕಾರ್ಯಕ್ರಮಗಳಲ್ಲಿ ಈ ಬೈಟ್ ಗಳನ್ನು ಬಳಸಿಕೊಳ್ಳಲು 'ಆಜ್ ತಕ್' ಮತ್ತು 'ಇಂಡಿಯಾ ಟಿವಿ' ಅನುಮತಿಯನ್ನು ಪಡೆದುಕೊಂಡಿದ್ದವೇ ಎಂಬ ಸುದ್ದಿಸಂಸ್ಥೆಯ ಪ್ರಶ್ನೆಗೆ ಮಾಳವೀಯ, ‘ಅವುಗಳಿಗೆ ಅನುಮತಿಯ ಅಗತ್ಯವಿಲ್ಲ, ನಮ್ಮ ವಿಷಯಗಳಿಗೆ ನಾವು ಹಕ್ಕುಸ್ವಾಮ್ಯ ಹೊಂದಿಲ್ಲ ಮತ್ತು ಅವರು ಉಲ್ಲೇಖವನ್ನು ತೋರಿಸುವವರೆಗೆ ಅವುಗಳನ್ನು ಬಳಸಲು ಸ್ವತಂತ್ರರಿದ್ದಾರೆ. ವಾಸ್ತವದಲ್ಲಿ ನಮ್ಮ ವಿಷಯಗಳನ್ನು ನೋಡಲು ಮತ್ತು ತಮಗೆ ಸೂಕ್ತವಾದಂತೆ ಅವುಗಳನ್ನು ಬಳಸಲು ನಮ್ಮ ವೆಬ್ಸೈಟ್ ಗಳು ಮತ್ತು ಡಿಜಿಟಲ್ ಪ್ಲ್ಯಾಟ್ಫಾರ್ಮ್ ಗಳಿಗೆ ಭೇಟಿ ನೀಡುವಂತೆ ನಾವು ಜನರನ್ನು ಉತ್ತೇಜಿಸುತ್ತೇವೆ’ ಎಂದು ಉತ್ತರಿಸಿದರು.

ಆಜ್ ತಕ್ ಮತ್ತು ಇಂಡಿಯಾ ಟಿವಿ ಬಿಜೆಪಿಯ ಸಚಿವರು, ಮಾಜಿ ಸಚಿವರಿಂದ ಹಿಡಿದು ಸ್ಥಳೀಯ ನಾಯಕರವರೆಗೆ ಬೈಟ್ ಗಳನ್ನು ಬಳಸಿಕೊಂಡಿವೆ. 1991ರಲ್ಲಿ ಮೋದಿ ಮಧ್ಯಪ್ರದೇಶ ಚುನಾವಣಾ ಉಸ್ತುವಾರಿಯಾಗಿದ್ದಾಗ ಪಕ್ಷದ ರಾಜ್ಯ ಕಚೇರಿಯಲ್ಲಿ ಸಂಯೋಜಕರಾಗಿದ್ದ ಹಿರಿಯ ಬಿಜೆಪಿ ನಾಯಕ ರಘುನಂದನ ಶರ್ಮಾ ಅವರು ಆಜ್ ತಕ್ ನಲ್ಲಿ 3 ನಿಮಿಷ 11 ಸೆಕೆಂಡ್ ಮತ್ತು ಇಂಡಿಯಾ ಟಿವಿಯಲ್ಲಿ 10 ನಿಮಿಷ 11 ಸೆಕೆಂಡ್ಗಳ ಕಾಲ ಕಾಣಿಸಿಕೊಂಡಿದ್ದರು.

ಇದೇ ರೀತಿ ಇತ್ತೀಚಿಗೆ ಬಿಜೆಪಿಯ ಸಂಸದೀಯ ಮಂಡಳಿಗೆ ಸೇರ್ಪಡೆಗೊಂಡಿರುವ ಸುಧಾ ಯಾದವ  ಅವರು ಎರಡೂ ಚಾನೆಲ್ಗಳಲ್ಲಿ ಕಾಣಿಸಿಕೊಂಡು ಮೋದಿಯವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವರ ತಾಯಿ ನೀಡಿದ್ದ 11 ರೂ.ಗಳನ್ನು ಅವರು ತನಗೆ ನೀಡಿದ್ದರ ಕುರಿತು ಹೇಳಿಕೊಂಡಿದ್ದರು. ಅವರು ಆಜ್ ತಕ್ನಲ್ಲಿ 2 ನಿಮಿಷ 10 ಸೆಕೆಂಡ್ ಮತ್ತು ಇಂಡಿಯಾ ಟಿವಿಯಲ್ಲಿ 13 ನಿಮಿಷ 14 ಸೆಕೆಂಡ್ಗಳ ಕಾಲ ಕಾಣಿಸಿಕೊಂಡಿದ್ದರು.

ಛತ್ತೀಸ್ಗಡದ ಬಿಜೆಪಿ ನಾಯಕ ನಂದಕುಮಾರ ಸಾಹು, ಮಾಜಿ ಕೇಂದ್ರ ಸಚಿವ ಹಿರೇನ್ ಪಾಠಕ್,ಪಂಜಾಬ ಬಿಜೆಪಿಯ ಹಿರಿಯ ನಾಯಕ ಮನೋರಂಜನ ಕಾಲಿಯಾ,ಮಾಜಿ ಗುಜರಾತ ಮುಖ್ಯಮಂತ್ರಿ ವಿಜಯ ರೂಪಾನಿ,ಹಿಮಾಚಲ ಪ್ರದೇಶದ ಮಾಜಿ ಸಚಿವ ಮಹೇಂದ್ರನಾಥ ಸೋಫಟ್ ಮುಂತಾದವರೂ ಎರಡೂ ಚಾನೆಲ್ಗಳಲ್ಲಿ ಕಾಣಿಸಿಕೊಂಡು ಮೋದಿಯವರ ಗುಣಗಾನ ಮಾಡಿದ್ದರು. ವಿಷಯವೆಂದರೆ ಈ ಎಲ್ಲರ ಬೈಟ್ಗಳು ತಿಂಗಳುಗಳ ಹಿಂದೆಯೇ ನೀಡಿದ್ದವಾಗಿದ್ದವು ಮತ್ತು ಇವೆರಡೂ ಚಾನೆಲ್ಗಳು ಅವುಗಳನ್ನು ತಾಜಾ ಸುದ್ದಿ ಎಂಬಂತೆ ಪ್ರಸಾರ ಮಾಡಿದ್ದವು!

ಕೃಪೆ: Newslaundry

share
ಬಸಂತ್ ಕುಮಾರ್- newslaundry.com
ಬಸಂತ್ ಕುಮಾರ್- newslaundry.com
Next Story
X