ತಮ್ಮ ಜಮೀನು ಕಬಳಿಕೆಯ ವಿರುದ್ಧ ಪ್ರತಿರೋಧ ತೋರಿದ ಮಹಿಳೆಯರ ಮೇಲೆ ಗುಂಡಿನ ದಾಳಿ: ವಿಡಿಯೋ ವೈರಲ್
ಪಾಟ್ನಾ: ಬಿಹಾರದ ಬೆಟ್ಟಿಯಾದಲ್ಲಿ ತಮ್ಮ ಜಮೀನು ಕಬಳಿಸಲು ಯತ್ನಿಸಿದವರ ವಿರುದ್ಧ ಪ್ರತಿಭಟನೆ ನಡೆಸಿದ ಐವರು ಮಹಿಳೆಯರು ಮತ್ತೊಂದು ಗುಂಪಿನಿಂದ ಗುಂಡಿನ ದಾಳಿಗೆ ಒಳಗಾಗಿದ್ದಾರೆಂದು ವರದಿಯಾಗಿದೆ.
ಘಟನೆಯ ವೀಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಮಹಿಳೆಯರ ಗುಂಪೊಂದು ಜಮೀನಿಗೆ ಹೋಗುತ್ತಿರುವುದು ಕಂಡು ಬಂದಿದೆ. ಇನ್ನೊಂದು ಗುಂಪು ದೂರದಿಂದ ಅವರ ಬಳಿಗೆ ಬಂದಿದ್ದು, ಇದ್ದಕ್ಕಿದ್ದಂತೆ, ಗುಂಡು ಹಾರಿಸಲಾಗುತ್ತದೆ. ತಕ್ಷಣವೇ ಮಹಿಳೆಯರು ಅಲ್ಲಿಂದ ಓಡುತ್ತಾರಾದರೂ, ಅವರಲ್ಲಿ ಕೆಲವರು ಗಾಯಗೊಂಡು ನೆಲದ ಮೇಲೆ ಬೀಳುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಘಟನೆಯ ಮಾಹಿತಿ ತಿಳಿದ ಹಿರಿಯ ಪೊಲೀಸ್ ಅಧಿಕಾರಿಗಳಾದ ಉಪೇಂದ್ರನಾಥ್ ವರ್ಮಾ ಮತ್ತು ಮುಕುಲ್ ಪರಿಮಳ್ ಪಾಂಡೆ ಸ್ಥಳಕ್ಕೆ ಆಗಮಿಸಿದ್ದಾರೆ. ಗಾಯಗೊಂಡಿರುವ ಮಹಿಳೆಯರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ndtv.com ವರದಿ ಮಾಡಿದೆ.
Women Protesting Against Alleged Land Grab Shot In Bihar, 5 Hospitalised https://t.co/Jnx5TX4TOM pic.twitter.com/Iz5dBVxcjK
— NDTV (@ndtv) December 25, 2022