ಪುತ್ತೂರು: ಕುಸಿದು ಬಿದ್ದು ವ್ಯಕ್ತಿ ಸಾವು

ಪುತ್ತೂರು: ಮನೆಯ ಟೆರೇಸ್ ಹತ್ತುವ ವೇಳೆಯಲ್ಲಿ ವ್ಯಕ್ತಿಯೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಪುತ್ತೂರು ನಗರದ ಹೊರವಲಯದ ಸಾಲ್ಮರ ಮುದ್ದೋಡಿ ಎಂಬಲ್ಲಿ ನಡೆದಿದೆ.
ಸಾಲ್ಮರ ಮುದ್ದೋಡಿ ನಿವಾಸಿ ನಾರಾಯಣ ನಾಯ್ಕ(54) ಮೃತಪಟ್ಟ ವ್ಯಕ್ತಿ. ಮನೆಯ ಟೆರೆಸ್ ಹತ್ತುತ್ತಿರುವ ವೇಳೆಯಲ್ಲಿ ಅವರು ಕುಸಿದು ಬಿದ್ದಿದ್ದು, ಬಳಿಕ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯತ್ತಿರುವ ವೇಳೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರು ಪತ್ನಿಯನ್ನು ಅಗಲಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story