ಡಿ.29ರ ವರೆಗೆ ಸೆಕ್ಷನ್ 144 ಮುಂದುವರಿಕೆ: ಮಂಗಳೂರು ಪೊಲೀಸ್ ಆಯುಕ್ತ

ಮಂಗಳೂರು: ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಶನಿವಾರ ರಾತ್ರಿ ನಡೆದ ಜಲೀಲ್ ಕೊಲೆಯ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಧಿಸಲಾಗಿದ್ದ ಸೆಕ್ಷನ್ 144ನ್ನು ಡಿ.29ರವರೆಗೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಡಿ.25ರ ಬೆಳಗ್ಗೆ 6ರಿಂದ ಡಿ.27ರ ಬೆಳಗ್ಗೆ 6ರವರೆಗೆ ಸೆ.144 ವಿಧಿಸಲಾಗಿತ್ತು. ಇದೀಗ ಡಿ.29ರ ಬೆಳಗ್ಗೆ 6ರವರೆಗೆ ಅದನ್ನು ಮುಂದುವರಿಸಲಾಗಿದೆ. ಈ ಅವಧಿಯಲ್ಲಿ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವ 60 ವರ್ಷ ಮೇಲ್ಪಟ್ಟ ಮಹಿಳೆಯರ ಸಹಿತ ಹಿರಿಯರು ಮತ್ತು 18 ವರ್ಷ ಪ್ರಾಯದೊಳಗಿನ ಯುವಕರು, ಮಕ್ಕಳನ್ನು ಹೊರತುಪಡಿಸಿ ಉಳಿದವರ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.
ರಾ.ಹೆ.ಯಲ್ಲಿ ಸಂಚರಿಸುವ ಮತ್ತು ತುರ್ತು ಸಂದರ್ಭ ಸಂಚರಿಸುವವರಿಗೆ ಇದು ಅನ್ವಯವಾಗುವುದಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.
Next Story