ಉತ್ತರ ಭಾರತದಲ್ಲಿ ಡಿಸೆಂಬರ್ 27ರ ವರೆಗೆ ಶೀತಗಾಳಿ
![ಉತ್ತರ ಭಾರತದಲ್ಲಿ ಡಿಸೆಂಬರ್ 27ರ ವರೆಗೆ ಶೀತಗಾಳಿ ಉತ್ತರ ಭಾರತದಲ್ಲಿ ಡಿಸೆಂಬರ್ 27ರ ವರೆಗೆ ಶೀತಗಾಳಿ](https://www.varthabharati.in/sites/default/files/images/articles/2022/12/26/361382-1672070845.jpeg)
ಹೊಸದಿಲ್ಲಿ, ಡಿ. 26: ಪಂಜಾಬ್ ಹರ್ಯಾಣ, ದಿಲ್ಲಿ, ಉತ್ತರ ರಾಜಸ್ಥಾನ, ಹಿಮಾಚಲಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಡಿಸೆಂಬರ್ 27ರ ವರೆಗೆ ಶೀತ ಅಲೆಯ ಪರಿಸ್ಥಿತಿ ಇರಲಿದೆ ಎಂದು ಭಾರತ ಹವಾಮಾನ ಇಲಾಖೆ ರವಿವಾರ ಹೇಳಿದೆ. ತಾಪಮಾನ 4 ಡಿಗ್ರಿ ಸೆಲ್ಸಿಯಸ್ ಗೆ ಅಥವಾ ಅದಕ್ಕಿಂತ ಕಡಿಮೆ ಅಥವಾ ಸಾಮಾನ್ಯ ಗುರುತಿಗಿಂತ 4.5 ಡಿಗ್ರಿಗಿಂತ ಇಳಿಕೆಯಾದಾಗ ಶೀತ ಗಾಳಿ ಸಂಭವಿಸುತ್ತದೆ.
ಸೋಮವಾರ ದಿಲ್ಲಿಯ ಹಲವು ಭಾಗಗಳಲ್ಲಿ ಶೀತ ಗಾಳಿ ಬೀಸಿದೆ. ದಟ್ಟ ಮಂಜು ನಗರದ ಕೆಲವು ಪ್ರದೇಶಗಳಲ್ಲಿ ದೃಗ್ಗೋಚರವನ್ನು 50 ಮೀಟರ್ಗೆ ಇಳಿಸಿತು. ಇದರಿಂದ ರಸ್ತೆ ಹಾಗೂ ರೈಲು ಸಂಚಾರಕ್ಕೆ ಅಡ್ಡಿ ಉಂಟಾಯಿತು. ದಿಲ್ಲಿಯಲ್ಲಿ ಕನಿಷ್ಠ ತಾಪಮಾನ 5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ ಮೂರು ಪಟ್ಟು ಕಡಿಮೆಯಾಗಿದೆ. ಇದು ಋತುವಿನ ಅತ್ಯಂತ ಶೀತದ ದಿನವನ್ನಾಗಿಸಿದೆ ಎಂದು ವರದಿ ಹೇಳಿದೆ.
Next Story