ಕಾರ್ಕಳ: ತೋಡಿಗೆ ಬಿದ್ದು ವ್ಯಕ್ತಿ ಸಾವು
ಕಾರ್ಕಳ: ಸಂಕದ ಮೇಲೆ ಕುಳಿತ ವ್ಯಕ್ತಿಯೊಬ್ಬರು ಆಯತಪ್ಪಿ ತೋಡಿಗೆ ಬಿದ್ದು ಮೃತಪಟ್ಟ ಘಟನೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಮುದೆಲ್ ಕಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಮುಡಾರು ಗ್ರಾಮದ ನಿವಾಸಿ 65 ವರ್ಷದ ಶಿವಣ್ಣ ಪೂಜಾರಿ ಎಂದು ಗುರುತಿಸಲಾಗಿದೆ. ಇವರು ಅಡಿಕೆ ಮಾರಾಟ ಮಾಡಲು ಪೇಟೆಗೆ ಹೋಗಿದ್ದು, ಅಡಿಕೆ ಮಾರಾಟ ಮಾಡಿ ವಾಪಾಸು ಮನೆಗೆ ಬರುವಾಗ ವಿಶ್ರಾಂತಿಗಾಗಿ ಮುದೆಲ್ ಕಡಿತೋಡಿನ ಸಂಕದ ಮೇಲೆ ಕುಳಿತಿದ್ದರು. ಈ ವೇಳೆ ಆಯತಪ್ಪಿ ತೋಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story