ಅರ್ಮೇನಿಯಾ- ಅಜೆರ್ಬೈಜಾನ್ ಗಡಿಯಲ್ಲಿ ಭೂ ದಿಗ್ಬಂಧನ ಪ್ರತಿಭಟಿಸಿ ಬೃಹತ್ ರ‍್ಯಾಲಿ

ಸ್ಟೆಪಾನಕರ್ಟ್, ಡಿ.26: ಅರ್ಮೇನಿಯಾ(Armenia)ಕ್ಕೆ ಇರುವ ಏಕೈಕ ಭೂಸಂಪರ್ಕದ ದಿಗ್ಬಂಧನವನ್ನು ಪ್ರತಿಭಟಿಸಿ ನಾಗೊರ್ನೊ-ಕರಾಬಖ್ (Nagorno-Karabakh) ಪ್ರದೇಶದ ಅತೀ ದೊಡ್ಡ ನಗರವಾದ ಸ್ಟೆಪಾನಕರ್ಟ್ ನಲ್ಲಿರುವ ಅಜರ್ಬೈಜಾನ್ ನಲ್ಲಿ ಸಾವಿರಾರು ಜನರು ರ‍್ಯಾಲಿ ನಡೆಸಿದ್ದಾರೆ.
ಅರ್ಮೇನಿಯನ್ ಜನಸಂಖ್ಯೆಯಿರುವ ನಾಗೊರ್ನೊ-ಕರಾಬಖ್ ಪ್ರದೇಶದ ಹಕ್ಕುಸಾಧನೆಯ ವಿಷಯದಲ್ಲಿ ಬಾಕು ಮತ್ತು ಯೆರವಾನ್ ಸಮುದಾಯದವರ ಮಧ್ಯೆ ವಿವಾದವಿದೆ. ಇಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಪ್ರತಿಭಟಿಸಿ ಅಜರ್ಬೈಜಾನ್ ನ ಕಾರ್ಯಕರ್ತರು ಅರ್ಮೇನಿಯಾಕ್ಕೆ ಭೂಸಂಪರ್ಕ ಸಾಧಿಸುವ ಏಕೈಕ ಕೊಂಡಿ ಲಚಿನ್ ಕಾರಿಡಾರ್ಗೆ ಕಳೆದ 2 ವಾರದಿಂದ ದಿಗ್ಬಂಧನ ಹಾಕಿದ್ದಾರೆ. ಇದನ್ನು ವಿರೋಧಿಸಿ ಸ್ಟೆಪಾನಕರ್ಟ್ ನ ಪ್ರಮುಖ ರಿನೈಸನ್ಸ್ ವೃತ್ತದಲ್ಲಿ ರವಿವಾರ ಬೃಹತ್ ಪ್ರತಿಭಟನೆ ನಡೆದಿದೆ.
Next Story