ಜಲೀಲ್ ಹತ್ಯೆ ಪ್ರಕರಣ: ವೆಲ್ಫೇರ್ ಪಕ್ಷ ಖಂಡನೆ
ಮಂಗಳೂರು: ಸುರತ್ಕಲ್ ನಲ್ಲಿ ದುಷ್ಕರ್ಮಿಗಳು ದಿನಸಿ ಅಂಗಡಿ ವ್ಯಾಪಾರಸ್ಥ ಜಲೀಲ್ ಎಂಬವರ ಹತ್ಯೆ ಮಾಡಿರುವುದನ್ನು ವೆಲ್ಫೇರ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.
ಚುನಾವಣಾ ದಿನಗಳು ಸನ್ನಿಹಿತವಾಗುತ್ತಿರುವ ಈ ಸಂದರ್ಭದಲ್ಲಿ ಜಿಲ್ಲೆಯ ಶಾಂತಿಪ್ರಿಯ ಜನತೆ, ಈ ಕ್ರೌರ್ಯಗಳನ್ನು ಎದುರಿಸಲು ಒಟ್ಟಾಗಿದ್ದು, ಇದರ ಹಿಂದೆ ಇರಬಹುದಾದ ಸ್ಥಾಪಿತ ಹಿತಾಸಕ್ತಿಗಳು ಮತ್ತು ರಾಜಕೀಯ ಹಿನ್ನೆಲೆಯಲ್ಲಿರುವವರನ್ನು ಬಹಿಷ್ಕರಿಸಲು ಹಾಗೂ ಅವರ ಎಲ್ಲಾ ಪೂರ್ವಯೋಜಿತ ಷಡ್ಯಂತ್ರಗಳನ್ನೂ ವಿಫಲಗೊಳಿಸುವಲ್ಲಿ ಯಶಸ್ವಿಯಾಗಬೇಕೆಂದು ಎಂದು ಸಾರ್ವಜನಿಕರಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಮನವಿ ಮಾಡಿದೆ.
Next Story