Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಮುಸ್ಲಿಮರ ವಿರುದ್ಧ ಧ್ವೇಷ ಕಾರುವ...

ಮುಸ್ಲಿಮರ ವಿರುದ್ಧ ಧ್ವೇಷ ಕಾರುವ ಸಂಪಾದಕೀಯ: 'ಸ್ಟಾರ್‌ ಆಫ್‌ ಮೈಸೂರ್' ಪತ್ರಿಕೆಯನ್ನು ಖಂಡಿಸಿದ ಪ್ರೆಸ್‌ ಕೌನ್ಸಿಲ್

''ಪತ್ರಿಕೆಯ ವಿರುದ್ಧ ಪಿಸಿಐ ಖಂಡನೆ ವ್ಯಕ್ತಪಡಿಸಿದರೆ ಸರ್ಕಾರ 3 ತಿಂಗಳು ಜಾಹಿರಾತು ನೀಡುವಂತಿಲ್ಲ''

27 Dec 2022 10:35 PM IST
share
ಮುಸ್ಲಿಮರ ವಿರುದ್ಧ ಧ್ವೇಷ ಕಾರುವ ಸಂಪಾದಕೀಯ: ಸ್ಟಾರ್‌ ಆಫ್‌ ಮೈಸೂರ್ ಪತ್ರಿಕೆಯನ್ನು ಖಂಡಿಸಿದ ಪ್ರೆಸ್‌ ಕೌನ್ಸಿಲ್
''ಪತ್ರಿಕೆಯ ವಿರುದ್ಧ ಪಿಸಿಐ ಖಂಡನೆ ವ್ಯಕ್ತಪಡಿಸಿದರೆ ಸರ್ಕಾರ 3 ತಿಂಗಳು ಜಾಹಿರಾತು ನೀಡುವಂತಿಲ್ಲ''

ಮೈಸೂರು: ಮುಸ್ಲಿಮ್ ಸಮುದಾಯವನ್ನು ಪರೋಕ್ಷವಾಗಿ ಗುರಿಯಾಗಿಸಿ ಧ್ವೇಷ ಕಾರುವ ಸಂಪಾದಕೀಯ ಪ್ರಕಟಿಸಿದ್ದ ʼಸ್ಟಾರ್ ಆಫ್ ಮೈಸೂರುʼ ಇಂಗ್ಲಿಷ್ ದಿನಪತ್ರಿಕೆ ವಿರುದ್ಧ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಖಂಡನೆ (censure) ವ್ಯಕ್ತಪಡಿಸಿದೆ. ಸಾಮಾನ್ಯವಾಗಿ, ಪಿಸಿಐ ಪತ್ರಿಕೆಯ ವಿರುದ್ಧ ಖಂಡನೆ ವ್ಯಕ್ತಪಡಿಸಿದರೆ ಸರ್ಕಾರ ಮೂರು ತಿಂಗಳು ಜಾಹಿರಾತು ನೀಡುವಂತಿಲ್ಲ ಎಂದು ವಿವಾದಾತ್ಮಕ ಸಂಪಾದಕೀಯದ ವಿರುದ್ಧ ದೂರು ನೀಡಿದ 'ದಿ ಕ್ಯಾಂಪೇನ್ ಎಗೇನ್ಸ್ಟ್ ಹೇಟ್ ಸ್ಪೀಚ್' (The Campaign Against Hate Speech) ನ ಭಾಗವಾಗಿರುವ ವಿನಯ್‌ ಶ್ರೀನಿವಾಸ್‌ ಅವರು 'ವಾರ್ತಾ ಭಾರತಿ'ಗೆ ತಿಳಿಸಿದ್ದಾರೆ.

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ (PCI)ದ ಡಿಸೆಂಬರ್ 16 ರ ದಿನಾಂಕದ ಆದೇಶದಲ್ಲಿ, ಏಪ್ರಿಲ್ 2020 ರಂದು 'ಸ್ಟಾರ್ ಆಫ್ ಮೈಸೂರು' (SOM) ಪತ್ರಿಕೆಯಲ್ಲಿ ಪ್ರಕಟವಾದ, 'ಬ್ಯಾಡ್ ಆಪಲ್ಸ್ ಇನ್ ದಿ ಬಾಸ್ಕೆಟ್' (ಬುಟ್ಟಿಯಲ್ಲಿನ ಕೊಳೆತ ಸೇಬುಗಳು ) ಹೆಸರಿನ ಸಂಪಾದಕೀಯವನ್ನು ಖಂಡಿಸಿದೆ. ಮೈಸೂರಿನಿಂದ ಪ್ರಕಟವಾಗುವ SOM ಪತ್ರಿಕೆಯು ಈ ಸಂಪಾದಕೀಯದಲ್ಲಿ ಭಾರತೀಯ ಮುಸ್ಲಿಮರನ್ನು ಕೊಳೆತ ಸೇಬುಗಳು ಎಂದು ಕರೆದಿದ್ದು, ಅವರನ್ನು ಹೊರಕ್ಕೆ ಎಸೆಯಬೇಕು ಎಂಬರ್ಥದಲ್ಲಿ ಬರೆಯಲಾಗಿತ್ತು ಎನ್ನಲಾಗಿದೆ.

“ದೇಶದಲ್ಲಿ ಒಂದು ಸಮುದಾಯದ ಜನರು ಕೊಳೆತ ಸೇಬುಗಳಂತೆ ಇದೆ. ಅವು ಬುಟ್ಟಿಯಲ್ಲಿರುವ ಇತರೆ ಸೇಬುಗಳನ್ನೂ ಕೆಡಿಸುತ್ತದೆ. ಅವುಗಳನ್ನು ಸಿಂಗಾಪುರ ದೇಶದ ಹಿಂದಿನ ನಾಯಕ ಅಥವಾ ಇಸ್ರೇಲ್‌ನ ಪ್ರಸಕ್ತ ಸರ್ಕಾರದ ಮಾದರಿಯಲ್ಲಿ ಹೊರಗೆ ಎಸೆಯಬೇಕು” ಎಂದು SOM ಸಂಪಾದಕೀಯ ಹೇಳಿತ್ತು. ಸಂಪಾದಕೀಯವು ನೇರವಾಗಿ ಮುಸ್ಲಿಮರನ್ನು ಹೆಸರಿಸಿಲ್ಲದಿದ್ದರೂ ದೇಶದಲ್ಲಿರುವ ʼ18%ʼ ಜನಸಂಖ್ಯೆಯ ಸಮುದಾಯ ಎಂದು ಮುಸ್ಲಿಮರನ್ನು ಪರೋಕ್ಷವಾಗಿ ಉಲ್ಲೇಖಿಸಿತ್ತು ಎಂದು ವರದಿಯಾಗಿದೆ.

ವಿವಾದಿತ ಸಂಪಾದಕೀಯದಲ್ಲಿ ನಿರ್ದಿಷ್ಟ ಸಮುದಾಯ/ಜನಾಂಗವನ್ನು 'ಕೊಳೆತ ಸೇಬುಗಳು' (ಬ್ಯಾಡ್ ಆಪಲ್) ಗಳೆಂದು ಕರೆದು, ತಮ್ಮ ಕೆಟ್ಟು ಹೋದ ಗುಣದಿಂದ ಅವು ಇತರ ಹಣ್ಣುಗಳನ್ನೂ ಕೆಡಿಸುತ್ತವೆ ಎಂದು ಬರೆಯಲಾಗಿತ್ತು. ಸಂಪಾದಕೀಯದಲ್ಲಿ ಕೊಳೆತ ಸೇಬುಗಳು ಎಂಬ ಉಪಮೆಯ ಪ್ರಸ್ತುತತೆಯನ್ನು ವಿವರಿಸುತ್ತಾ, ಕೊಳೆತ ಸೇಬುಗಳು ಇಡೀ ಬುಟ್ಟಿಯಲ್ಲಿನ ಸೇಬುಗಳನ್ನು ಹೇಗೆ ಕೆಡಿಸುತ್ತವೆಯೋ ಅದೇ ರೀತಿ ಇಂದು ದೇಶದಲ್ಲಿ 18% ನಷ್ಟು ಇರುವ, ತಮ್ಮನ್ನು ತಾವು ಕೊಳೆತ ಸೇಬುಗಳೆಂದು ಗುರುತಿಸಿಕೊಳ್ಳುವ ಜನರಲ್ಲಿ ಹಲವರು ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿಯೂ ಸೇರಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಮುಂದುವರೆದು ಸಮಾಜದಲ್ಲಿನ ಈ ಕೊಳೆತ ಸೇಬುಗಳನ್ನು ನಿವಾರಿಸಲು ಕೆಲವು ದಶಕಗಳ ಹಿಂದೆ ಸಿಂಗಪೂರ್‌ನ ಮಾಜಿ ನಾಯಕರು ಅಥವಾ ಈಗ ಇಸ್ರೇಲ್ ನಾಯಕತ್ವ ಅನುಸರಿಸುತ್ತಿರುವ ಕೆಲ ಕ್ರಮಗಳನ್ನು ತೆಗೆದುಕೊಳ್ಳಲು ಈ ಸಂಪಾದಕೀಯದಲ್ಲಿ ಸಲಹೆ ನೀಡಲಾಗಿತ್ತು. ಮಾರಕ ವೈರಸ್‌ಗಳಿಗಿಂತ ಈ ಕೊಳೆತ ಸೇಬುಗಳು ಅಪಾಯಕಾರಿ ಎಂದು ಬರೆಯಲಾಗಿತ್ತು ಎಂದು ಪಿಸಿಐ ಹೇಳಿದೆ.

ಲೇಖನದ ಪ್ರಕಟಣೆಯ ನಂತರ, ದಿ ಕ್ಯಾಂಪೇನ್ ಎಗೇನ್ಸ್ಟ್ ಹೇಟ್ ಸ್ಪೀಚ್ ಗುಂಪು ಪತ್ರಿಕೆಯ ಸಂಪಾದಕ ಎಂ ಗೋವಿಂದ ಗೌಡ ಮತ್ತು ಆಗಿನ ಪ್ರಧಾನ ಸಂಪಾದಕ ಕೆಬಿ ಗಣಪತಿ ವಿರುದ್ಧ ಪಿಸಿಐಗೆ ದೂರು ಸಲ್ಲಿಸಿತು.

“ಸುದ್ದಿ ಸಂಸ್ಥೆಯು ಧರ್ಮದ ಆಧಾರದ ಮೇಲೆ ಸಮುದಾಯದ (ಮುಸ್ಲಿಮರು) ಕಡೆಗೆ ದ್ವೇಷವನ್ನು ಉತ್ತೇಜಿಸುತ್ತಿದೆ ಮತ್ತು ಪ್ರಚೋದಿಸುತ್ತಿದೆ… ಆ ಮೂಲಕ ಇಡೀ ಸಮುದಾಯದ ವಿರುದ್ಧ ದ್ವೇಷ ಮತ್ತು ಹಿಂಸಾಚಾರವನ್ನು ಹರಡಲು ವೈಯಕ್ತಿಕ ಕ್ರಮಗಳನ್ನು ಆರೋಪಿಸಬಾರದು ಎಂಬ ಪತ್ರಿಕೋದ್ಯಮದ ಮೂಲ ತತ್ವವನ್ನು ಉಲ್ಲಂಘಿಸುತ್ತದೆ” ಎಂದು ʼದಿ ಕ್ಯಾಂಪೇನ್ ಎಗೇನ್ಸ್ಟ್ ಹೇಟ್ ಸ್ಪೀಚ್ʼ ದೂರು ನೀಡಿತ್ತು.

ಅದರ ನಂತರ, ಪಿಸಿಐನಿಂದ ತನಿಖಾ ಸಮಿತಿಯನ್ನು ರಚಿಸಿದ್ದು, ಈ ವಿಷಯದಲ್ಲಿ ಭಾಗಿಯಾಗಿರುವ ಎರಡೂ ಪಕ್ಷಗಳ ವಾದಗಳನ್ನು ಆಲಿಸಿದ ನಂತರ ಪಿಸಿಐ ಸ್ಟಾರ್‌ ಆಫ್‌ ಮೈಸೂರು ಪತ್ರಿಕೆಯ ಖಂಡನೆಗೆ ಶಿಫಾರಸು ಮಾಡಿತು. ತನಿಖಾ ಸಮಿತಿಯು ತನ್ನ ವರದಿಯಲ್ಲಿ, “ಈ ಸಂಪಾದಕೀಯವನ್ನು ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಬರೆದಿರಬಹುದೆಂದು ಅಭಿಪ್ರಾಯಪಟ್ಟಿದೆ ಆದರೆ ಇದು ಒಂದು ಸಮುದಾಯವನ್ನು ಅಂದರೆ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದೆ ಎಂಬ ತೀರ್ಮಾನವು ಅನಿವಾರ್ಯವಾಗಿದೆ.” ಎಂದು ತನಿಖಾ ಸಮಿತಿಯು ಹೇಳಿದೆ.

“ಸಾಂಕ್ರಾಮಿಕ ಹರಡುವಿಕೆಗೆ ನಿರ್ದಿಷ್ಟ ಸಮುದಾಯವನ್ನು ದೂಷಿಸುವುದು ಅನ್ಯಾಯವಾಗಿದೆ. ಸಂಬಂಧಿತ ಅವಧಿಯಲ್ಲಿ ಹಲವಾರು ಲೋಪಗಳು ಸಂಭವಿಸಿವೆ ಮತ್ತು ಆ ಲೋಪಗಳಿಗೆ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಜನರನ್ನು ನಾವು ಜವಾಬ್ದಾರರೆಂದು ಗುರುತಿಸಲು ಸಾಧ್ಯವಿಲ್ಲ.” ಎಂದು ತನಿಖಾ ಸಮಿತಿಯು ಹೇಳಿದೆ.

ವಿಭಜಕ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ, ಎಲ್ಲಾ ಸಮುದಾಯಗಳ ಜನರಲ್ಲಿ ಸಹೋದರತ್ವದ ಸಂದೇಶವನ್ನು ಹರಡಲು, ವೈವಿಧ್ಯತೆಯಲ್ಲಿ ಭಾರತದ ಏಕತೆಯನ್ನು ಬಲಪಡಿಸಲು ಮತ್ತು "ಕೋಮುವಾದದ ಜ್ವಾಲೆಯನ್ನು ಪ್ರಚೋದಿಸುವ ಪ್ರಚೋದಕ ಬರಹಗಳನ್ನು ಪ್ರಕಟಿಸುವುದನ್ನು ನಿಲ್ಲಿಸಲು" ಪತ್ರಿಕಾ ಜವಾಬ್ದಾರಿಯನ್ನು ಸಮಿತಿಯು ಎತ್ತಿ ತೋರಿಸಿದೆ.

ಸಂಪಾದಕೀಯದ ಕುರಿತು ಪತ್ರಿಕೆಯು ನೀಡಿರುವ ತಪ್ಪೊಪ್ಪಿಗೆಯು ನಿಜವಾದುದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಪಿಸಿಐ ತನಿಖಾ ಸಮಿತಿಯು ಸ್ಟಾರ್‌ ಆಫ್‌ ಮೈಸೂರ್‌ ಅನ್ನು ಖಂಡಿಸಲು ಪ್ರೆಸ್‌ ಕೌನ್ಸಿಲ್‌ಗೆ ಶಿಫಾರಸು ನೀಡಿತ್ತು. ಅದರಂತೆ, ಪ್ರೆಸ್‌ ಕೌನ್ಸಿಲ್‌ ಪತ್ರಿಕೆಯನ್ನು ಖಂಡಿಸಿದೆ.

share
Next Story
X