ಜೆಡಿಎಸ್ ಮುಲ್ಕಿ ಬ್ಲಾಕ್ ವತಿಯಿಂದ ಸಮಾಲೋಚನಾ ಸಭೆ

ಮುಲ್ಕಿ: ಮುಲ್ಕಿ ಬ್ಲಾಕ್ ಜೆಡಿಎಸ್ ಸಮಿತಿಯ ಪ್ರಮುಖರ ಸಮಾಲೋಚನಾ ಸಭೆಯು ಮುಲ್ಕಿ ಪುನರೂರ್ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಸಭೆಯಲ್ಲಿ ದ. ಕ. ಜಿಲ್ಲೆಗೆ ಆಗಮಿಸುವ ಪಂಚರತ್ನ ರಥಯಾತ್ರೆಯನ್ನು ಮುಲ್ಕಿಯಲ್ಲಿ ಸ್ವಾಗತಿಸುವ ಕುರಿತು, ಮುಂಬರುವ ವಿಧಾನಸಭಾ ಚುನಾವಣೆ, ಪಕ್ಷ ಸಂಘಟನೆ, ಸದಸ್ಯತ್ವ ಅಭಿಯಾನ ಹಾಗೂ ಮುಲ್ಕಿ ಬ್ಲಾಕ್ /ತಾಲೂಕಿಗೆ ಸಂಬಂಧಪಟ್ಟ ವಾರ್ಡ್ ಸಮಿತಿಯನ್ನು ಸದೃಢಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಮುಲ್ಕಿ ಹಾಗೂ ತಾಲೂಕು ಸಮಿತಿಯ ಇನ್ನಿತರ ಪದಾಧಿಕಾರಿಗಳ ಪಟ್ಟಿಯನ್ನು ಜನವರಿ 7ರಂದು ಬಿಡುಗಡೆಗೊಳಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ನವೀನ್ ಪುತ್ರನ್ ತಿಳಿಸಿದರು.
ಈ ಸಂದರ್ಭ ಮುಲ್ಕಿ ಬ್ಲಾಕ್ ಜೆಡಿಎಸ್ ಸಮಿತಿಯ ನೂತನ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡಲಾಯಿತು. ಮುಲ್ಕಿ ಬ್ಲಾಕ್ / ತಾಲೂಕು ನೂತನ ಅಧ್ಯಕ್ಷರಾಗಿ ಶಶಿಕಾಂತ್ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಪುತ್ರನ್ ಅವರು ಸರ್ವಾನುಮತದಿಂದ ಆಯ್ಕೆಯಾದರು. ಉಳಿದ ಘಟಕಗಳನ್ನು ಮುಂದಿನ ಕಾರ್ಯಕರ್ತರ ಸಭೆಯಲ್ಲಿ ಚುನಾಯಿಸುವುದೆಂದು ನಿರ್ಣಯಿಸಲಾಯಿತು.
ಸಭೆಯಲ್ಲಿ ಮಾಜಿ ಸಚಿವರಾದ (ದಿ) ಅಮರನಾಥ ಶೆಟ್ಟಿಯವರ ಸುಪುತ್ರಿ ಅಮರಶ್ರೀ ಅಮರನಾಥ್ ಶೆಟ್ಟಿ, ನೂತನ ಅಧ್ಯಕ್ಷರಾದ ಶಶಿಕಾಂತಶೆಟ್ಟಿ, ರಾಜ್ಯದ ಮುಖಂಡರಾದ ಇಕ್ಬಾಲ್ ಮುಲ್ಕಿ, ಮುಲ್ಕಿ -ಮೂಡಬಿದ್ರಿ ಮಹಿಳಾ ಜೆಡಿಎಸ್ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನವೀನ್ ಪುತ್ರನ್, ಮಹಿಳಾ ನಾಯಕಿ ರೇಷ್ಮಾ ಹಳೆಯಂಗಡಿ, ಅಶ್ರಫ್ ಅಹ್ಮದ್, ಯುವ ಜನತಾದಳ ನಾಯಕ ಆಸೀಫ್ ತೋಡಾರ್, ರಝಾಕ್ ಮುಲ್ಕಿ, ನೂರುಲ್ಲಾ ಶೇಕ್, ಮನ್ಸೂರ್, ಸಲಾಂ, ನಿಸಾರ್ ಅಹ್ಮದ್, ರಂಜನ್ ಶೆಟ್ಟಿ, ಮಶಾಕ್ ಸಾಯಿಬಾ ಮೊದಲಾದವರು ಉಪಸ್ಥಿತರಿದ್ದರು.
