ಮಂಗಳೂರು ವಿವಿ: ಫಲಿತಾಂಶ ಪ್ರಕಟಣೆಗೆ ಕ್ರಮ; ಕುಲಸಚಿವ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯವು ಪೂರ್ಣಗೊಂಡಿದ್ದು, ಸ್ನಾತಕ ಪದವಿಯ 6ನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸಲಾಗಿದೆ. ಮೊದಲ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನೂ ಪ್ರಕಟಿಸಲಾಗಿದೆ. ಉಳಿಕೆಯಾದ ಇತರ ಪರೀಕ್ಷೆಗಳ ಫಲಿತಾಂಶವನ್ನು ಡಿ.29ರಂದು ಪ್ರಕಟಿಸಲಾಗುವುದು.
ನಿರಂತರವಾಗಿ ತರಗತಿ ನಡೆಸುತ್ತಿರುವ ಮಧ್ಯೆಯೂ 2ನೇ ಮತ್ತು 4ನೇಸೆಮಿಸ್ಟರ್‌ನ ಮೌಲ್ಯಮಾಪನ ಕಾರ್ಯ ನಡೆಯುತ್ತಿದ್ದು, ಇದರ ಫಲಿತಾಂಶವನ್ನು 2023ರ ಜನವರಿ 20ರೊಳಗೆ ಪ್ರಕಟಿಸಲಾಗುವುದು ಮಂಗಳೂರು ವಿವಿ ಕುಲಸಚಿವರು (ಪರೀಕ್ಷಾಂಗ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





