ಬೀದಿ ಬದಿ ವ್ಯಾಪಾರಿಗಳ ಸಾಲದ ಸ್ಟ್ಯಾಂಪ್ ಡ್ಯೂಟಿ ರದ್ದು: ವಿಧೇಯಕ ಅನುಮೋದನೆ

ಬೆಳಗಾವಿ, (ಸುವರ್ಣ ವಿಧಾನಸೌಧ) ಡಿ.27: ಬೀದಿ ಬದಿಯ ವ್ಯಾಪಾರಿಗಲು ಪಡೆಯುವ ಸಣ್ಣ ಪ್ರಮಾಣದ ಸಾಲಕ್ಕೆ ವಿಧಿಸಲಾಗುತ್ತಿದ್ದ ಸಾಲದ ಮೇಲೆ ವಿಸಲಾಗುತ್ತಿದ್ದ ಸ್ಟಾಂಪ್‍ಡ್ಯೂಟಿಯನ್ನು ರದ್ದುಗೊಳಿಸುವ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್ತಿನಲ್ಲಿಂದ ಧ್ವನಿಮತದ ಅಂಗೀಕಾರ ದೊರೆಯಿತು.
ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ಕರ್ನಾಟಕ ಸ್ಟಾಂಪು ನಾಲ್ಕನೇ ತಿದ್ದುಪಡಿ ವಿಧೇಯಕವನ್ನು ಯಥಾವತ್ತು ಪರಿಷತ್ತಿನಲ್ಲಿ ಪರ್ಯಾಲೋಚನೆಗೆ ಮಂಡಿಸಿದರು.
ಆನಂತರ, ಸಚಿವ ಅಶೋಕ್, ಬೀದಿ ಬದಿಯ ವ್ಯಾಪಾರಿಗಳು ಪಡೆದುಕೊಳ್ಳುವ 10 ಲಕ್ಷ ರೂಪಾಯಿ ಸಾಲ ಮತ್ತು ಅವರು ಅಡಮಾನ ಮಾಡುವ ಸ್ವತ್ತುಗಳಿಗೆ ವಿಧಿಸಲಾಗುತ್ತಿದ್ದ ಸ್ಟಾಂಪ್ ಡ್ಯೂಟಿಯನ್ನು ರದ್ದು ಮಾಡಲಾಗಿದೆ. ಇದರಿಂದ ಎರಡು ಲಕ್ಷ ಬೀದಿ ಬದಿಯ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಆನಂತರ ನಜೀರ್ ಅಹಮ್ಮದ್, ಪ್ರಕಾಶ್ ರಾಥೋಡ್ ಸೇರಿದಂತೆ ಅನೇಕರು ಚರ್ಚೆಯಲ್ಲಿ ಭಾಗವಹಿಸಿದ್ದರು. ಧ್ವನಿಮತದ ಮೂಲಕ ವಿಧೇಯಕ ಅಂಗೀಕಾರಗೊಂಡಿತು.
Next Story





