21ನೇ ಶತಮಾನದ ಅತ್ಯುತ್ತಮ ಫಿಫಾ ಪಂದ್ಯಾಕೂಟವಾಗಿ ಹೊರಹೊಮ್ಮಿದ ಖತರ್ 2022

ದೋಹಾ/ಲಂಡನ್: ಬಿಬಿಸಿ ಸ್ಪೋರ್ಟ್ ಸಮೀಕ್ಷೆಯಲ್ಲಿ ಖತರ್ ನಲ್ಲಿ ನಡೆದ ಫಿಫಾ ವಿಶ್ವಕಪ್ ಈ ಶತಮಾನದ ಅತ್ಯುತ್ತಮ ಫಿಫಾ ಪಂದ್ಯಾಕೂಟವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಮೀಕ್ಷೆಯಲ್ಲಿ ಖತರ್ ವಿಶ್ವಕಪ್ ಗೆ 78% ಮತಗಳು ಲಭಿಸಿದ್ದು, ಕೇವಲ 6% ಮತಗಳನ್ನಷ್ಟೇ ಪಡೆದು 2002ರ ವಿಶ್ವಕಪ್ ಎರಡನೇ ಸ್ಥಾನ ಪಡೆದುಕೊಂಡಿದೆ. ಈ ಪಂದ್ಯಾಕೂಟವನ್ನು ಜಪಾನ್ ಹಾಗೂ ದಕ್ಷಿಣ ಕೊರಿಯಾ ಜಂಟಿಯಾಗಿ ಆಯೋಜಿಸಿತ್ತು.
2014 ರಲ್ಲಿ ಬ್ರೆಝಿಲ್ ನಡೆದ ಫಿಫಾ 5% ಮತಗಳಿಸಿ ಮೂರನೇ ಸ್ಥಾನದಲ್ಲಿದ್ದು, 2006 ಜರ್ಮನಿ ಮತ್ತು 2018 ರಲ್ಲಿ ರಶ್ಯದಲ್ಲಿ ನಡೆದ ಫಿಫಾಗೆ ತಲಾ 4% ಮತ ಸಿಕ್ಕಿದ್ದು ನಾಲ್ಕನೇ ಸ್ಥಾನದಲ್ಲಿದೆ. 2010 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಫಿಫಾ ಪಂದ್ಯಾಕೂಟಕ್ಕೆ 3% ಮತ ಲಭಿಸಿದೆ.

Next Story





