ಬೂಸ್ಟರ್ ಡೋಸ್ ಪಡೆದವರು ಮೂಗಿನ ಮೂಲಕ ನೀಡುವ ಲಸಿಕೆ ಪಡೆಯುವಂತಿಲ್ಲ
ಹೊಸದಿಲ್ಲಿ: ಈಗಾಗಲೇ ಕೋವಿಡ್-19 (Covid19) ಬೂಸ್ಟರ್ ಡೋಸ್ ಲಸಿಕೆ ಪಡೆದವರು, ಸರ್ಕಾರ ಹೊಸದಾಗಿ ಅನುಮೋದಿಸಿದ ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆ ಪಡೆಯುವಂತಿಲ್ಲ ಎಂಬ ಅಂಶವನ್ನು ದೇಶದ ಲಸಿಕಾ ಕಾರ್ಯಪಡೆ ಮುಖ್ಯಸ್ಥರು NDTVಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ಇನ್‍ಕೊವ್ಯಾಕ್ (iNCOVACC) ಲಸಿಕೆಯನ್ನು ಕಳೆದ ವಾರ ಕೋವಿನ್ ಪ್ಲಾಟ್‍ಫಾರಂನಲ್ಲಿ ಪರಿಚಯಿಸಲಾಗಿತ್ತು. "ಇದನ್ನು ಬೂಸ್ಟರ್ ಡೋಸ್ ಆಗಿ ಶಿಫಾರಸ್ಸು ಮಾಡಲಾಗಿದೆ. ಉದಾಹರಣೆಗೆ ಒಬ್ಬ ವ್ಯಕ್ತಿ ಈಗಾಗಲೇ ಮುಂಜಾಗ್ರತಾ ಡೋಸ್ ಪಡೆದಿದ್ದಲ್ಲಿ, ಮೂಗಿನ ಮೂಲಕ ನೀಡುವ ಡೋಸನ್ನು ಅವರಿಗೆ ಶಿಫಾರಸ್ಸು ಮಾಡಲಾಗದು. ಇದುವರೆಗೂ ಬೂಸ್ಟರ್ ಡೋಸ್ ಪಡೆಯದವರಿಗಾಗಿ ಈ ಡೋಸ್ ಇದೆ" ಎಂದು ಕಾರ್ಯಪಡೆ ಮುಖ್ಯಸ್ಥ ಡಾ.ಎನ್.ಕೆ.ಅರೋರಾ ಸ್ಪಷ್ಟಪಡಿಸಿದ್ದಾರೆ.
"ಲಸಿಕಾ ಕಾರ್ಯಕ್ರಮದ ಅಂಗವಾಗಿ ಕೋವಿನ್ ಪೋರ್ಟೆಲ್ ನಾಲ್ಕನೇ ಡೋಸ್ ಅನ್ನು ಸ್ವೀಕರಿಸುವುದಿಲ್ಲ. ಒಬ್ಬ ವ್ಯಕ್ತಿ ನಾಲ್ಕನೇ ಡೋಸ್ ಪಡೆಯಲು ಬಯಸುತ್ತಾರೆ ಎಂದುಕೊಳ್ಳೋಣ. ಆ್ಯಂಟಿಜಿನ್ ಸಿಂಕ್ ಎಂಬ ಒಂದು ಪರಿಕಲ್ಪನೆ ಇದೆ. ಒಬ್ಬ ವ್ಯಕ್ತಿಗೆ ಪದೇ ಪದೇ ನಿರ್ದಿಷ್ಟ ಬಗೆಯ ಆ್ಯಂಟಿಜಿನ್ ಪ್ರತಿರೋಧ ಲಸಿಕೆ ನೀಡಿದಲ್ಲಿ ದೇಹ ಅದಕ್ಕೆ ಸ್ಪಂದಿಸುವುದು ನಿಲ್ಲಿಸುತ್ತದೆ ಅಥವಾ ತೀರಾ ಕಳಪೆಯಾಗಿ ಸ್ಪಂದಿಸುತ್ತದೆ. ಆದ್ದರಿಂದ ಆರಂಭದಲ್ಲಿ ಎಂಆರ್ ಎನ್‍ಎ ಲಸಿಕೆಗಳನ್ನು ಆರು ತಿಂಗಳ ಅಂತರದಲ್ಲಿ ನೀಡಲಾಗಿತ್ತು. ಬಳಿಕ ಜನ ಮೂರು ತಿಂಗಳ ಅಂತರದಲ್ಲಿ ಪಡೆದಿದ್ದಾರೆ. ಆದರೆ ಅದು ಇಂಥ ಪ್ರಕರಣಗಳಲ್ಲಿ ಭಾರಿ ಪ್ರಯೋಜನವಾಗಿದೆ. ಆದ್ದರಿಂದ ತಕ್ಷಣಕ್ಕೆ ನಾಲ್ಕನೇ ಡೋಸ್ ಪಡೆಯುವುದರಲ್ಲಿ ಅರ್ಥವಿಲ್ಲ" ಎಂದು ವಿಶ್ಲೇಷಿಸಿದರು.
ಇದನ್ನೂ ಓದಿ: '2036ರ ಒಲಿಂಪಿಕ್ಸ್ ಬಿಡ್‍ಗೆ ಭಾರತ ಸಿದ್ಧ'