ಮಂಗಳೂರು: ರಾಜೇಶ್ ಶೆಟ್ಟಿ ದೋಟ ಅವರ 'ಮುಗದಾರೆಗೆ' ಕೃತಿ ಬಿಡುಗಡೆ

ಮಂಗಳೂರು, ಡಿ.28: ಸಾಹಿತ್ಯ ಬದುಕನ್ನು ಉನ್ನತೀಕರಿಸಲು ಸಹಕಾರಿಯಾಗಬೇಕು ಎಂದು ಸಾಹಿತಿ ಡಾ.ವಸಂತ ಕುಮಾರ್ ಪೆರ್ಲ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲ್ ಬ್ ನಲ್ಲಿಂದು ಅವರು ರಾಜೇಶ್ ಶೆಟ್ಟಿ ದೋಟ ಅವರ 'ಮುಗದಾರೆಗೆ' ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.
ತುಳುವಿನಲ್ಲಿ ಹಿಂದೆ ವೈಚಾರಿಕ, ಚಿಂತನೆಯ ಕೃತಿಗಳ ಸಂಖ್ಯೆ ಕಡಿಮೆ ಇತ್ತು. ಆದರೆ ಇತ್ತೀಚಿನನ ಒಂದು ದಶಕಗಳಿಂದ ತುಳುವಿನಲ್ಲೂ ಕನ್ನಡಕ್ಕೆ ಸರಿಸಮಾನವಾದ ಮೌಲ್ಯಯುತವಾದ ಕೃತಿಗಳು ಹೊರ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಕೃತಿಕಾರ ರಾಜೇಶ್ ಶೆಟ್ಟಿ ದೋಟ ಮಾತನಾಡಿ, 'ಮುಗದಾರೆಗೆ' ನನ್ನ ಎರಡನೇ ಕೃತಿಯಾಗಿದ್ದು, ತುಳು ಸಾಹಿತ್ಯಕ್ಕೆ ಸಣ್ಣ ಕೊಡುಗೆ ಎಂದರು.
ಕೃತಿಯ ಬಗ್ಗೆ ಮಾತನಾಡಿದ ಸಾಹಿತಿ ರಘು ಇಡ್ಕಿದು, ತುಳು ಭಾಷೆಯ ಬೆಳವಣಿಗೆಯು ಕನ್ನಡದ ರೀತಿಯಲ್ಲಿ ವಿವಿಧ ಪ್ರಾಕಾರಗಳ ಮೂಲಕ ವಿಸ್ತಾರವಾಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಜೇಶ್ ಶೆಟ್ಟಿ ದೋಟ ಅವರ ಕೃತಿ 'ಮುಗದಾರೆಗೆ' ಗಮನಾರ್ಹವಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಎಂ.ಆರ್.ಪಿ.ಎಲ್.ನ ಮಹಾಪ್ರಬಂಧಕ ವೀಣಾ ಟಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.







