ದಕ್ಷಿಣ ಆಫ್ರಿಕಾದ ಬೌಲರ್ ಗೆ ಢಿಕ್ಕಿ ಹೊಡೆದ ಕ್ಯಾಮರಾ: ಸ್ಪೈಡರ್ ಕ್ಯಾಮ್ ಆಪರೇಟರ್ ಗೆ ಗೇಟ್ ಪಾಸ್

ಮೆಲ್ಬೋರ್ನ್: ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎಂಸಿಜಿಯಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ನಿಂದ ಸ್ಪೈಡರ್ ಕ್ಯಾಮ್ ಆಪರೇಟರ್ ಗೆ ಗೇಟ್ ಪಾಸ್ ನೀಡಲಾಗಿದೆ. ಸ್ಪೈಡರ್ ಕ್ಯಾಮ್ ಆಪರೇಟರ್ ಎಂಸಿಜಿ ಟೆಸ್ಟ್ ನ 2ನೇ ದಿನದಾಟದಲ್ಲಿ ಕಾರ್ಯನಿರ್ವಹಿಸಿದ್ದರು.
ವೇಗವಾಗಿ ಚಲಿಸುವ ಸ್ಪೈಡರ್ ಕ್ಯಾಮರಾವು ಟೆಸ್ಟ್ ನ 2ನೇ ದಿನದಾಟದಲ್ಲಿ ಫೀಲ್ಡಿಂಗ್ ನಿರತರಾಗಿದ್ದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಅನ್ರಿಚ್ ನಾರ್ಟ್ಜೆ ಅವರಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಕೆಳಗೆ ಬೀಳಿಸಿದೆ.
ಈ ಘಟನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅಧಿಕೃತ ಪ್ರಸಾರಕರು ನಾರ್ಟ್ಜೆ ಹಾಗೂ ದಕ್ಷಿಣ ಆಫ್ರಿಕಾ ತಂಡದ ಕ್ಷಮೆಯಾಚಿಸಿದ್ದಾರೆ.
ಕ್ಯಾಮರಾವು ನನ್ನ ಬಲ ಭುಜ ಹಾಗೂ ಮೊಣಕೈಗೆ ಢಿಕ್ಕಿ ಹೊಡೆದಿದ್ದರೂ ನಾನೀಗ ಚೆನ್ನಾಗಿದ್ದೇನೆ ಎಂದು ನಾರ್ಟ್ಜೆ ಖಚಿತಪಡಿಸಿದ್ದಾರೆ.
ಇದು ಅಪರೇಟರ್ ನಿಂದ ಆಗಿರುವ ಪ್ರಮಾದವಾಗಿದ್ದು, ಈ ತಪ್ಪಿಗೆ ಕ್ಷಮೆಯಾಚಿಸುತ್ತೇನೆ ಎಂದು ಅಧಿಕೃತ ಪ್ರಸಾರಕ ಫಾಕ್ಸ್ ಸ್ಪೋಟ್ಸ್ ತಿಳಿಸಿದೆ.
Who said cricket isn’t a contact sport?
— The Sage (@SarkySage) December 27, 2022
South African player Anrich Nortje hit by the aerial camera at the #BoxingDayTest
Meanwhile Warner has his century & Australia only two wickets down and 2 runs away from SA’s first innings total (Warner on 115 & Smith on 39) pic.twitter.com/ZafPYIJPue







