ಮಂಗಳೂರು ಧರ್ಮಕ್ಷೇತ್ರದಿಂದ ‘ಬಂಧುತ್ವ ಕ್ರಿಸ್‌ಮಸ್’ ಆಚರಣೆ
ಮಂಗಳೂರು: ಕ್ರಿಸ್‌ಮಸ್ ಅಂದರೆ ಶಾಂತಿಯ ಸಂಭ್ರಮ. ಕ್ರಿಸ್ತನ ಜನನವು ಜಗತ್ತಿಗೆ ಶಾಂತಿಯನ್ನು ತಂದಿದೆ. ಪ್ರಪಂಚದಾದ್ಯಂತ ಕ್ರೈಸ್ತರು ತಮ್ಮ ಜೀವನದಲ್ಲಿ ಶಾಂತಿ, ಸಹನೆ, ತ್ಯಾಗವನ್ನು ಪ್ರತಿಪಾದಿಸುತ್ತಾರೆ. ಈ ಜಗತ್ತನ್ನು ಬದುಕಲು ಉತ್ತಮ ಸ್ಥಳವನ್ನಾಗಿ ಮಾಡುತ್ತಾರೆ. ಬದುಕು ಮತ್ತು ಬದುಕಲು ಬಿಡು ಎಂಬ ಧ್ಯೇಯವಾಕ್ಯದಿಂದ ಕ್ರಿಶ್ಚಿಯನ್ ಸಮುದಾಯ ಎಲ್ಲೆಡೆ ಶಾಂತಿಯನ್ನು ನೆಲೆಸುವಂತೆ ಮಾಡಿದೆ ಎಂದು ಮಂಗಳೂರು ನಗರದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.
ಮಂಗಳೂರು ಧರ್ಮಕ್ಷೇತ್ರದ ವತಿಯಿಂದ ನಗರದ ಫಾದರ್ ಮುಲ್ಲರ್ ಸಂಸ್ಥೆಯಲ್ಲಿ ಬುಧವಾರ ನಡೆದ ‘ಬಂಧುತ್ವ ಕ್ರಿಸ್‌ಮಸ್ ಆಚರಣೆಯ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಮಂಗಳೂರು ಬಿಷಪ್ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ, ಮಾಜಿ ಶಾಸಕರಾದ ಜೆ.ಆರ್ ಲೋಬೊ, ಐವನ್ ಡಿಸೋಜ, ಮಾಜಿ ಸಚಿವ ರಮಾನಾಥ್ ರೈ, ಕಾರ್ಪೊರೇಟರ್ ನವೀನ್ ಡಿಸೋಜ, ನಿಟ್ಟೆ ವಿವಿ ಉಪ ಕುಲಪತಿ ಡಾ. ಸತೀಶ್ ಭಂಡಾರಿ, ಯೆನೆಪೊಯ ವಿವಿ ಕುಲಪತಿ ಡಾ.ಜಯ್‌ಕುಮಾರ್, ಡಾ.ಭಾಸ್ಕರ ಶೆಟ್ಟಿ, ಡಾ. ಶಾಂತಾರಾಮ ಶೆಟ್ಟಿ, ಡಾ.ಯೂಸುಫ್ ಕುಂಬ್ಳೆ ಮತ್ತಿತರರು ಭಾಗವಹಿಸಿದ್ದರು.
ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ತಲಿನೋ ಸ್ವಾಗತಿಸಿದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಸಂಚಾಲಕ ವಂ.ರಿಚರ್ಡ್ ಕುವೆಲ್ಹೊ ವಂದಿಸಿದರು. ಡಾ.ರಿತೇಶ್ ಡಿಕುನ್ಹಾ ಮತ್ತು ಡಾ. ಶಾನನ್ ಫೆನಾರ್ಂಡಿಸ್ ಕಾರ್ಯಕ್ರಮ ನಿರೂಪಿಸಿದರು.







